{"product_id":"gundigeya-bisirakta-essays-keshava-malagi-kannada-book","title":"ಗುಂಡಿಗೆಯ ಬಿಸಿ ರಕ್ತ","description":"\u003cp\u003eಇದೊಂದು ಸಾಂಸ್ಕೃತಿಕ ಸಂಕಥನ, ಭಾಷೆ, ಸಾಹಿತ್ಯ, ಸಮಾಜ, ರಾಜಕಾರಣ, ಜೀವಪರಿಸರ, ಸಾಮುದಾಯಿಕ ದಾರ್ಶನಿಕತೆ, ಲಿಂಗ-ಸಂವೇದನೆ ಹಾಗೂ ಸಿದ್ಧಾಂತಗಳು ಹೇಗೆ ಬಹುತ್ವದ ಸಂಸ್ಕೃತಿಗಳನ್ನು ಕಟ್ಟುತ್ತವೆ ಎಂಬುದನ್ನು ಶೋಧಿಸುವ ಕೃತಿ.\u003c\/p\u003e\n\u003cp\u003eಆಧುನಿಕತೆ ಮತ್ತು ಶಿಷ್ಟ ಪರಂಪರೆ ಮಾತ್ರ ಜ್ಞಾನವನ್ನು ಸೃಷ್ಟಿಸುವ ಆಕರಗಳು ಎಂಬ ಹುಸಿ ನಂಬಿಕೆಯನ್ನು ವಿಸರ್ಜಿಸಿ ಮೌಖಿಕ ಪರಂಪರೆಯ ದಾರ್ಶನಿಕತೆಯನ್ನು ನಮ್ಮದಾಗಿಸಿಕೊಳ್ಳುವ ಮುಕ್ತತೆಯನ್ನು ತೋರಬೇಕು. ಮೌಖಿಕ ಪರಂಪರೆಯ ಬಹು ಬಗೆಯ 'ಹೊರಸುರಿ'ಗಳನ್ನು ಸಾಮುದಾಯಿಕ ಕಲಾಪ್ರಜ್ಞೆ ರೂಪಿಸಿದ ದಾರ್ಶನಿಕತೆಯೆಂದು ಒಪ್ಪಿಕೊಳ್ಳಬೇಕು, ಎಂಬ ಪ್ರಸ್ತಾವನೆಗಳನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಮೌಖಿಕ ಪರಂಪರೆಯ ಪ್ರಕಾರಗಳಿಂದ ಹೇಗೆ ಜಾನಪದ ಮೀಮಾಂಸೆಯನ್ನು ಕಟ್ಟಬಹುದು ಎಂಬುದನ್ನು ಎತ್ತಿ ತೋರಿಸುವ ಬರಹಗಳು ಇಲ್ಲಿವೆ. ಹಾಗಾದಾಗ ಮಾತ್ರ ಜಾನಪದವನ್ನು ಕೇವಲ ಒಂದು ಅಧ್ಯಯನದ ವಿಷಯವಾಗಿ, ಆಕರಮೂಲವಾಗಿ, 'ಪಳಮೆ'ಯಾಗಿ ನೋಡುವ ವಿಧಾನಗಳು ಬದಲಾಗಿ ಹೊಸ ಮೀಮಾಂಸೆಗಳು ಹುಟ್ಟಬಲ್ಲವು\u003c\/p\u003e","brand":"Keshava Malagi","offers":[{"title":"Default Title","offer_id":47479232758019,"sku":"HB00005482","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/gundigeyabesirakta.jpg?v=1764156649","url":"https:\/\/harivubooks.com\/products\/gundigeya-bisirakta-essays-keshava-malagi-kannada-book","provider":"Harivu Books","version":"1.0","type":"link"}