{"product_id":"deedekare-jameenu-collection-of-stories-mallikarjuna-shellikeri-kannada-book","title":"ದೀಡೆಕರೆ ಜಮೀನು","description":"\u003cp\u003eಎಲ್ಲಿ ಕಷ್ಟ ಇದೆಯೋ ಅಲ್ಲಿ ಕತೆ ಇದೆ. ಎಲ್ಲಿ ನೋವಿದೆಯೋ ಆ ಚಿತ್ರಕ್ಕೆ ನೆನಪಲ್ಲಿ ಉಳಿಯುವ ಶಕ್ತಿ ಇರುತ್ತದೆ. ಅದರಿಂದಾಗಿಯೇ ಕತೆಗಾರ ಓದುಗನ ಮನಸ್ಸಲ್ಲಿ ಜಾಗ ಸಂಪಾದಿಸುತ್ತಾನೆ. ಇದೊಂದು ಆಕರ್ಷಕ ಭಾಷೆಯಲ್ಲಿರುವ ಆದರೆ ಸಂಕೀರ್ಣ ಭಾವಗಳನ್ನು ಒಳಗೊಂಡ ವಿಶಿಷ್ಟ ಕಥಾ ಸಂಕಲನ.\u003c\/p\u003e\n\u003cp\u003e-ಕನ್ನಡಪ್ರಭ\u003c\/p\u003e\n\u003cp\u003eಇಲ್ಲಿನ ಕಥೆಗಳ ಕೇಂದ್ರದಲ್ಲಿರುವುದು ರೈತರು, ಮಹಿಳೆಯರು ಹಾಗೂ ಜನ ಸಾಮಾನ್ಯರು. ವರ್ತಮಾನದ ಸಣ್ಣ ಕಂಪನಕ್ಕೂ ತಲ್ಲಣಿಸಿ ಹೋಗುವ ಬದುಕುಗಳನ್ನು ಕತೆಗಾರರು ಆಸ್ಥೆಯಿಂದ, ಪ್ರಾಮಾಣಿಕತೆಯಿಂದ ಚಿತ್ರಿಸಿದ್ದಾರೆ. ಮೌಲ್ಯಪ್ರಧಾನ ವ್ಯವಸ್ಥೆಯ ಕಾಳಜಿ ಕತೆಗಳಲ್ಲಿ ಕಣ್ಣಿಗೆ ಕಟ್ಟುವಂತಿದೆ. ಮನುಷ್ಯನ ಕ್ರೌರ್ಯದ ವಿವಿಧ ಆಯಾಮಗಳನ್ನು ಕತೆಗಳು ಚಿತ್ರಿಸುತ್ತವೆ.\u003c\/p\u003e\n\u003cp\u003e-ಮಯೂರ\u003c\/p\u003e\n\u003cp\u003eಇಲ್ಲಿನ ಕಥೆಗಳ ಹೆಸರುಗಳನ್ನು ಬದಲಿಸಿ ತುಸು ಮಾರ್ಪಾಡು ಮಾಡಿದರೆ ಅವು ಯಾವುದೇ ಊರಿನ ಕಥೆಯೂ ಆಗುವಂತಹ ವಸ್ತು, ಸಂದರ್ಭ ಹೊಂದಿವೆ. ಸಂಕಲನದಲ್ಲಿ ಬಳಕೆಯಾಗಿರುವ ಉತ್ತರ ಕರ್ನಾಟಕದ ಆಡುಭಾಷೆ ಕಥೆಗಳಿಗೆ ಒಂದು ವಿಶಿಷ್ಟ ಕಾಂತಿ ನೀಡಿದೆ.\u003c\/p\u003e\n\u003cp\u003e-ಉದಯವಾಣಿ\u003c\/p\u003e\n\u003cp\u003eಈ ಸಂಕಲನದಲ್ಲಿನ ಕಥೆಗಳು ಅದೆಷ್ಟರ ಮಟ್ಟಿಗೆ ಉತ್ಕೃಷ್ಟವಾಗಿವೆಯೆಂದರೆ ಓದುಗನನ್ನು ಅನೂಹ್ಯವಾದ ಲೋಕವೊಂದಕ್ಕೆ ಸ್ವಯಂ ತಾವೇ ಕರೆದುಕೊಂಡು ಹೋಗುತ್ತವೆ. ಆ ಲೋಕವೆಂಬ ಸಾಮಾಜಿಕ, ರಾಜಕೀಯ ಪರಿಸರದ ಇಂಚಿಂಚೂ ಪರಿಚಯ ಮಾಡಿಕೊಡುತ್ತ ಅವು ನಮ್ಮದೆ ಬದುಕಿನ ಅನುಭವಗಳೆಂಬ ಭ್ರಮೆಯನ್ನು ಹುಟ್ಟಿಸುತ್ತವೆ.\u003c\/p\u003e\n\u003cp\u003e-ವಿಜಯ ಕರ್ನಾಟಕ\u003c\/p\u003e\n\u003cp\u003eಗ್ರಾಮೀಣ ಪರಿಸರವನ್ನು ಹಾಗೂ ಅಲ್ಲಿ ನಡೆಯುವ ವಿದ್ಯಮಾನಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಬಲ್ಲ ಸಾಮರ್ಥ್ಯವಿರುವ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಈ ಸಂಕಲನದ ಎಂಟು ಕಥೆಗಳು ಗ್ರಾಮಭಾರತದ ಅಸ್ವಾಭಾವಿಕ\/ ಅಮಾನವೀಯ ಪ್ರಸಂಗಗಳನ್ನು ತೀರಾ ಹತ್ತಿರದಿಂದ ಕಾಣಿಸಿ ಕೊಡುತ್ತವೆ. ಇಲ್ಲಿನ ಬಹಳಷ್ಟು ಕಥೆಗಳು ತಮ್ಮ ಮೆಲುದನಿಯ ನಿರೂಪಣೆಯಿಂದ ಹಾಗೂ ತೀವ್ರ ಮಾನವೀಯ ಕಾಳಜಿಯಿಂದ ಓದುಗರನ್ನು ಗೆದ್ದುಕೊಳ್ಳುತ್ತವೆ.\u003cbr\u003e\u003c\/p\u003e","brand":"Mallikarjuna Shellikeri","offers":[{"title":"Default Title","offer_id":47833337069827,"sku":"HB00006755","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DeedekareJameenu.jpg?v=1773295878","url":"https:\/\/harivubooks.com\/products\/deedekare-jameenu-collection-of-stories-mallikarjuna-shellikeri-kannada-book","provider":"Harivu Books","version":"1.0","type":"link"}