{"product_id":"gulamagiriya-aa-hanneradu-varshagalu-autobiography-d-n-srinath-kannada-book","title":"ಗುಲಾಮಗಿರಿಯ ಆ ಹನ್ನೆರಡು ವರ್ಷಗಳು","description":"\u003cp\u003eಇದೊಂದು ಅಮೆರಿಕಾದ ಅಶ್ವೇತ ಸೋಲೋಮನ್ ನಾರ್ಥಪ್ನ ಎದೆ ನಡುಗಿಸುವಂಥ ನೆನಪಿನ ಮಾಲೆ.\u003c\/p\u003e\n\u003cp\u003eಸೋಲೋಮನ್ ವಾಶಿಂಗ್ಟನ್ ನಲ್ಲಿ ವಾಸಿಸುತ್ತಿದ್ದ ಒಬ್ಬ ಸ್ವತಂತ್ರ ನಾಗರಿಕರಾಗಿದ್ದರು. ಸುಮಾರು 175 ವರ್ಷಗಳ ಹಿಂದೆ ಅವರನ್ನು ಅಪಹರಿಸಿ, ದಾಸ-ಪದ್ಧತಿಯುಳ್ಳ ದಕ್ಷಿಣ ಪ್ರದೇಶಕ್ಕೆ ಮಾರಲಾಗಿತ್ತು. ಹನ್ನೆರಡುವರ್ಷಗಳವರೆಗೆ ತಮ್ಮ ಮನೆ-ಪರಿವಾರದಿಂದ ಬಹು ದೂರದಲ್ಲಿ ಗುಲಾಮರಾಗಿದ್ದ ಅವರು ಭಯಾನಕ ಶಾರೀರಿಕ ಮತ್ತು ಮಾನಸಿಕ ಯಾತನೆಗಳನ್ನು ಅನುಭಿವಿಸದರು. ಈ ಹೀನ ಪದ್ಧತಿಯ ಅತ್ಯಂತ ದಾರುಣ ನೋವನ್ನು ಆಫ್ರಿಕನ್ರು ಅನುಭವಿಸಿದರು. ತಮ್ಮ ಕಪ್ಪು ಚರ್ಮದಿಂದಾಗಿ ಅವರು ಎಲ್ಲೆಲ್ಲೂ ಭೇದ-ಭಾವನೆಗೆ ಬಲಿಯಾಗಬೇಕಾಯಿತು.\u003c\/p\u003e\n\u003cp\u003eಸೋಲೋಮನ್ ಅವರ ನೆನಪಿನ ಮಾಲೆಯ ಈ ಕೃತಿ ಇಷ್ಟು ದೀರ್ಘ ಅವಧಿಯ ನಂತರವೂ ಪ್ರಾಸಂಗಿಕವಾಗಲು ಕಾರಣ. ಇಷ್ಟು ದೀರ್ಘ ಅವಧಿಯನಂತರ ಹಾಲಿವುಡ್ನಲ್ಲಿ ಇದರ ಬಗ್ಗೆ ಸಿನೆಮಾ ಸಿದ್ಧವಾಯಿತು. ಇದನ್ನು ಒಂಭತ್ತು ಆಸ್ಕರ್ ಪುರಸ್ಕಾರಗಳಿಗೆ ನಾಮಕರಣ ಮಾಡಲಾಯಿತು, ಅಲ್ಲದೆ ಈ ಸಿನೆಮಾಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಹ ಲಭಿಸಿತು.\u003c\/p\u003e\n\u003cp\u003e'ಗುಲಾಮಗಿರಿಯ ಆ ಹನ್ನೆರಡು ವರ್ಷಗಳು'- ಗುಲಾಮನೊಬ್ಬ ಅನುಭವಿಸಿದ ಯಥಾರ್ಥ ಚಿತ್ರಣವಾಗಿದ್ದು, ಇದರಲ್ಲಿ ಭಾವನೆಗಳಿವೆ. ಸಂವೇದನೆಗಳಿವೆ. ಸ್ವಾತಂತ್ರ್ಯವನ್ನು ಕಳೆದುಕೊಂಡ ವೇದನೆಯಿದೆ. ಪರಿವಾರದವರನ್ನು ಕಳೆದುಕೊಂಡ ದುಃಖವಿದೆ, ಘೋರ ಅನ್ಯಾಯ ಮತ್ತು ಅತ್ಯಾಚಾರಗಳಿಂದ `ಹುಟ್ಟಿದ ಆಕ್ರೋಶವಿದೆ. ಇವೆಲ್ಲವೂ ನೂರಕ್ಕೆ ನೂರರಷ್ಟು ವಾಸ್ತವಾಂಶವಾಗಿದೆ.\u003c\/p\u003e\n\u003cp\u003eಇದನ್ನು ಓದುವಾಗ, ಭಾರತೀಯ ಓದುಗರು. ಜಾತಿಪದ್ಧತಿಯಿಂದಾಗಿ ಇಂದೂ ಸಹ ಅವಮಾನ ಮತ್ತು ಭೇದಭಾವನೆಯನ್ನು ಅನುಭವಿಸುತ್ತಿರುವ ದುಃಖವನ್ನು ಸಹ ಮನಗಾಣ ಬಹುದು. ಅಂತೆಯೇ ಶೋಷಕ-ವರ್ಗದ ದುರಾಸೆಗೆ ಬಲಿಯಾದ ಮತ್ತು ಇಂದಿಗೂ ಬಲಿಯಾಗುತ್ತಿರುವ ಆದಿವಾಸಿ ಸಮುದಾಯಗಳ ವೇದನೆಗಳನ್ನೂ ಈ ಕೃತಿಯ ಮೂಲಕ ಅರಿಯಬಹುದು.\u003c\/p\u003e","brand":"To Kannada : D. N. Srinath","offers":[{"title":"Default Title","offer_id":47485619896579,"sku":"HB00005491","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GulamagiriyaAaHanneraduVarshagalu.jpg?v=1764328053","url":"https:\/\/harivubooks.com\/products\/gulamagiriya-aa-hanneradu-varshagalu-autobiography-d-n-srinath-kannada-book","provider":"Harivu Books","version":"1.0","type":"link"}