H. Dundiraj
Publisher - ಅಂಕಿತ ಪುಸ್ತಕ
Regular price
Rs. 175.00
Regular price
Sale price
Rs. 175.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಪ್ರೀತಿ ಮಾಡುವುದು ಮತ್ತು ಕವನ ಬರೆಯುವುದು ನಾವೇ ಕಲಿತುಕೊಳ್ಳಬೇಕಾದ ವಿದ್ಯೆ ಎಂದು ನನ್ನ ಭಾವನೆ. ಆದ್ದರಿಂದಲೇ ನಾನೊಮ್ಮೆ ಹೀಗೊಂದು ಹನಿಗವನ ಬರೆದಿದ್ದೆ. ಪ್ರೀತಿಸುವುದು ಹೇಗೆ ಎಂದು ಕಲಿಸಬೇಕಿಲ್ಲ ಯಾರೂ ಲವ್ ವಿಷಯದಲ್ಲಿ ನಾವೆಲ್ಲರೂ ಏಕ ಲವ್ಯರು! ಹಾಗಾದರೆ ಈಪುಸ್ತಕ ಏಕೆ ಅನ್ನುವಿರಾ? ಅದನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: 1. ಹನಿಗವನ ಬರೆಯಲು ಆಸಕ್ತಿ ಇರುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವ ಹೊಸಕವಿಗಳಿಗೆ ಉಪಯೋಗವಾಗುವಂಥ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು. 2. ಬರೆಯುವವರಿಗೆ ಮಾತ್ರವಲ್ಲದೆ ಹನಿಗವನಗಳ ಓದುಗರಿಗೆ ಅವುಗಳ ಸ್ವಾರಸ್ಯವನ್ನು ಇನ್ನಷ್ಟು ಚೆನ್ನಾಗಿ ಆಸ್ವಾದಿಸಲು ಅನುಕೂಲವಾಗುವಂಥ ಸಂಗತಿಗಳನ್ನು ಚರ್ಚಿಸುವುದು. 3. ಹನಿಗವನಗಳ ಬಗ್ಗೆ ಮಾತನಾಡುವವರಿಗೆ ಮತ್ತು ಲೇಖನ ಬರೆಯುವವರಿಗೆ ಅಗತ್ಯವಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವುದು. ಇದೊಂದು ಅಕಡೆಮಿಕ್ ಶೈಲಿಯ ಪಾಂಡಿತ್ಯಪೂರ್ಣಗ್ರಂಥವಾಗದೆ, ಎಲ್ಲರೂ ಆಸಕ್ತಿಯಿಂದ ಓದಿ ಸುಲಭವಾಗಿ ಅರ್ಥಮಾಡಿಕೊಳ್ಳುವ ಪುಸ್ತಕವಾಗಬೇಕೆಂಬ ದೃಷ್ಟಿಯಿಂದ ಈ ಕೃತಿಯನ್ನು ರಚಿಸಿರುವೆ. ಹೇಳಬೇಕಾದ ವಿಷಯಗಳನ್ನು ನನಗೆ ಸೂಕ್ತವೆನ್ನಿಸಿದ -ಹನಿಗವನಗಳನ್ನು ಉಲ್ಲೇಖಿಸುವ ಮೂಲಕ ಹೇಳಿದ್ದೇನೆ. ಈ ಕೃತಿಯಲ್ಲಿ ಅಂದಿನ ಹಾಗೂ ಇಂದಿನ 75ಕ್ಕೂ ಹೆಚ್ಚು ಕವಿಗಳು ರಚಿಸಿದ 278ಕ್ಕೂ ಅಧಿಕ ಹನಿಗವನಗಳು ಒಂದೆಡೆ ದೊರೆಯುತ್ತವೆ. ಇವುಗಳನ್ನು ಓದುವುದರಿಂದ ಕಾವ್ಯ ಪ್ರಿಯರಿಗೆ ಸಿಗುವ ಆನಂದ ಈ ಕೃತಿಯ ಬೈಪ್ರಾಡಕ್ಟ್ ಅನ್ನಬಹುದು! ಹನಿಗವನಗಳನ್ನು ಕುರಿತ ಪುಸ್ತಕ ಮಹಾಕಾವ್ಯ ಅಥವಾ ಕಾದಂಬರಿಯಷ್ಟು ಭಾರವಾಗಬಾರದು ಎಂದು ವಿಷಯಗಳನ್ನು ಆದಷ್ಟು ಚುಟುಕಾಗಿ ಹೇಳಿದ್ದೇನೆ. ಇದು ಹನಿಗವನಗಳಿಗೊಂದು ಮಿನಿ ಕೈಪಿಡಿ!
ಎಚ್. ಡುಂಡಿರಾಜ್
ಎಚ್. ಡುಂಡಿರಾಜ್
