{"product_id":"gadya-garudi-article-keshava-malagi-kannada-book","title":"ಗದ್ಯ ಗಾರುಡಿ","description":"\u003cp\u003e'ಗದ್ಯ ಗಾರುಡಿ' ಪುಸ್ತಕವು 'ಗಾಬೋ', ಎಂದು ಇಡೀ ಲ್ಯಾಟಿನ್ ಅಮೆರಿಕದ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ರ ಆಯ್ದ ಅಂಕಣ ಬರಹಗಳ ಸಂಗ್ರಹ.\u003c\/p\u003e\n\u003cp\u003eಮಾರ್ಕೇಸ್ರ ಗದ್ಯಬರಹಗಳ ಸೊಬಗು, ಉಲ್ಲಾಸ, ವಿಸ್ಮಯತೆ, ವಿಚಾರಗಳ ವಿಸ್ತರಣೆ ಹಾಗೂ ಅಂತಿಮವಾಗಿ ಮನುಷ್ಯ. ಪ್ರೀತಿಯಿಂದ ಹುಟ್ಟುವ ನಿಷ್ಕಲ್ಮಶ ಕಾಳಜಿಗಳನ್ನು ಈ ಲೇಖನಗಳು ತೆರೆದಿಡುತ್ತವೆ. ಸುಮಾರು ಮೂರುವರೆ ದಶಕಗಳಲ್ಲಿ ಗಾಬೋ ಕೆತ್ತಿದ ಬರಹಗಳ ಭಾಷಾ ಬೆರಗು ನಾವಿಲ್ಲಿ ಕಾಣಲು ಸಾಧ್ಯ\u003c\/p\u003e\n\u003cp\u003eಅಪರಿಚಿತ ತರುಣನಾಗಿದ್ದಾಗ ಬರೆದ ಲೇಖನದಿಂದ ಹಿಡಿದು ಮುಪ್ಪರಿಗೊಂಡ ಮನಸ್ಸಿನ ಮೆದು ಮಾತುಗಳವರೆಗೆ ಇವುಗಳ ಹರಹಿದೆ. ಪದಮಿತಿ, ಕಾಲದ ಪರಿಮಿತಿ ಇತ್ಯಾದಿಗಳಿಗೆ ಒಳಪಟ್ಟರೂ ಈ ಬರಹಗಳು ಕುಸುರಿತನ, ಅನುಭವದ ವಿಸ್ತಾರತೆಯಿಂದ ಚ್ಯುತಿಗೊಂಡಿಲ್ಲ.\u003c\/p\u003e\n\u003cp\u003eಭಾಷಾ ಚಮತ್ಕಾರ, ವಿಷಯವನ್ನು ತೆರೆದಿಡುವ ವಿಧಾನ, ಕೊಂಚ ಮಾತ್ರ ಹಣಕುವ ಲ್ಯಾಟಿನೊ ವಿನೋದಪ್ರಜ್ಞೆ ಮತ್ತು ಮಾರ್ಕೇಸ್ರಿಗಷ್ಟೇ ಸಾಧ್ಯವಿರುವ ಶಬ್ದ ಯಕ್ಷಿಣಿ ಇಲ್ಲಿನ ಪ್ರತಿ ಬರಹದಲ್ಲೂ ಕಾಣಬಹುದು.\u003c\/p\u003e","brand":"Keshava malagi","offers":[{"title":"Default Title","offer_id":47479580098819,"sku":"HB00005483","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/gadyagarudi_b85fa760-5a16-4ec3-81c0-dd2065ecc933.jpg?v=1764161633","url":"https:\/\/harivubooks.com\/products\/gadya-garudi-article-keshava-malagi-kannada-book","provider":"Harivu Books","version":"1.0","type":"link"}