{"product_id":"ennatma-kampamidu-novel-sumangala-kannada-book","title":"ಎನ್ನಾತ್ಮ ಕಂಪಮಿದು","description":"\u003cp\u003eಒಂದೇ ಹೂವಿನ ಹಲವು ಪಕಳೆಗಳಂತೆ ಇರುವ ಈ ನಿರೂಪಣೆಗಳು ಒಂದು ಹೂವಾಗಿಯೂ, ದಳಗಳಾಗಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೂವು ಮತ್ತು ದಳಗಳಂತೆಯೇ 'ಎನ್ನಾತ್ಮ ಕಂಪಮಿದು' ಎನ್ನುವಂತೆ ಕಂಡೂ ಕಾಣದಂತೆ ಕಂಪಿಸುತ್ತವೆ!\u003c\/p\u003e\n\u003cp\u003eಒಂದು ಮೂಲಭೂತ ಪ್ರಶ್ನೆ ಇಲ್ಲಿನ ನಿರೂಪಣೆಗಳನ್ನು ನಿರ್ದೇಶಿಸಿದ ಹಾಗೆ ಕಾಣುತ್ತದೆ. ನಡೆದಂತೆ ದಾರಿಯನು ಬಿಚ್ಚಿ ಬೆಳಸುವುದು, ಇದೇ ಬದುಕು ಎನ್ನುವುದು ಸತ್ಯವೆ ಅಥವಾ ನನಗೆ ಬೇಕಾದ ದಾರಿಯನ್ನು ನಾನೇ ಕಂಡುಕೊಳ್ಳಬೇಕು ಎನ್ನುವುದು ಸತ್ಯವೆ? ಈ ನಿರೂಪಣೆಗಳಲ್ಲಿ ನಾಯಕ ನಾಯಕಿಯರಿಲ್ಲ. ಇಲ್ಲಿ ಯಾರೂ ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ. ಇದೇ ಈ ನಿರೂಪಣೆಗಳನ್ನು ಭಿನ್ನ ಜಾಗದಲ್ಲಿ ಮತ್ತು ಸ್ವರೂಪದಲ್ಲಿ ನಿಲ್ಲಿಸುತ್ತದೆ.\u003c\/p\u003e\n\u003cp\u003eಕನ್ನಡದ ಅತ್ಯುತ್ತಮ ಕತೆಗಾರ್ತಿಯಾದ ಸುಮಂಗಲಾ ಅವರ ಈ ಕತೆಗಳು - ಇವುಗಳನ್ನು ನಾನು ಉದ್ದಕ್ಕೂ ನಿರೂಪಣೆಗಳೆಂದೇ ಕರೆದಿದ್ದೇನೆ. ಇವು ಸಮಕಾಲೀನ ಸಂದರ್ಭದ ಗಮನಾರ್ಹ ನಿರೂಪಣೆಗಳಾಗಿವೆ -ತೋರಿಕೆಯದಲ್ಲದ, ಕೇವಲ ಬುದ್ದಿಗತವೂ ಅಲ್ಲದ, ಭಾವುಕತೆಯನ್ನು ಮಾತ್ರ ಆಧರಿಸಿದವು ಎಂದೂ ಅನ್ನಿಸದ ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ.\u003c\/p\u003e\n\u003cp\u003e-ಎಂ. ಎಸ್. ಆಶಾದೇವಿ\u003c\/p\u003e","brand":"Sumangala","offers":[{"title":"Default Title","offer_id":47394054045955,"sku":"HB00005446","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EnnatmaKampamidu_33de56c7-ccaf-4ece-aeec-1dd16284f26a.jpg?v=1762242636","url":"https:\/\/harivubooks.com\/products\/ennatma-kampamidu-novel-sumangala-kannada-book","provider":"Harivu Books","version":"1.0","type":"link"}