Skip to product information
1 of 1

Deviprasad Chattopadhyaya

ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ವಿಜ್ಞಾನ

ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ವಿಜ್ಞಾನ

Publisher - ನವಕರ್ನಾಟಕ ಪ್ರಕಾಶನ

Regular price Rs. 45.00
Regular price Rs. 45.00 Sale price Rs. 45.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 104

Type - Paperback

ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ಸಾಧನೆಗೆ ಮಹತ್ವದ ಸ್ಥಾನ. ಪ್ರಾಚೀನ ಋಷಿ-ಮುನಿಗಳು ಆತ್ಮ-ಮೋಕ್ಷಗಳ ಚಿಂತನೆಯಲ್ಲಿ ಸಂಪೂರ್ಣ ಮುಳುಗಿಹೋಗಿ, ಪ್ರಕೃತಿಯ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಆದುದರಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನ ಹಾಗೂ ವೈಜ್ಞಾನಿಕ ಸತ್ವಗಳನ್ನು ಹುಡುಕುವುದು ನಿರರ್ಥಕ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ.

ಆದರೆ ಕೆಲವರಾದರೂ ವಿಜ್ಞಾನದ ಹುಡುಕಾಟದಲ್ಲಿ ನಿರತರಾಗಿದ್ದರು. ವೈಜ್ಞಾನಿಕ ಸತ್ವವನ್ನು ಸಂರಕ್ಷಿಸಿ ಇರಿಸಲು ಪ್ರಯತ್ನಿಸಿದ್ದರು. ವೈದ್ಯ ಮತ್ತು ಚಿಕಿತ್ಸಾ ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು, ಗ್ರಂಥಗಳನ್ನೂ ರಚಿಸಿದ್ದರು. ಆಧ್ಯಾತ್ಮಿಕ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಾಗಿಯೇ ಇದ್ದು, ಮೇಲೆ ಹೇಳಿದ ವಿಜ್ಞಾನಗಳು ಬೆಳೆಯಲು ಸಾಕಷ್ಟು ಅಡಚಣೆಗಳೂ ಇದ್ದವು. ಅಂತಹ ಅಡಚಣೆಗಳಿಗೆ ಇದ್ದ ಮುಖ್ಯ ಕಾರಣ ಪ್ರತಿ- ವಿಜ್ಞಾನದ ಸಮರ್ಥನೆಗಾಗಿ ಅಂದಿನ ಶಾಸಕ ಸಮುದಾಯ ಟೊಂಕ ಕಟ್ಟಿ ನಿಂತಿದ್ದು.

ಪ್ರಾಚೀನ ಭಾರತದಲ್ಲಿ ಚಿಕಿತ್ಸಾ ವಿಜ್ಞಾನ ನಡೆದು ಬಂದ ದಾರಿಯನ್ನು, ಅದು ಎದುರಿಸಿದ, ಎದುರಿಸಬೇಕಾಗಿ ಬಂದ ಸಮಸ್ಯೆಗಳನ್ನು ಈ ಕೃತಿಯ ಲೇಖಕರಾದ ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಇಲ್ಲಿ ಚರ್ಚಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಬರೆದಿರುವ ಈ ಕೃತಿಯನ್ನು ಶ್ರೀ ಜಿ. ಕುಮಾರಪ್ಪ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ಲೇಖಕರ 'ಮಾತೆಯರು ಮಾನ್ಯರಾಗಿದ್ದಾಗ', 'ಪ್ರತಿರೋಧ', 'ಸಂಶೋಧನೆಯ ಹಾದಿ', ಮತ್ತು 'ಇದು ಮುಗಿಯದ ಕಥೆ' ಎಂಬ ಕೃತಿಗಳನ್ನು ಸಹ ಶ್ರೀ ಕುಮಾರಪ್ಪರವರು ಕನ್ನಡಕ್ಕೆ ಅನುವಾದಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)