{"product_id":"diabetes-reversal-tips-dr-preetham-b-kannada-book","title":"ಡಯಾಬಿಟಿಸ್ ರಿವರ್ಸಲ್ ಟಿಪ್ಸ್","description":"\u003cp\u003eಡಾಕ್ಟರ್ ಪ್ರೀತಮ್ ಬಿಳಿಎಲೆ, ಕೆಎಂಸಿ ಮಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿ ತದನಂತರ ಕೇರಳದಲ್ಲಿ ಡಯಾಲಿಸಿಸ್ ಸೆಂಟರ್ ಮತ್ತು ಹಾರ್ಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದಾರೆ. ಡಾಕ್ಟರ್ ಜಾರ್ಜ್ ಅವರ ಅಸಿಸ್ಟೆಂಟ್ ಆಗಿ ಕೆಲಸ ಮಾಡುವಾಗ ಡಯಾಬಿಟಿಸ್ ನಲ್ಲಿ ಅದಮ್ಯ ಆಸಕ್ತಿ ಬೆಳೆಸಿಕೊಂಡ ಡಾಕ್ಟರ್ ಪ್ರೀತಮ್ ಚೆನ್ನೈನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಬಿಟಿಸ್ ರಿಸರ್ಚ್ ಸೆಂಟರ್ನಲ್ಲಿ ಪೋಸ್ಟ್ ಗ್ರಾಜುಯೇಟ್ ಫೆಲೋಶಿಪ್ ಮುಗಿಸಿದ್ದಾರೆ. ಅಂತರಾಷ್ಟ್ರೀಯ ಏಷ್ಯನ್ ಜರ್ನಲ್ ಆಫ್ ಡಯಾಬಿಟಲಜಿನಲ್ಲಿ ಹೊಸ ಇನ್ಸುಲಿನ್ ಗಳ ಬಗ್ಗೆ ಪ್ರಬಂಧ ಮಂಡಿಸಿರುತ್ತಾರೆ. ಶಿವಮೊಗ್ಗದಲ್ಲಿ ಕಳೆದ 20 ವರ್ಷಗಳಿಂದ ಡಯಾಬಿಟಿಸ್ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಮೇಹದಲ್ಲಿ ಔಷಧಿಗಳು ಕೇವಲ ತಾತ್ಕಾಲಿಕ ಪರಿಹಾರ ಮಾತ್ರ, ನಮ್ಮ ಜೀವನ ಶೈಲಿಯೇ ಅದಕ್ಕೆ ಸರಿಯಾದ ಉತ್ತರ ಎಂದು ಸಾಬೀತುಪಡಿಸಿರುವ ಡಾಕ್ಟರ್ ಪ್ರೀತಮ್, ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಡಾಕ್ಟರ್ ಪ್ರೀತಮ್ ಡಯಾಬಿಟಿಸ್ ಎಜುಕೇಶನ್ ಮತ್ತು ರಿವರ್ಸಲ್ ಸೆಂಟರ್ ಹೊಂದಿದ್ದಾರೆ. ಡಾಕ್ಟರ್ ಪ್ರೀತಮ್ಸ್ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಪರೀಕ್ಷೆಯನ್ನು ಪಾಸ್ ಮಾಡಿ ಅಧಿಕೃತ ಕ್ರಿಕೆಟ್ ಅಂಪೈರ್ ಕೂಡ ಆಗಿರುತ್ತಾರೆ. ಇದು ಅವರ ಮೂರನೆಯ ಕೃತಿ. ಮೊದಲ ಎರಡು ಕೃತಿಗಳು ಕನ್ನಡದಲ್ಲಿ 'ಡಯಾಬಿಟಿಸ್ ರಿವರ್ಸಲ್ ಸತ್ಯ ಮತ್ತು ಮಿಥ್ಯ\" ಮತ್ತು ಇಂಗ್ಲಿಷ್ ನಲ್ಲಿ \" ಫುಡ್ ಸೆಕ್ಸ್ ಅಂಡ್ ಡಯಾಬಿಟಿಸ್\". ಡಾಕ್ಟರ್ ಪ್ರೀತಮ್ರವರಿಗೆ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಗಳು ಡಯಾಬಿಟಿಸ್ ರಿವರ್ಸಲ್ ನಲ್ಲಿ ಮಾಡಿರುವ ಸಂಶೋಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ಕೊಟ್ಟು ಗುರುತಿಸಿವೆ.\u003c\/p\u003e","brand":"Dr. Preetham. B","offers":[{"title":"Default Title","offer_id":47673868484867,"sku":"HB00005503182","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DiabetesReversalTips_51db637c-3df0-4004-90c0-7f78a36e94cb.jpg?v=1769246143","url":"https:\/\/harivubooks.com\/products\/diabetes-reversal-tips-dr-preetham-b-kannada-book","provider":"Harivu Books","version":"1.0","type":"link"}