T. K. Ramrao
Publisher - ವಸಂತ ಪ್ರಕಾಶನ
- Free Shipping
- Cash on Delivery (COD) Available
Couldn't load pickup availability
ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.
ಟಿ. ಕೆ.ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್ ಅವರ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.
ಆಸರೆಯ ಗೊಂಬೆ, ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಲಿ ಕೈ, ಕಪ್ಪು ಕೈ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ಹೀಗೆ ಟಿ.ಕೆ. ರಾಮರಾವ್ ಅವರ ಅನೇಕ ಕೃತಿಗಳು ಕನ್ನಡಿಗರ ಕೈ ಸೇರಲಿವೆ.
ಧೃತಿ ಪ್ರಕಾಶನ
