Director's Special

Director's Special

ಮಾರಾಟಗಾರ
ಗುರುಪ್ರಸಾದ್
ಬೆಲೆ
Rs. 200.00
ಕೊಡುಗೆಯ ಬೆಲೆ
Rs. 200.00
ಬೆಲೆ
Rs. 200.00
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಕಥೆ ಬೇಕೇ ಕಥೆ..?

ಕೆಲವು ವ್ಯಕ್ತಿಗಳು ನಾನಾ ಕಾರಣಗಳಿಗಾಗಿ ಇಷ್ಟವಾಗುತ್ತಾರೆ. ಆದರೆ ಗುರು ನಂಗೆ ಇಷ್ಟ ಆಗೋಕೆ ಮೂರು ಕಾರಣಗಳಿವೆ. ಅವರ ಸಿನಿಮಾ, ಅವರ ಮಾತುಗಾರಿಕೆ ಮತ್ತು ಅವರ ಇಲ್ಲಿರುವ ಕಥೆಗಳು.

ನಾನು 'ಮಠ' ಸಿನಿಮಾ ನೋಡಿದಾಗಲೇ ಗಮನಿಸಿದ್ದು, ಸಿನಿಮಾದ ಹಿಂದಿರುವ ಅವರ ದಟ್ಟ ಕಥೆ ಹೇಳೋ ಪ್ರತಿಭೆ.. ಇದೇನಿದು ನಾಲ್ಕು ಸಿನಿಮಾಗಳಗಾಗುವಷ್ಟು ಸರಕನ್ನು ಒಂದೇ ಸಿನಿಮಾಕ್ಕೆ ವ್ಯಯಿಸಿದ್ದಾರಲ್ಲ ಈ ವ್ಯಕ್ತಿ ಅನ್ನಿಸಿತ್ತು. ಈಗ ನಿಮ್ಮ ಕೈಯಲ್ಲಿರುವ ಈ ಕಥೆಗಳನ್ನು ಓದಿದರೆ • ನಿಮಗೇ ಗೊತ್ತಾಗುತ್ತೆ.. ಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು ಎಂದು.

ಇಲ್ಲ ಹದಿನೆಂಟು ಬರಹಗಳವೆ. ಕೆಲವೊಂದು ಅಪ್ಪಟ ಕಥೆಗಳು, ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ. ಹಿಡಿದಿಟ್ಟುಕೊಳ್ಳೋ ಕ್ವಾಲಟಿ..!

ಹಾಗಂತ ತುಂಬಾ ಗಂಭೀರ ಗುರು ಅಂದೋಬೇಡಿ.. ಗುರು ಮಹಾನ್ ತುಂಟ, ಹುಬ್ಬಾತರ್ಲೆ, ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ.

'ಮಠ' ಮತ್ತು `ಎದ್ದೇಳು ಮಂಜುನಾಥಾ...' ಎಂಬ ಎರಡು ಬೇರೆಯ ಥರದ, ದಟ್ಟ ಸಿನಿಮಾಗಳ ಹಿಂದಿನ ಬುದ್ಧಿವಂತ ಮನಸ್ಸಿನ ಕೆಲವು ಹೊಳಹುಗಳು ಕಥೆಯ ರೂಪದಲ್ಲಿ ನಿಮ್ಮನ್ನು ಎಂಟರ್‌ಟೇನ್ ಮಾಡಲು ಯೋಚ ಹಚ್ಚಲು, ಪ್ರಚೋದಿಸಲು ಬಂದಿವೆ.. ಓದಿ.. ಆನಂದ ನಿಮ್ಮದಾಗುತ್ತೆ.. ಅದಕ್ಕೆ ನಾನೇ

ನಿರಂತರ ಸುದ್ದಿಗಾಗಿ ನೋಡ್ತಾ ಇರಿ.. ಟೀವಿ9,, ಅಲ್ಲಲ್ಲ. ಸುವರ್ಣ ನ್ಯೂಸ್!!!

-ಗೌರೀಶ್ ಅಕ್ಕಿ

ಸಾವಣ್ಣ ಪ್ರಕಾಶನ

Customer Reviews

No reviews yet
0%
(0)
0%
(0)
0%
(0)
0%
(0)
0%
(0)