Ashoka M. Mirji
Publisher - Ujwala Academy
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಂವಿಧಾನದ ಆಶಯದಂತೆ ಸ್ಥಳೀಯ ಸ್ವಯಂ ಆಡಳಿತದ ಮೂಲಕ ಗ್ರಾಮೀಣ ಪ್ರದೇಶದ ಜನರು ಅಭಿವೃದ್ಧಿ ಪಥದತ್ತ ಸಾಗಲು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಪಂಚಾಯತ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದರ ಜೊತೆಗೆ ಸ್ವಯಂ ಆಡಳಿತದ ವ್ಯವಸ್ಥೆ ಸೂಕ್ತ ರೀತಿಯಲ್ಲಿ ನಡೆಯಲು ಅಧಿಕಾರಿಶಾಹಿ ಪಾತ್ರವು ಮಹತ್ವದ್ದು, ಈ ನಿಟ್ಟಿನಲ್ಲಿ ಮೂಲ ಹಂತದ ಗ್ರಾಮ ಪಂಚಾಯತ್ ಆಡಳಿತ ಸುಗಮವಾಗಿ ನಡೆಯಲು ಸರ್ಕಾರವು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಕಾರ್ಯದರ್ಶಿ, ಲೆಕ್ಕ ಸಹಾಯಕ ಹುದ್ದೆ (SDAA) ಗಳನ್ನು ನೇಮಕಾತಿ ಪರೀಕ್ಷೆಗಳ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಈ ನಿಟ್ಟಿನಲ್ಲಿ ಶ್ರೀ ಅಶೋಕ ಮಿರ್ಜಿ ಅವರು ರಚಿಸಿದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ” ನೇಮಕಾತಿ ಮಾರ್ಗದರ್ಶಿ ಪುಸ್ತಕವು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಅತ್ಯಂತ ಸರಳೀಕೃತ ರೂಪದಲ್ಲಿ ವಿವರಿಸುವುದರ ಜೊತೆಗೆ ಸರ್ಕಾರದ ಕಾರ್ಯಕ್ರಮ, ಬಜೆಟ್ ಮಾಹಿತಿ ಹಾಗೂ ಪ್ರಶೋತ್ತರಗಳನ್ನು ಒಳಗೊಂಡು ಉತ್ತಮವಾಗಿ ಮೂಡಿ ಬಂದಿದೆ. ಅಲ್ಲದೆ ಪರಿಷ್ಕೃತ 11ನೇ ಮುದ್ರಣ ಹೊಂದುತ್ತಿರುವುದು ಈ ಪುಸ್ತಕದ ಗುಣಮಟ್ಟಕ್ಕೆ ಸಾಕ್ಷಿಯಾಗಿದ್ದು, ಸ್ಪರ್ಧಾರ್ಥಿಗಳಿಗೆ ಪಠ್ಯಕ್ರಮದ ಸಂಪೂರ್ಣ ಅಂಶಗಳನ್ನು ಒದಗಿಸುವುದರಲ್ಲಿ ಎರಡು ಮಾತಿಲ್ಲ, ಹಾಗೆಯೇ ಈ ಪುಸ್ತಕವು ಪಂಚಾಯತ್ ವ್ಯವಸ್ಥೆಯ ಜನಪ್ರತಿನಿಧಿಗಳಿಗೆ ಕಾಯ್ದೆಯ ಜ್ಞಾನವನ್ನು ಗ್ರಾಮೀಣ ಜನತೆಗೆ ಅರಿವನ್ನು ಮೂಡಿಸುವ ಸಾಮರ್ಥ್ಯ ಹೊಂದಿದೆ.
ಹೀಗೆ ಸದುದ್ದೇಶದಿಂದ ಅತ್ಯಂತ ಪರಿಶ್ರಮದಿಂದ ರಚಿತವಾದ ಈ ಪುಸ್ತಕ ಸ್ಪರ್ಧಾರ್ಥಿಗಳ ಯಶಸ್ಸಿಗೆ ಕಾರಣವಾಗಲಿ ಎಂದು ಆಶಿಸುತ್ತ ಲೇಖಕರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
-ಶ್ರೀ. ಜಿ. ಜಗದೀಶ
