{"product_id":"desi-kannada-parampare-naadu-nudi-hi-chi-boralingaiah-kannada-book","title":"ದೇಸಿ ಕನ್ನಡ ಪರಂಪರೆ","description":"\u003cp\u003eಕನ್ನಡವಷ್ಟೇ ಅಲ್ಲದೆ ಭಾರತದ ಹಲವು ಭಾಷೆಗಳಿಗೆ ಸಾಹಿತ್ಯಕ ಸ್ಥಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜೈನಕವಿಗಳಿಗೆ ಸಲ್ಲುತ್ತದೆ. ಕನ್ನಡದಲ್ಲಂತೂ ಅದರ ದೇಶಿತನದ ಸಿರಿಗೆ ಸಂಸ್ಕೃತದ ಸಿಹಿಯನ್ನು ಹದವಾಗಿ ಬೆರೆಸಿ ನಾಡಿದವರು ಜೈನಕವಿಗಳು, ಜನಪದ ಜಾನಪದಗಳನ್ನು ಶಾಸ್ತ್ರ, ಸಂಹಿತೆಗಳೊಂದಿಗೆ ಸುಂದರವಾಗಿ ಪೋಣಿಸಿದವರು-ಪಂಪ, ರನ್ನ, ಜನ್ನ ಮೊದಲಾದ ಮಾರ್ಗಕವಿಗಳು.\u003c\/p\u003e\n\u003cp\u003eಸಮಗ್ರ ಜೈನಸಾಹಿತ್ಯವನ್ನು ಹತ್ತೊಂಬತ್ತು ಸಂಪುಟಗಳಲ್ಲಿ ೨೦೦೬ರಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಅವುಗಳ ಪೈಕಿ ಹೆಚ್ಚಿನವು ಬೇಗನೆ ಮಾರಾಟವಾಗಿ ಸಾಹಿತ್ಯಾಸಕ್ತರಿಂದ ಬೇಡಿಕೆಯಲ್ಲಿದ್ದವು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯವು ಇವುಗಳ ಪುನರ್ ಮುದ್ರಣವನ್ನು ಕೈಗೆತ್ತಿಕೊಂಡಿದೆ.\u003c\/p\u003e\n\u003cp\u003eಈ ಪುನರ್ಮುದ್ರಣ ಸಾಧ್ಯವಾಗುತ್ತಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೬ರಲ್ಲಿ ಸ್ಥಾಪನೆಯಾದ 'ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ'ಕ್ಕೆ ಕರ್ನಾಟಕ ಸರ್ಕಾರವು ನೀಡಿರುವ ಆರ್ಥಿಕ ನೆರವಿನಿಂದಾಗಿ.\u003c\/p\u003e\n\u003cp\u003e\"ಜನ್ನ ಸಂಪುಟ'ವನ್ನು ನಾಡಿನ ಹಿರಿಯ ವಿದ್ವಾಂಸರಲ್ಲೊಬ್ಬರಾದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.\u003c\/p\u003e\n\u003cp\u003e॥ ಡಾ. ಮಲ್ಲಿಕಾ. ಎಸ್. ಘಂಟಿ\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Hi. Chi. Boralingaiah","offers":[{"title":"Default Title","offer_id":47881046622467,"sku":"HB00006864","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DesiKannadaParampare_39f1ef2f-0bd1-4e76-8da0-f111892b5ea8.jpg?v=1774616716","url":"https:\/\/harivubooks.com\/products\/desi-kannada-parampare-naadu-nudi-hi-chi-boralingaiah-kannada-book","provider":"Harivu Books","version":"1.0","type":"link"}