{"product_id":"gayana-ganga-collection-of-compositions-ashwin-balaga-and-anjana-shenai-kannnada-book","title":"ಗಾಯನ ಗಂಗಾ","description":"\u003cp\u003eಗಾಯನ ಗಂಗಾ\u003cbr\u003eಪಂ. ಆರ್.ವಿ. ಶೇಷಾದ್ರಿ ಗವಾಯಿ ಅವರ ರಚನೆಗಳು\u003cbr\u003eಸಂಪುಟ-1\u003c\/p\u003e\n\u003cp\u003eಪಂಡಿತ್ ಆರ್. ವಿ. ಶೇಷಾದ್ರಿ ಗವಾಯಿ (ಜನನ: 21 ಮಾರ್ಚ್ 1924 - ನಿಧನ: 19 ಮಾರ್ಚ್ 2003) ಪ್ರಸಿದ್ಧ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗುರುಗಳು, ಸಂಯೋಜಕರು, ಗಾಯಕರು ಹಾಗು ಹಾರ್ಮೋನಿಯಂ ವಾದಕರಾಗಿದ್ದರು.\u003c\/p\u003e\n\u003cp\u003eದಾವಣಗೆರೆಯಲ್ಲಿ ರಾಜಾಪುರ ವೆಂಕಟಸುಬ್ಬರಾವ್ ಅವರ ಪುತ್ರನಾಗಿ ಜನಿಸಿದ ಶೇಷಾದ್ರಿ ಗವಾಯಿ ಅವರು ಬಾಲ್ಯದಿಂದಲೇ ರಂಗಭೂಮಿಯ ನಟನಾಗಿ ಖ್ಯಾತರಾಗಿದ್ದರು. ವಾಮನರಾವ್ ಮಾಸ್ಟರ್ ಕಂಪನಿ, ಹಂದಿಗನೂರು ಸಿದ್ದರಾಮಪ್ಪ ಕಂಪನಿ, ಕಕ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿ ಮೊದಲಾದ ಹಲವು ನಾಟಕ ಕಂಪನಿಗಳಲ್ಲಿ ಬಾಲಕೃಷ್ಣ, ಪ್ರಹ್ಲಾದ ಮುಂತಾದ ಪಾತ್ರಗಳನ್ನು ಅಭಿನಯಿಸಿದ್ದರು. ಶೇಷಾದ್ರಿ ಗವಾಯಿ ಅವರು ಚನ್ನಬಸವಯ್ಯನವರ ಬಳಿ ಹಾರ್ಮೋನಿಯಂ ವಾದನವನ್ನು ಹಾಗು ಪಂಚಾಕ್ಷರಿ ಗವಾಯಿಗಳ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಕಲಿತರು. 'ಉರಗಾಚಲ' ಎಂಬ ಅಂಕಿತನಾಮದಲ್ಲಿ 'ಸಂಗೀತ ಕಲಾರವಿಂದ', 'ತತ್ವಗಾನ ರತ್ನಾಕರ' ಎಂಬ ಪ್ರಸಿದ್ಧ ಪುಸ್ತಕಗಳನ್ನು ರಚಿಸಿದ್ದರು. ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ಪಂಚಾಕ್ಷರಿ ಗವಾಯಿ ಫೌಂಡೇಶನ್ ಸ್ಥಾಪನೆ ಹಾಗು ಅರ್ಹ ಸಂಗೀತಗಾರರಿಗೆ ನೀಡಲಾಗುವ 'ಪಂಚಾಕ್ಷರಿ ಪ್ರಶಸ್ತಿ'ಯ ಪ್ರಾರಂಭ.\u003c\/p\u003e\n\u003cp\u003eಶೇಷಾದ್ರಿ ಗವಾಯಿ ಅವರು ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದ ಖ್ಯಾತ ಹಿಂದೂಸ್ತಾನಿ ಗಾಯಕರೊಂದಿಗೆ ಸಹವಾದನ (ಅಕಂಪನಿಮೆಂಟ್) ಮಾಡಿದ್ದರು. ಕರ್ನಾಟಕ ಮಾತ್ರವಲ್ಲದೇ ದೆಹಲಿ, ಕೊಲ್ಕತ್ತಾ, ಮುಂಬೈ, ನಾಗಪುರ ಹಾಗು ಹೈದರಾಬಾದ್ ನಗರಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದರು. ಲಂಡನ್ನ ಭಾರತೀಯ ವಿದ್ಯಾಲಯದಲ್ಲಿಯೂ ಅವರ ಸಂಗೀತ ಕಾರ್ಯಕ್ರಮವನ್ನೂ ನೀಡಿ ಜನಮನ್ನಣೆ ಪಡೆದಿದ್ದರು.\u003c\/p\u003e\n\u003cp\u003eಶೇಷಾದ್ರಿ ಗವಾಯಿ ಅವರು ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ಪ್ರಶಸ್ತಿ, ಚಂದ್ರಹಾಸ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ನೀಡಲ್ಪಟ್ಟ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರು, ಅಲ್ಲದೆ ಸಂಗೀತ ಸಮ್ಮೇಳನಗಳ ಅಧ್ಯಕ್ಷರಾಗಿಯೂ ಹಾಗು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.\u003c\/p\u003e","brand":"Ashwin Baliga and Anjana Shenai","offers":[{"title":"Default Title","offer_id":47702026354947,"sku":"HB00005503280","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GayanaGanga.jpg?v=1770015511","url":"https:\/\/harivubooks.com\/products\/gayana-ganga-collection-of-compositions-ashwin-balaga-and-anjana-shenai-kannnada-book","provider":"Harivu Books","version":"1.0","type":"link"}