{"product_id":"hokkula-balliya-sambandha-articles-shatavadhani-r-ganesh-kannada-book","title":"ಹೊಕ್ಕುಳ ಬಳ್ಳಿಯ ಸಂಬಂಧ'","description":"\u003cp\u003eಬಹುಭಾಷಾಪ್ರೌಡಿಮೆ. ನನ್ನ ಅತ್ಮೀಯಮಿತ್ರರಾದ ಶತಾವಧಾನಿ ಡಾ. ಆರ್. ಗಣೇಶ್ ಅಸಾಮಾನ್ಯವೈದುಷ್ಯ, ವಿವಿಧಶಾಸ್ತ್ರಪರಿಣತಿ, ಅವಧಾನಸಾಧನೌನ್ನತ್ಯ - ಇವೆಲ್ಲ ಈಗಾಗಲೇ ವಿಶ್ರುತವಾಗಿವೆ. ಅವರ ಈ ಸಾಧನೆಯ ಆಗಾಧತೆ ವಿಸ್ಮಯಾವಹವಾಗಿದ್ದು, ಇದನ್ನು ವಿದ್ವಲ್ಲೋಕದ ಅದ್ಭುತವೆಂದೇ ಪರಿಗಣಿಸಬೇಕಾಗಿದೆ. ಇದರಷ್ಟೇ ಗಮನ ಸೆಳೆಯುವುದು ಅವರ ಸಮಾಜಾಭಿಮುಖತೆ. ವಶಕಗಳ ಪರಿಶ್ರಮದಿಂದಲೂ ವಿದ್ವಜ್ಜನರ ಸಂಶ್ರಯದಿಂದಲೂ ಗಳಿಸಿಕೊಂಡ ಪಾಂಡಿತ್ಯವನ್ನು ಅವರು ಸಮಾಜದಲ್ಲಿ ಸಂಸ್ಕೃತಿ ಪ್ರಜ್ಞೆಯನ್ನು ಉತ್ತೇಜಿಸುವುದಕ್ಕಾಗಿಯೂ ಸಾಹಿತ್ಯ-ಕಲಾದಿಕ್ಷೇತ್ರಗಳ ದುಷ್ಟವೃತ್ತಿಗಳ ಖಂಡನೆಗಾಗಿಯೂ ಋಜುಮೌಲ್ಯಗಳ ಪ್ರವರ್ತನೆಗಾಗಿಯೂ ವಿನಿಯೋಗಿಸುತ್ತ ಬಂದಿದ್ದಾರೆ.\u003c\/p\u003e\n\u003cp\u003eಪ್ರಕೃತಗ್ರಂಥವಾದರೂ ಗಣೇಶ್ ಅವರ ಈ ಸಾಂಸ್ಕೃತಿಕಾಭಿಯಾನದ ಅಂಗವೇ ಆಗಿದೆ. ಮೇಲ್ನೋಟಕ್ಕೆ ಇದು ವಿವಿಧವಿಷಯಗಳ ವೀಥೀವಿಹಾರ, ಒಳಹೂಕ್ಕಾಗ ಈ ಬರೆಹಗಳ ಉದ್ದಕ್ಕೂ ಕಾಣುವುದು ನಮ್ಮ ಸಂಸ್ಕೃತಿಯ ಬೇರುಗಳ ಸಾರವಂತಿಕೆಯ ಅತ್ಮೀಕ್ಷಣ. ಇಲ್ಲಿ ಸಂಪ್ರದಾಯಪಕ್ಷಪಾತವುಂಟು; ಆದರೆ ಸಂಪ್ರದಾಯಜಡತೆ ಇಲ್ಲ.\u003c\/p\u003e\n\u003cp\u003eಇಲ್ಲಿಯ ಬರೆಹಗಳಲ್ಲಿ ಎದ್ದುತೋರುವುದು ಆರೋಗ್ಯಪೂರ್ಣವಾದ ಜೀವನದೃಷ್ಟಿಯಿಂದ ಚೋದಿತವಾದ ಸಮಾಜಾವಲೋಕನ, ತನುಗುಣವಾದ ಮಾಹಿತಿ, ಸಮೃದ್ಧವಾದ ಸಾಹಿತ್ಯೋಲ್ಲೇಖಗಳ ಮಾಧ್ಯಮದಿಂದ ಸಂಸ್ಕೃತಿಯ ಪರ್ಯವೇಕ್ಷಣ. ಶ್ರೇಷ್ಠಸಾಹಿತ್ಯವಾಗಷ್ಟೇ ಓದಿದರೂ ಈ ಬರೆಹಗಳು ಆಸ್ವಾದನೀಯವೇ. ಆದರೆ ಅದಕ್ಕೂ ಮಿಗಿಲಾಗಿ ಸಮಾಸ್ವಾದ್ಯವಾಗುವುದು ಈ ಬರೆಹಗಳಲ್ಲಿ ಹೊಮ್ಮಿರುವ ಜೀವನದರ್ಶನ.\u003c\/p\u003e\n\u003cp\u003eಡಾ. ಎಸ್.ಆರ್. ರಾಮಸ್ವಾಮಿ\u003c\/p\u003e\n\u003cp\u003e(\"ಹೊಕ್ಕುಳಬಳ್ಳಿಯ ಸಂಬಂಧ'ದ ಮುನ್ನುಡಿಯಿಂದ)\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684340842755,"sku":"HB00005503217","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Hokkulaballiyasambandhafp_f80d9795-99a2-48b8-a3f4-e9bad02d7887.jpg?v=1769442716","url":"https:\/\/harivubooks.com\/products\/hokkula-balliya-sambandha-articles-shatavadhani-r-ganesh-kannada-book","provider":"Harivu Books","version":"1.0","type":"link"}