{"product_id":"hanaadi-novel-kapil-p-hanmabaade-kannada-book","title":"ಹಾಣಾದಿ","description":"'ಹಾಣಾದಿ' ಕಾದಂಬರಿ ತನ್ನ ಕಥಾವಸ್ತು ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ 'ಗಾರುಡಿ ವಾಸ್ತವತೆ' ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಭುತ ಕಥೆಗಳಲ್ಲಿನಂತೆ ಗುಬ್ಬಿ ಆಯಿ ಎಂಬ ಅಡಗೂಳಜ್ಜಿ ಇದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೇಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ, ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕಥಾನಾಯಕ ಭೂತಕಾಲದ ನೆನಪುಗಳ ಆಶ್ರಿತ. ಈ ನೆನಪುಗಳು ಮತ್ತೆ ಮತ್ತೆ ಬಾಲ್ಯಕ್ಕೆಳೆದು ಸಿಹಿಕಹಿಯನ್ನು ಉಣಬಡಿಸುತ್ತದೆ. ಗುಬ್ಬಿ ಆಯಿ, ಒಮ್ಮೆ ಸಾಕ್ಷಿಯಾದರೆ, ಮಗದೊಮ್ಮೆ ದುರಂತಗಳಲ್ಲಿ ಭಾಗಿ. ಕಾದಂಬರಿಯಲ್ಲಿ, ಅಪ್ಪ, ಪುಟ್ಟ ಬಾಲಕಿ, ಅಡವಿ, ಗುಡ್ಡ, ಹೊಲ, ಹಳ್ಳಿಯ ಉಳಿದ ಪಾತ್ರಗಳಂತೆಯೇ ಬಾದಾಮಿ ಮರ ಕೂಡ ಪ್ರಮುಖ ಪಾತ್ರ. ಮಾತ್ರವಲ್ಲ, ಆ ಹಳ್ಳಿಯಲ್ಲಿ ನಡೆಯುವ ಎಲ್ಲ ದುರಂತಗಳಿಗೆ ಸಾಕ್ಷಿಯಾಗಿ ಕೊನೆಗೆ ಗುರುತು ಕೂಡ ಉಳಿಸದೆ ಮರೆಯಾಗುವ ಪ್ರತಿಮೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕನ ಕಾರಣದಿಂದ ಗಮನ ಸೆಳೆವ ಕೃತಿಯೆಂದು ಹೇಳಿದೆ. ಇನ್ನೂ ವಿದ್ಯಾರ್ಥಿಯಾಗಿರುವ ಇಪ್ಪತ್ತರ ಆಸುಪಾಸಿನ ಕಪಿಲ ಹುಮನಾಬಾದ ಕಾದಂಬರಿ ರಚನೆಯಲ್ಲಿ ತೋರಿರುವ ಶ್ರದ್ಧೆ, ತಂತ್ರ, ಆಯ್ದುಕೊಂಡ ಕಥಾವಸ್ತು ಮತ್ತು ಅದನ್ನು ನಿಭಾಯಿಸಿರುವ ದೃಷ್ಟಿಯಿಂದ ಅಭಿನಂದನೆಗೆ ಅರ್ಹರು. ಸಾಗಬೇಕಾದ ದಾರಿ ದೂರವಿರಬಹುದು. ಆದರೆ, ಅವರ ಮೊದಲ ಹೆಜ್ಜೆ ಅಳೆದು-ತೂಗಿ, ವಿಚಾರಿಸಿ ಇಟ್ಟಿರುವಂಥದ್ದು. ಹಾಗೆಂದೇ, ತನ್ನ ಸೀಮಿತಾರ್ಥದಲ್ಲಿ ಹಾಣಾದಿ ಒಂದು ಯಶಸ್ವಿ ಕಾದಂಬರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಕ್ರಮ-ಬೇತಾಳ ಕಥೆಯ ಅಂತ್ಯವನ್ನು ನಾವೆಲ್ಲ ಬಲ್ಲೆವು. ಹಾಣಾದಿ ಕೃತಿಯ ಅಂತ್ಯವನ್ನು ಓದಿಯೇ ಅರಿತುಕೊಳ್ಳಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಕೇಶವ ಮಳಗಿ\u003cbr data-mce-fragment=\"1\"\u003e","brand":"Kapila. P. Humanabaade","offers":[{"title":"Default Title","offer_id":43540603863299,"sku":"HB00003711","price":130.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-23at4.49.52PM.jpg?v=1769167985","url":"https:\/\/harivubooks.com\/products\/hanaadi-novel-kapil-p-hanmabaade-kannada-book","provider":"Harivu Books","version":"1.0","type":"link"}