Meeti Mallikarjun
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಕನ್ನಡದ ಸಾರ್ವಜನಿಕ ವಲಯದಲ್ಲಿ ಕನ್ನಡದ ಕುರಿತಾದ ಸಂಕಥನಗಳು ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯಬೇಕು ಎನ್ನುವ ಬೇಡಿಕೆಯ ಸುತ್ತ ಸುತ್ತು ಹೊಡೆಯುತ್ತಿರುತ್ತವೆ. ಹಾಗಾದ ಮಾತ್ರಕ್ಕೆ ಕನ್ನಡ ನುಡಿಯ ಸಮಸ್ಯೆಗಳು ದೂರ ಆಗುವುದಿಲ್ಲ ಎಂಬ ತುಂಬ ಸರಳ, ಆದರೆ ಅತ್ಯಂತ ಗಂಭೀರ ಪ್ರಮೇಯವನ್ನು ಮಂಡಿಸುವ ಮೂಲಕ ಮೇಟಿ ಮಲ್ಲಿಕಾರ್ಜುನ ಅವರು ಕರ್ನಾಟಕದಲ್ಲಿ ಕನ್ನಡದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳಿಗೆ ಭಿನ್ನ ಆಯಾಮಗಳನ್ನು ಸೂಚಿಸುತ್ತಾರೆ. ಕನ್ನಡ ನುಡಿಯ ಮೂಲಕವೇ ಲೋಕಗ್ರಹಿಕೆ, ಆಲೋಚನಾಕ್ರಮ ಮತ್ತು ಜ್ಜಾನನಿರ್ಮಿತಿಗಳಾಗುವ ಅವಶ್ಯಕತೆಯಿದೆಯೆಂಬ ಅವರ ವಾದ ಕಣ್ಣು ತೆರೆಸುವುದಂತೂ ನಿಜ. ಕನ್ನಡದಲ್ಲಿ ಜ್ಜಾನಶಿಸ್ತುಗಳು ಬೆಳೆಯಬೇಕು ಎಂಬ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಲೇಖಕರ ನೋಟ ವಿಶಿಷ್ಟವಾಗಿದೆ. ಕನ್ನಡ ನುಡಿಸಮುದಾಯದ ಅಗತ್ಯಗಳಿಗನುಗುಣವಾದ ಜ್ಞಾನನಿರ್ಮಿತಿಯ ಅವಶ್ಯಕತೆ ಮತ್ತು ಅಂತಹ ಜ್ಞಾಸನಿರ್ಮಿತಿಯ ಮಾರ್ಗಗಳನ್ನು ಶೋಧಿಸುವ ಅಗತ್ಯಕ್ಕೆ ಅವರು ಒತ್ತು ಕೊಡುತ್ತಾರೆ. ಕನ್ನಡವನ್ನು ಕೇವಲ ಪಡೆಯುವ ಭಾಷೆಯಾಗಿಸದೇಜ್ಜಾನವನ್ನು ಒದಗಿಸುವ ನುಡಿಯಾಗಿ ಬೆಳೆಸಬೇಕು ಎನ್ನುವ ಕ್ರಾಂತಿಕಾರಿ ಯೋಚನೆಗೆ ಲೇಖಕರು ಒತ್ತು ಕೊಟ್ಟಿದ್ದಾರೆ.
