{"product_id":"haasyamoorty-fall-staff-plays-kannada-books","title":"ಹಾಸ್ಯಮೂರ್ತಿ ಫಾಲ್ ಸ್ಟಾಫ್","description":"ಇದು ನಾನು ಷೇಕ್ಸ್‌ಪಿಯ‌ರ್ ಮಹಾಕವಿಯ ನಾಟಕಗಳಿಂದ ಆರಿಸಿ, ಭಾಷಾಂತರಿಸಿರುವ ದೃಶ್ಯಗಳ ಎರಡನೆಯ ಪುಸ್ತಕ, ಇದರಲ್ಲಿ ಹೆನ್ರಿ IV, ಹೆನ್ರಿ V ನಾಟಕಗಳಲ್ಲಿಯ ಫಾಲ್‌ ಸ್ಟಾಫ್ ದೃಶ್ಯಗಳ ಬಹುಭಾಗವನ್ನು ತಂದಿದೆ. The Merry Wives of Windsor (ವಿಂಡ್ಕರ್ ಆಟಕಾತಿ ಗರತಿಯರು) ನಾಟಕದಲ್ಲಿ ಫಾಲ್‌ಸ್ಟಾಫ್ ಪ್ರಣಯದಲ್ಲಿ ಪರಾಭವವನ್ನುಂಡದ್ದರ ಚಿತ್ರ ಇದೆ - ಇದು ಒಂದು ಕೃತಕ ಚಿತ್ರ: ಇದರ ಫಾಲ್‌ಸ್ಟಾಫ್ ಬೇರೊಬ್ಬ ಫಾಲ್‌ಸ್ಟಾಪ್. ಅದನ್ನು ಈ ಪುಸ್ತಕದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಫಾಲ್‌ಸ್ಟಾಫ್ ವಿಷಯವಾಗಿ ಪ್ರಸ್ತಾವನೆಯ ರೂಪದ ಒಂದು ಲೇಖನವನ್ನು ನಮ್ಮ ಆಂಗ್ಲ ಸಾಹಿತ್ಯ ವಿದ್ವಾಂಸರೊಬ್ಬರಿಂದ ಬರೆಸೋಣ' ಎಂದು ಆಸೆಯಾಗಿ ನಾನು ಶ್ರೀ ಎಲ್.ಎಸ್. ಶೇಷಗಿರಿರಾಯರನ್ನು ಬೇಡಿದೆನು. ಅವರು ವಿಶ್ವಾಸದಿಂದ ಒಪ್ಪಿ ಸುಂದರವಾದ ಒಂದು ಲೇಖನವನ್ನು ಒದಗಿಸಿದ್ದಾರೆ. ಅದನ್ನು ಈ ಪುಸ್ತಕದಲ್ಲಿ ಸೇರಿಸಿದೆ. ಈ ಉಪಕಾರಕ್ಕಾಗಿ ನಾನು ಶ್ರೀಯುತರಿಗೆ ವಂದನೆ ಸಲ್ಲಿಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾಷಾಂತರದ ಕ್ರಮ ತಿಳಿಯಲಿ ಎಂದು, ಕವಿಯ ವಾಕ್ಯಗಳ ಭಾವ ವಿಶದವಾಗಲಿ ಎಂದು, ಈ ಮೊದಲ ನಾಲ್ಕು, ಪುಸ್ತಕಗಳಲ್ಲಿ ಟಿಪ್ಪಣಿಗಳನ್ನು ಕೊಟ್ಟಿತ್ತು. ಈ ಪುಸ್ತಕದಲ್ಲಿ ಅವುಗಳ ಕ್ರಮವನ್ನೇ ಅನುಸರಿಸಿದೆಯಾಗಿ, ಟಿಪ್ಪಣಿಗಳು ಅನವಶ್ಯಕ ಎಂದು ತೋರಿ ಅವನ್ನು ಬಿಟ್ಟಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಮಾಸ್ತಿ ವೆಂಕಟೇಶ ಅಯ್ಯಂಗಾರ್","brand":"Maasti Venkatesha Iyyangar","offers":[{"title":"Default Title","offer_id":43618772844803,"sku":"HB00003835","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_d1775e20-3bbd-4cd5-adc8-c18bde04a3c5.jpg?v=1671718524","url":"https:\/\/harivubooks.com\/products\/haasyamoorty-fall-staff-plays-kannada-books","provider":"Harivu Books","version":"1.0","type":"link"}