{"product_id":"hasiru-haadiya-krushikaru","title":"ಹಸಿರು ಹಾದಿಯ ಕೃಷಿಕರು","description":"\u003cp\u003eದಿನಬೆಳಗಾದರೆ ಪತ್ರಿಕೆಗಳಲ್ಲಿ \"ಯಾರೋ ಅಷ್ಟು ಲಕ್ಷ ಕಳೆದುಕೊಂಡರು, ಇಷ್ಟು ಕೋಟಿ ಕಳೆದುಕೊಂಡರು,\" ಎಂಬ ಸುದ್ದಿ ಓದಿ ನಮಗೆ ಆಶ್ಚರ್ಯವಾಗುತ್ತದೆ. \"ಛೇ! ಇದು ಹೇಗೆ ಸಾಧ್ಯ?\" ಎಂದು ಹುಬ್ಬೇರಿಸುತ್ತೇವೆ. 'ನಾನಂತೂ ಈ ಬಲೆಯಲ್ಲಿ ಬೀಳಲ್ಲಪ್ಪ' ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ.\u003c\/p\u003e\n\u003cp\u003eಆದರೆ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬೆಚ್ಚಿಬೀಳಿಸುವ ಸತ್ಯವೊಂದು ಎದುರಾಗುತ್ತದೆ. ಇಲ್ಲಿ ವಂಚನೆಗೆ ಒಳಗಾದ ಯಾರೂ ದಡ್ಡರಲ್ಲ; ಇವರಲ್ಲಿ ಅನೇಕರು ಸಾಫ್ಟ್ವೇರ್ ಎಂಜಿನಿಯರ್ಗಳು, ಬ್ಯಾಂಕ್ ಮ್ಯಾನೇಜರ್ಗಳು ಅಥವಾ ನಿವೃತ್ತ ಅಧಿಕಾರಿಗಳು!\u003c\/p\u003e\n\u003cp\u003eಹೋಗಲಿ, ಆ ಕಡೆ ಫೋನಿನಲ್ಲಿರುವ ವಂಚಕ ಇವರಿಗಿಂತ ಬುದ್ಧಿವಂತನೇ? ಅದೂ ಇಲ್ಲ. ಅವನಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಸಹ ಬರುತ್ತಿರುವುದಿಲ್ಲ. ಆದರೂ ತನಗಿಂತ ಹೆಚ್ಚು ತಿಳಿದವರನ್ನು ಖೆಡ್ಡಾಗೆ ಕೆಡವುತ್ತಾನಲ್ಲ, ಹೇಗೆ?\u003c\/p\u003e\n\u003cp\u003eಇದಕ್ಕೆ ಉತ್ತರ ನಿಮ್ಮ 'ಬುದ್ಧಿವಂತಿಕೆ'ಯಲ್ಲಿ ಇಲ್ಲ; ಅದು ಆ ಕ್ಷಣದ ನಿಮ್ಮ 'ಮನೋಸ್ಥಿತಿ'ಯಲ್ಲಿದೆ. ವಂಚಕರು ಹ್ಯಾಕ್ ಮಾಡುವುದು ನಿಮ್ಮ ಫೋನನ್ನಲ್ಲ, ನಿಮ್ಮ ಮೆದುಳನ್ನು, ಚೆನ್ನಾಗಿ, ಜವಾಬ್ದಾರಿಯಿಂದ ಡೈವಿಂಗ್ ಮಾಡುವವನೂ ಸಹ ಕೆಲವೊಮ್ಮೆ ಯಾಮಾರಿ ಅಪಘಾತ ಮಾಡಿಕೊಂಡಂತೆ.\u003c\/p\u003e\n\u003cp\u003eಈ ನಿಟ್ಟಿನಲ್ಲಿ ನೀವು ಸದಾ ಜಾಗೃತರಾಗಿರಲು, ನಿಮ್ಮ ಸುಪ್ತಪ್ರಜ್ಞೆಯನ್ನು ತರಬೇತಿಗೊಳಿಸಲು ಸ್ವಲ್ಪ ವಿಜ್ಞಾನ, ಸ್ವಲ್ಪ ಮನೋವಿಜ್ಞಾನ, ಸ್ವಲ್ಪ ತತ್ವಜ್ಞಾನ, ಸ್ವಲ್ಪ ತಂತ್ರಜ್ಞಾನ, ಅದರೊಂದಿಗೆ ತುಸು ಕಾನೂನಿನ ಅರಿವು-ಹೀಗೆ ಸುರಕ್ಷಿತ ಬದುಕಿಗೆ ಬೇಕಾದ ಎಲ್ಲವನ್ನೂ ಒಳಗೊಂಡ ಒಂದು ಪುಟ್ಟ ಕೈಪಿಡಿ ಈ ಪುಸ್ತಕ.\u003c\/p\u003e","brand":"Dr. Sukanya Soonagahalli","offers":[{"title":"Default Title","offer_id":47719542489347,"sku":"HB00006084","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HasiruHaadiyaKrushikaru_FP_b0e56adf-b77b-4cde-a00b-2f3d7f472f92.jpg?v=1770459647","url":"https:\/\/harivubooks.com\/products\/hasiru-haadiya-krushikaru","provider":"Harivu Books","version":"1.0","type":"link"}