{"product_id":"datta-kadinalli-tammi-mistry-novel-girimane-shyamarao-kannada-book","title":"ದಟ್ಟ ಕಾಡಿನಲ್ಲಿ ಟಾಮಿ","description":"\u003cp\u003eಮಕ್ಕಳು ಕತೆ ಓದುವುದರಿಂದ ಏನು ಪ್ರಯೋಜನ?\u003c\/p\u003e\n\u003cp\u003eಅದರ ಲಾಭ ಅನೇಕ. ಅತಿಮಾನುಷ ಅಥವಾ ಅತಿಯಾದ ಕಲ್ಪನೆಯ ಕೃತಿಗಳ ಹೊರತಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಮಕ್ಕಳು ಓದುವಂತಹಾ ಕೃತಿಗಳು ಬದುಕಿನ ಅನುಭವದ ಕೊರತೆಯನ್ನು ನೀಗಿಸುತ್ತವೆ. ಹಣ ಸಂಪಾದಿಸುವ ದಾರಿ ಮಾತ್ರ ತೋರಿಸುವ ಇವತ್ತಿನ ವೃತ್ತಿಶಿಕ್ಷಣ ಆ ಅನುಭವಗಳನ್ನು ದೂರ ಮಾಡುತ್ತದೆ. ಮಲೆನಾಡಿನ ಪ್ರಕೃತಿ, ಪ್ರಾಣಿ-ಪಕ್ಷಿಗಳೊಂದಿಗಿನ ರೋಚಕ ಘಟನೆಗಳನ್ನೊಳಗೊಂಡ ಮಕ್ಕಳ ಕತೆಗಳು ಇಲ್ಲವೇ ಇಲ್ಲ ಎಂಬಷ್ಟಿರುವುದನ್ನು ಮನಗಂಡು ಜನಪ್ರಿಯ ಮಲೆನಾಡಿನ ರೋಚಕಕತೆಗಳ ಸರಣಿಯ ಜೊತೆಗೆ ಮಕ್ಕಳಿಗಾಗಿಯೇ ಒಂದು ಸರಣಿಯನ್ನು ಕೊಡುವ ಯೋಚನೆಯಿಂದ ಈ ಸರಣಿಯನ್ನೂ ಬರೆಯುತ್ತಿರುವೆ. ಇಂದಿನ ಮಕ್ಕಳು ಮೊಬೈಲಿನಲ್ಲಿ ಇಲಿ, ಹುಲಿಯನ್ನು ತಿನ್ನುವ; ಹಲ್ಲಿ, ಹುಲಿ-ಸಿಂಹಗಳನ್ನು ತಿನ್ನುವ ಕೃತ್ರಿಮವಾದ ಅವಾಸ್ತವ ವೀಡಿಯೋಗಳನ್ನು ನೋಡಿ ಅದೇ ಸತ್ಯ ಎಂದು ಭ್ರಮಿಸುವ ಅಪಾಯಕಾರಿ ಪ್ರವೃತ್ತಿಯನ್ನು ತೊಡೆಯಲು ಇದು ಸಹಕಾರಿಯಾಗಬಹುದು.\u003c\/p\u003e\n\u003cp\u003eಇದು ಈ ಸರಣಿಯ2 ನೆಯ ಕೃತಿ. ದೊಡ್ಡವರೂ ಓದುವಂಥದ್ದು.\u003c\/p\u003e\n\u003cp\u003eಹೆತ್ತವರಲ್ಲೊಂದು ವಿನಂತಿ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರಲ್ಲಿ ಓದುವ ಆಸಕ್ತಿ ಮೂಡಿಸಿ ವಾಸ್ತವಕ್ಕೆ ಹತ್ತಿರವಾದ ಕೃತಿಗಳನ್ನು ಮಕ್ಕಳ ಕೈಗೆ ಕೊಡಿ. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಕೃತಿಗಳನ್ನು ಬರೆದವನಾಗಿ ಈ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ನೀವು ಕೊಡಿಸದೆ ಅವರಾಗಿ ಕೊಳ್ಳುವುದು ಸಾಧ್ಯವಿಲ್ಲ. ಓದುವ ಹವ್ಯಾಸವೂ ಬೆಳೆಯುವುದಿಲ್ಲ.\u003c\/p\u003e\n\u003cp\u003eಗಿರಿಮನೆ ಶ್ಯಾಮರಾವ್\u003c\/p\u003e","brand":"Girimane Shyamarao","offers":[{"title":"Default Title","offer_id":47674239123715,"sku":"HB00005503192","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/dattakadinallitammibackpage_2.jpg?v=1769254847","url":"https:\/\/harivubooks.com\/products\/datta-kadinalli-tammi-mistry-novel-girimane-shyamarao-kannada-book","provider":"Harivu Books","version":"1.0","type":"link"}