ಶ್ರೀನಿಧಿ ಸುಬ್ರಹ್ಮಣ್ಯ
Publisher:
Couldn't load pickup availability
ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ, ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. “ವಿಷ್ಣುಗುಪ್ತ" ಎನ್ನುವುದು ಚಾಣಕ್ಯನ ನಿಜವಾದ ಹೆಸರು. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರಿನ ಜೊತೆ ಒಪ್ಪಂದ ಮಾಡಿಕೊಂಡು, ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಆಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೇ ಚಂದ್ರಗುಪ್ತ ಮೌರ್ಯ. ಅಸಾಧಾರಣ ಪ್ರತಿಭಾವಂತ, ಹಿಡಿದ ಕೆಲಸವನ್ನು ಪಟ್ಟು ಹಿಡಿದು ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ, ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯದಲ್ಲಿ ತುಂಬಾ ಅನುಭವಿ. ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನನ್ನು ಅರಸನಾಗಿ ಮಾಡಿ, ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದವನು ಚಾಣಕ್ಯ. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇದು. ದಿ ಗುಂಡುರಾಮಯ್ಯನವರ "ಚಾಣಕ್ಯ ತಂತ್ರ' ಆಕರ್ಷಕ ಶೈಲಿ, ಕಥನ ತಂತ್ರದಿಂದ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.
