{"product_id":"gedde-bitte-children-book-nivedha-ganesh-transalated-by-santosh-tamraparani-kannada-book","title":"ಗೆದ್ದೇ ಬಿಟ್ಟೆ..!","description":"\u003cp\u003eಸ್ನೇಹಿತರಾದವರು ನಿಮ್ಮ ಬೆನ್ನ ಹಿಂದೆ ಎಂದಿಗೂ ಕೀಳಾಗಿ ಮಾತನಾಡುವುದಿಲ್ಲ. ನಿಜ ಸ್ನೇಹಿತರಾದವರು ಆಟಕ್ಕೆ ಹೆಚ್ಚುವರಿ ಆಟಗಾರನ ಆಗತ್ಯವಿಲ್ಲದಿದ್ದರೂ, ನಿಮ್ಮನ್ನು ಸೇರಿಸಿಕೊಂಡೇ ಕ್ರಿಕೆಟ್ ಆಡುತ್ತಾರೆ.\u003c\/p\u003e\n\u003cp\u003eಸ್ನೇಹಿತರ ಜತೆ ಜಗಳವಾಡಿಕೊಂಡಿರುವ 13 ವರ್ಷದ ದಿವ್ಯಾಳಿಗೆ ಗ್ರಾಮದ ಕೊಳದಲ್ಲಿ ನೀರಿನೊಂದಿಗೆ ಆಡುತ್ತಾ ಮನಸ್ಸನ್ನು ತಿಳಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ. ಆ ದಿನ ಅವಳಿಗೆ ಸಿಕ್ಕ ಸಲಹೆ ಅವಳು ಸ್ಪರ್ಧಾತ್ಮಕ ಈಜಿನ ಲೋಕಕ್ಕೆ ಪ್ರವೇಶಿಸುವಂತೆ ಮಾಡುತ್ತದೆ. ಅದು ಅವಳನ್ನು ಸಿರುಗನಪುರದ ಹತ್ತಿ ಹೊಲಗಳ ಬಳಿ ಇರುವ ಅವಳ ಮನೆಯಿಂದ ಬಹು ದೂರಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ಆಕೆಗೆ ಮತ್ತೊಬ್ಬ ಈಜುಗಾರ್ತಿ ಅಂಬಿಕಾಳ ಗೆಳೆತನ ಸಿಗುತ್ತದೆ. ಈ ಗೆಳೆತನವನ್ನು ಉಳಿಸಿಕೊಳ್ಳಲು ದಿವ್ಯಾ ಯಶಸ್ವಿಯಾಗುತ್ತಾಳೆಯೇ?\u003c\/p\u003e\n\u003cp\u003eವಾಸ್ತವದೊಂದಿಗೆ ತನ್ನ ಕಲ್ಪನೆಯನ್ನೂ ಬೆಸುಗೆ ಹಾಕಿರುವ ನಿವೇಧಾ ಗಣೇಶ್ ಅವರ ಈ ಕಥೆ ಮನರಂಜನೆ, ಸ್ಫೂರ್ತಿ ನೀಡುವ ಜೊತೆಗೆ ಕತೆಯೊಳಗೆ ನಮ್ಮನ್ನು ಕಂಡುಕೊಳ್ಳುವಂತೆ ಮಾಡುತ್ತದೆ\u003c\/p\u003e","brand":"Nivedha Ganesh transalated by Santosha Tamraparni,","offers":[{"title":"Default Title","offer_id":47599927296259,"sku":"HB0000550232","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/geddebitte.jpg?v=1767610796","url":"https:\/\/harivubooks.com\/products\/gedde-bitte-children-book-nivedha-ganesh-transalated-by-santosh-tamraparani-kannada-book","provider":"Harivu Books","version":"1.0","type":"link"}