Ravi Belagere
Publisher - ಭಾವನಾ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಣ್ಣಗೆ ಹನಿಯುವ ಒಂದು ಸಂಜೆ ನಾರಿಮನ್ ಪಾಯಿಂಟ್‌ನ ಕಟ್ಟೆಯ ಮೇಲೆ ನಿಂತು ಭೋರ್ಗರೆಯುವ ಸಮುದ್ರ ನೋಡುತ್ತಿದ್ದರೆ ಮನಸು ಹುಚ್ಚೆದ್ದು ಹೋಗಿತ್ತು, ಮುಂಬಯಿ ಎಂಬ ಮಹಾನಗರಿಯನ್ನು ಪ್ರೀತಿಸಲಿಕ್ಕೆ ನನಗೆ ಇನ್ನೊಂದೇ ಒಂದು ಕಾರಣ ಬೇಕು ಅನ್ನಿಸಲಿಲ್ಲ. ಅವತ್ತು ಕಣ್ಣುಂಬ ಸಮುದ್ರವನ್ನೇ ಕುಡಿದಿದ್ದೆ.
ಆದರೆ ಜಗತ್ತಿನ ಪ್ರತಿ ಒಳ್ಳೆಯದೂ ಮುಗಿದು ಹೋಗುತ್ತದಂತೆ. ನನ್ನ ಪ್ರೀತಿಯ ಆ ಸಂಜೆಯೂ ಮುಗಿದು ಹೋಯಿತು. ಆನಂತರ ಬಿಚ್ಚಿಕೊಂಡದ್ದು ಕತ್ತಲು. ಮುಂಬಯಿಯ ಕತ್ತಲ ಶೋಕ, ಅದರಲ್ಲೊಂದು ಅಂಡರ್‌ವರ್ಲ್ಡ್, ಈಗಿದ್ದ ಈಗಿಲ್ಲ ಎಂಬಂತೆ ಮರೆಯಾಗುವ ಸಾರ್ವ ಶೂಟರ್, ಲೇಡೀಸ್ ಬಾರ್‌ಗಳಲ್ಲಿ ಮೈಯನ್ನೆಲ್ಲ ಗಾಳಿಗೆ ಬಿಸಾಕಿ ಕುಣಿಯುವ ಹುಡುಗಿಯರು, ಶೂಟರ್‌ನ ಟೊಂಕದಿಂದ ಹೊರಗೆ ಬರುವ ಮಿರಿಗುಟ್ಟುವ ಹೆನ್ನಾಗರದಂಥ ಪಿಸ್ಟಲ್, ಚಿಕ್ಕ ಸದ್ದು, ದೊಡ್ಡ ಚೀತ್ಕಾರ: ಕಿಸೀನೆ ಸೇಠ್ ಕೋ ಮಾರ್ದಿಯಾ!
ಅಂಡರ್‌ವರ್ಲ್ಡ್ ಅಂದರೆ ಅಷ್ಟೇ ಅಲ್ಲ. ವಂಚನೆ, ದಗಾ, ಚಿಕ್ಕ ತಪ್ಪು, ದೊಡ್ಡ ಕಂದಾಯ, ಗ್ಯಾಂಗ್‌ವಾರ್, ಹಿಂಡು ಹಿಂಡು ಜನ, ಮಾರಣ ಹೋಮ ಪೊಲೀಸ್ ಎನ್‌ಕೌಂಟರ್, ಚಿಕ್ಕ ಸುದ್ದಿ-ಹೀಗೆ ಇದು ಸಾವಿರ ಕೊವೆಗಳ ಮತ್ತು ಇಂಥ ಹುತ್ತಕ್ಕೆ ಕೈ ಹಾಕಿ ಮುಂಬಯಿ ಭೂಗತದ ಇತಿಹಾಸವನ್ನು 197000 ದಾಖಲಿಸಿಕೊಂಡು ಬಂದಿದ್ದೇನೆ. ಟೇಮರ್ ಮೊಹಲ್ಲಾದ ಪಾಕ್ಕೋಡಿಯಾ ಸೀಟ್ ನಿಂದ ಪಾಕಿಸ್ತಾನದ ಕರಾಚಿಯ ತನಕ ದಾವೂದ್ ಇಬಾಹಿಂನ ಹೆಜ್ಜೆ ಜಾಡು ಹುಡುಕುವ ಯತ್ನ ಮಾಡಿದ್ದೇನೆ. ನಿಮಗಿಷ್ಟವಾದೀತು.
↑ ರವಿ ಬೆಳಗೆರೆ
ಭಾವನಾ ಪ್ರಕಾಶನ
