{"product_id":"egypt-unlocked-travelogue-rangaswamy-mookanahalli-kannada-book","title":"ಈಜಿಪ್ಟ್  Unlocked","description":"\u003cp\u003e\u003cspan data-olk-copy-source=\"MessageBody\" lang=\"KN\"\u003eಈಜಿಪ್ಟ್ ಗೆ ಹೋಗಬೇಕು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪಿರಮಿಡ್ಡುಗಳನ್ನು ಕಾಣಬೇಕು ಎನ್ನುವುದು ಪ್ಲಾನ್ ಮಾಡಿ ಆದದ್ದಲ್ಲ. ಈಜಿಪ್ಟ್ ನನ್ನ ಪವಾಸದ\u003cspan\u003e \u003c\/span\u003e\u003c\/span\u003e\u003cspan\u003e69\u003c\/span\u003e\u003cspan lang=\"KN\"\u003eನೇ ದೇಶ. ಈಜಿಪ್ಟ್ ಅಂತಲ್ಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಉಳಿದ\u003cspan\u003e \u003c\/span\u003e\u003c\/span\u003e\u003cspan\u003e68\u003c\/span\u003e\u003cspan lang=\"KN\"\u003e\u003cspan\u003e \u003c\/span\u003eದೇಶಗಳು ಕೂಡ ಪ್ಲಾನ್ ಮಾಡಿ ಆದದ್ದಲ್ಲ. ನಾನು ಯಾವತ್ತೂ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಯಾವುದನ್ನೂ ಬಯಸಿದವನಲ್ಲ. ಬಯಸಿದ ಮಾತ್ರಕ್ಕೆ ಸಿಗುವ ಬದುಕು ನನ್ನದು ಆಗಿರಲಿಲ್ಲ. ಹಾಸಿ ಹೊದ್ದುಕೊಳ್ಳುವ ಬಡತನ ಅಡ್ಜಸ್ಟ್  ಮಾಡುವುದನ್ನು ಚೆನ್ನಾಗಿ ಕಲಿಸಿ ಬಿಟ್ಟಿತ್ತು. ಹೀಗಾಗಿ ಹಿಂದಿ ಭಾಷಿಕರು ಹೇಳುವಂತೆ\u003cspan\u003e \u003c\/span\u003e\u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಔಕಾತ್ ಮೇ ರಹೇ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಎಂದು ಮನಸ್ಸಿಗೆ ಹೇಳಿಬಿಟ್ಟಿದ್ದೆ. ಅಟ್ಟಕ್ಕೆ ಏಣಿ ಹಾಕಬಹುದು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಿದರೆ ಹೇಗೆ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಲು ಸಾಧ್ಯವೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಒಪ್ಪತ್ತಿನ ಊಟಕ್ಕೇ ತಡಕಾಡುವ ಸಮಯದಲ್ಲಿ ವಿದೇಶ ಪ್ರವಾಸದ ಕನಸು ಕಾಣುವುದು ಅಪರಾಧ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆಕಾಶಕ್ಕೆ ಏಣಿ ಹಾಕಿದಂತೆ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಪ್ರಾಕ್ಟಿಕಲ್ ಆಗಿರುವುದು ಕಲಿತು ಬಿಟ್ಟಿದ್ದೆ. ಈ ಎಲ್ಲಾ ಕಾರಣದಿಂದ ನಾನೊಬ್ಬ ಡೆಸ್ಟಿನಿ ಕಿಡ್. ಸ್ಲಂ ಹುಡುಗನೊಬ್ಬ ಗಾಡ್ ಫಾದರ್ಗಳಿಲ್ಲದೆ ಕೇವಲ ದೈವ ಅನುಗ್ರಹ ಮತ್ತು ಶ್ರಮದ ಫಲದಿಂದ\u003cspan\u003e \u003c\/span\u003e\u003c\/span\u003e\u003cspan\u003e69\u003c\/span\u003e\u003cspan lang=\"KN\"\u003e\u003cspan\u003e \u003c\/span\u003eದೇಶಗಳನ್ನು ಸುತ್ತಿದ ಎಂದು ಬಾಲಿವುಡ್ನವರು ಚಿತ್ರ ಮಾಡದ್ದಿರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಎಲ್ಲರಿಗಿಂತ ಮುಂಚೆ ಇವೆಲ್ಲಾ ರೀಲ್ ಎಂದು ನಕ್ಕಿರುತ್ತಿದ್ದೆ. ಯಾವ ಕೋನದಿಂದ ನೋಡಿದರೂ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಕಟ್ಟುವುದು ದೂರದ ಮಾತು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮೂರು ಹೊತ್ತು ಅನ್ನಕ್ಕೆ ಅಡ್ಡಿಯಿಲ್ಲದ ಬದುಕು ಇವರು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ಬದುಕು ನನ್ನದಾಗಿತ್ತು. ಮುಂದಿನ ಹೊತ್ತಿನ ಊಟ ಗ್ಯಾರಂಟಿ ಇಲ್ಲದ ಬದುಕಿನಲ್ಲಿ ಇನ್ನೇನು ತಾನೇ ಪ್ಲಾನ್ ಮಾಡಲು ಸಾಧ್ಯ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಹೀಗಾಗಿ ಈಜಿಪ್ಟ್ ಜೊತೆಗೆ ಯಾವುದೂ ಪ್ಲಾನ್ಡ್ ಅಲ್ಲ. ಬದುಕು ಕರೆದತ್ತ ಮುಖ ಮಾಡಿ ನಡೆಯುತ್ತಾ ಬಂದಿದ್ದೇನೆ.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Rangaswamy Mookanahalli","offers":[{"title":"Default Title","offer_id":48090831028483,"sku":"HB00007093","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EgyptUnlocked.jpg?v=1778311718","url":"https:\/\/harivubooks.com\/products\/egypt-unlocked-travelogue-rangaswamy-mookanahalli-kannada-book","provider":"Harivu Books","version":"1.0","type":"link"}