{"product_id":"heli-hogu-karana-novel-ravi-belagere-kannada-book","title":"ಹೇಳಿ ಹೋಗು ಕಾರಣ","description":"\u003cp\u003eಕೆಲವು ಲಕ್ಷ ಜನ ಹುಡುಗರು ತಮ್ಮನ್ನು ತಾವು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ-ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು. ನಾಚಿಕೊಂಡರು. ನನ್ನನ್ನು ಸಣ್ಣಗೆ ಗದರಿಕೊಂಡರು. ಪತ್ರಿಕೆಯಲ್ಲಿ ವಾರ ಧಾರವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್. ಅವನಿಗೆ ಪ್ರಾರ್ಥನಾ ಸಿಗೋ ಹಂಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ ?\u003c\/p\u003e\n\u003cp\u003eನಿಜಕ್ಕೂ ಪ್ರಾರ್ಥನಾಳಷ್ಟು ನಿರ್ದಯಿ ಹುಡುಗೀರಿದ್ದಾರಾ?' ಅಂತ ಕೇಳಿದ ಹುಡುಗಿಯರು ಎಷ್ಟು ಜನವೋ?\u003c\/p\u003e\n\u003cp\u003e'ಬೇಗ ಈ ಧಾರಾವಾಹಿಯನ್ನು ಪುಸ್ತಕವನ್ನಾಗಿ ಪ್ರಕಟಿಸಿ: ಕೈಕೊಟ್ಟು ಹೋದ ನನ್ನ ಹುಡುಗಿಗೆ ಇದನ್ನ ತಲುಪಿಸಬೇಕಿದೆ' ಅಂದವರೂ ಇದ್ದಾರೆ.\u003c\/p\u003e\n\u003cp\u003eಇದು ಪ್ರೇಮ ಪುಸ್ತಕವಾ ?\u003c\/p\u003e\n\u003cp\u003eನೊಂದ ಮನದ ನಿಡುಸುಯ್ಯುವಿಕೆಯಾ ?\u003c\/p\u003e\n\u003cp\u003e-ರವಿ ಬೆಳಗೆರೆ\u003c\/p\u003e","brand":"Ravi Belagere","offers":[{"title":"Default Title","offer_id":47725710704899,"sku":"HB00006226","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4162.jpg?v=1636357118","url":"https:\/\/harivubooks.com\/products\/heli-hogu-karana-novel-ravi-belagere-kannada-book","provider":"Harivu Books","version":"1.0","type":"link"}