{"product_id":"geluvu-sadhisuva-munna-articles-prajwala-shenai-karkala-kannada-book","title":"ಗೆಲುವು ಸಾಧಿಸುವ ಮುನ್ನ","description":"\u003csection class=\"tab-product m-0 mb-5\"\u003e\n\u003cdiv class=\"container\"\u003e\n\u003cdiv class=\"row\"\u003e\n\u003cdiv class=\"col-sm-12 col-lg-12\"\u003e\n\u003cdiv class=\"tab-content nav-material\" id=\"top-tabContent\"\u003e\n\u003cdiv class=\"tab-pane fade show active\" id=\"top-home\" role=\"tabpanel\" aria-labelledby=\"top-home-tab\"\u003e\n\u003cdiv class=\"product-tab-discription\"\u003e\n\u003cp style=\"text-align: center;\"\u003e\"ರಾವಣನ ದಶಶಿರವದೇಂ? ನರನು ಶತಶಿರನು|\u003c\/p\u003e\n\u003cp style=\"text-align: center;\"\u003eಸಾವಿರಾತ್ಮಗಳನೊಂದರೊಳಣಗಿಸಿಹನು||\u003c\/p\u003e\n\u003cp style=\"text-align: center;\"\u003eಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುವಾಗಿ|\u003c\/p\u003e\n\u003cp style=\"text-align: center;\"\u003e ಭೂವೋಮಕಶಯನು ಮಂಕುತಿಮ್ಮ\".\u003c\/p\u003e\n\u003cp\u003eಅಂದರೆ ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರು ತಲೆಗಳು ಸಾವಿರಾರು ಮುಖಗಳನ್ನು ತನ್ನ ಒಂದೇ ಮುಖದಲ್ಲಿ ಅಡಗಿಸಿಕೊಂಡು ಸಂದರ್ಭ ಬಂದಾಗ ತನ್ನ ಒಂದೊಂದು ವಿಶೇಷ ಮುಖವನ್ನು ಪ್ರದರ್ಶಿಸುತ್ತಾನೆ. ಅದಕ್ಕಾಗಿ ಡಿವಿಜಿ ಸಕಲ ಪ್ರಾಣಿಗಳ ಗುಣಗಳನ್ನು ಹೊಂದಿರುವ ಮನುಷ್ಯನನ್ನು ಈ ಸೃಷ್ಟಿಯ ವಿಶೇಷ ಎಂದಿದ್ದಾರೆ. ಈ ಕಗ್ಗಕ್ಕೆ ಮಾದರಿಯಾಗಿ ಲೇಖಕಿ ಪ್ರಜ್ವಲಾ ಶೆಣೈಯವರು ತಮ್ಮ \"ಗೆಲುವು ಸಾಧಿಸುವ ಮುನ್ನ' ಪುಸ್ತಕದಲ್ಲಿನ ಲೇಖನಗಳಲ್ಲಿ ಮನುಷ್ಯನ ವಿವಿಧ ಮುಖಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.\u003c\/p\u003e\n\u003cp\u003eನಲಪತ್ತೆರಡು ಉತ್ತಮ ಲೇಖನಗಳಿರುವ ಇವರ 'ಭರವಸೆಯ ಹೆಜ್ಜೆಗಳು\" ಪುಸ್ತಕದಲ್ಲಿ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಮತ್ತು ಉಂಟಾಗುವ ಭಾವನೆಗಳನ್ನು ಬಹಳ ಸುಂದರವಾಗಿ ಚಿತ್ರಿಸಿ ಸಹೃದಯರ ಮನಸ್ಸನ್ನು ಗೆದ್ದು ಸಾಹಿತ್ಯ ವಲಯದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಿದ್ದರು. ಓದುಗರ ಮೆಚ್ಚುಗೆಗಿಂತ ಮಿಗಿಲಾದ ಪ್ರಶಸ್ತಿ ಬೇರಿಲ್ಲ ಪ್ರಜ್ವಲಾ ಶೆಣೈಯವರ 'ಗೆಲುವು ಸಾಧಿಸುವ ಮುನ್ನ\" ಕೃತಿಯಲ್ಲಿರುವ ಲೇಖನಗಳೆಲ್ಲ ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಮನಸ್ಸನ್ನು ಗೆದ್ದಿವೆ. ನಾನು ಕೂಡ ಇವರ ಲೇಖನಗಳ ಓದುಗ, ಹೊಸ ಹೊಸ ವಿಷಯವನ್ನು ತೆಗೆದುಕೊಂಡು ಬಹಳ ಸುಂದರವಾಗಿ ಮನಮುಟ್ಟುವಂತೆ ನಿರೂಪಿಸುವ ಇವರ ಬರವಣಿಗೆಯ ಶೈಲಿಯಲ್ಲಿ ಪ್ರಬುದ್ಧತೆಯಿದೆ. ಪ್ರತಿಭಾವಂತ ಶಿಕ್ಷಕಿಯಾಗಿ, ಪ್ರಬುದ್ಧ ಲೇಖಕಿಯಾಗಿ ಸಹೃದಯರ ಅಭಿಮಾನ ಮತ್ತು ಗೌರವಕ್ಕೆ ಪಾತ್ರರಾಗಿರುವ ಪ್ರಜ್ವಲಾ ಶೆಣೈವರ ಲೇಖನಿಯಿಂದ ಇನ್ನಷ್ಟು ಉತ್ತಮ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲೆಂದು ಶುಭ ಹಾರೈಸುತ್ತೇನೆ.\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/section\u003e","brand":"Prajwala Shenai Karkala","offers":[{"title":"Default Title","offer_id":47618599354627,"sku":"HB00005503062","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GELUVU-SADISUVA-MUNNA.jpg?v=1768226965","url":"https:\/\/harivubooks.com\/products\/geluvu-sadhisuva-munna-articles-prajwala-shenai-karkala-kannada-book","provider":"Harivu Books","version":"1.0","type":"link"}