{"product_id":"chitte-hejje-jaadu-novel-jogi-kannada-book","title":"ಚಿಟ್ಟೆ ಹೆಜ್ಜೆ ಜಾಡು","description":"\u003cdiv class=\"Polaris-Popover__ContentContainer\"\u003e\n\u003cdiv class=\"Polaris-Popover__Content Polaris-Popover__Content--fluidContent\" id=\":r1ie:\"\u003e\n\u003cdiv data-polaris-scrollable=\"true\" class=\"Polaris-Popover__Pane Polaris-Scrollable Polaris-Scrollable--vertical Polaris-Scrollable--horizontal Polaris-Scrollable--scrollbarWidthThin\"\u003e\n\u003cdiv class=\"_PopoverContainer_1o103_1\"\u003e\n\u003cdiv data-polaris-scrollable=\"true\" class=\"Polaris-Popover__Pane Polaris-Scrollable Polaris-Scrollable--vertical Polaris-Scrollable--horizontal Polaris-Scrollable--scrollbarWidthThin\"\u003e\n\u003cdiv class=\"_Container_1kcqz_1\"\u003e\n\u003cdiv class=\"_Vertical_1kcqz_9\"\u003e\n\u003cdiv class=\"_VerticalLayout_tmqkl_40\"\u003e\n\u003cdiv aria-live=\"polite\" class=\"_OutputSection_tmqkl_1\"\u003e\n\u003cdiv class=\"_ContentWrapper_tmqkl_19\"\u003e\n\u003cdiv data-polaris-scrollable=\"true\" class=\"_Content_tmqkl_19 _VerticalContent_tmqkl_45 Polaris-Scrollable Polaris-Scrollable--vertical Polaris-Scrollable--horizontal Polaris-Scrollable--scrollbarWidthThin\"\u003e\n\u003cdiv class=\"Polaris-Box\"\u003e\n\u003cdiv class=\"Polaris-InlineStack\"\u003e\n\u003cdiv class=\"_TextOutput_nect0_1\"\u003e\n\u003cp\u003eಈ ಜೋಗಿ ಎಂಬ ಕತೆಗಾರ ಅಥವಾ ಕಾದಂಬರಿಕಾರ ಅಥವಾ ವಿಮರ್ಶಕ ಅಥವಾ ಸಿನಿಮಾ ಸಾಹಿತಿ ಅಥವಾ ಕಿರುತೆರೆಯ ಯುಗಪುರುಷ ಅಥವಾ ಪತ್ರಕರ್ತ ಅಥವಾ ಚಿಂತಕ ಅಥವಾ ಕಿಲಾಡಿ ಅಥವಾ ಸಭ್ಯತೆಯ ವ್ಯಕ್ತಿ. ನಿಜಕ್ಕೂ ಪ್ರತಿಭೆಯ ಗಿರಿ, ಅವನೇ ಅದಕ್ಕೆ ಗರಿ.\u003c\/p\u003e\n\u003cp\u003eಹಾಗೆಂದರೆ ಅಗೋ ಹೊಗಳಿದ ಎನ್ನಬಾರದು.\u003c\/p\u003e\n\u003cp\u003eಜೋಗಿಯನ್ನು ಬಲ್ಲವರೇ ಬಲ್ಲರು.\u003c\/p\u003e\n\u003cp\u003eಬೆಲ್ಲವನ್ನು ಮೆಲ್ಲುವವರಂತೆ.\u003c\/p\u003e\n\u003cp\u003eಜೋಗಿಯೊಳಗೊಬ್ಬ ಸಂತನಿದ್ದಾನೆ.\u003c\/p\u003e\n\u003cp\u003eಅದನ್ನು ಬಾಲ್ಯದಲ್ಲೇ ಕಂಡ ಕಾರಣಕ್ಕೆ ಹೇಳುತ್ತಿದ್ದೇನೆ, ಆತ ಎಂಥವರನ್ನೂ ಸಂತೋಷವಾಗಿಡಬಲ್ಲ ಮಾಂತ್ರಿಕತೆ ಹೊಂದಿರುವುದನ್ನೂ ಹಾಗೇ ಬದುಕುವುದನ್ನು ಕಲಿಯುವುದನ್ನೂ ಕಲಿಸಬಲ್ಲ ಅನುಭವಮಂಟಪವನ್ನು ತಾನಾಗಿ ಕೇಳಿದವರಿಗೆಲ್ಲಾ ಕಟ್ಟಿಕೊಡಬಲ್ಲ.\u003c\/p\u003e\n\u003cp\u003eದೇವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದ ಈ ಜೋಗಿಯಲ್ಲಿ ಇನ್ನೇನು ಕಾಣಬಹುದು..ಹೇಳಿ. ಮಾನವೀಯತೆ ಜೋಗಿ ಬರಹಗಳ ಒಳಒಸರು. ಆತ ಬಾಲ್ಯದಲ್ಲಿ ಬರೆಯುತ್ತಿದ್ದ ಕತೆಗಳಿಂದ ತೊಡಗಿ ಈ ಹದಿಮೂರನೇ ಕೃತಿಯ ತನಕ ಎಲ್ಲವನ್ನೂ ಓದಿದ ಹೆಗ್ಗಳಿಕೆಯಿಂದ ಹೇಳುವೆ. ಎಲ್ಲೂ ಯಾರನ್ನೂ ನೋಯಿಸದ ಜೋಗಿ ಬರಹಗಳ ಮೂಲಕ ಜಗತ್ತು ತನ್ನನ್ನು ಪ್ರೀತಿಸುವಂತೆ ಮಾಡಿದರೆ ಅದಕ್ಕೆ ನುಡಿದಂತೆ ನಡೆದದ್ದು ಕಾರಣ. ಜೋಗಿ ಬರಹಗಳು ಕನ್ನಡದಲ್ಲಿ ಜೋಪಾನವಾಗಿರುವುದಕ್ಕೆ ಆತ ಅಕ್ಷರಗಳಿಗೆ ಟಂಕಿಸಿದ ಆ ಒಲುಮೆಯೇ ಕಾರಣ.\u003c\/p\u003e\n\u003cp\u003eಜೋಗಿ ಯಾನೆ ಹತ್ವಾರ ಗಿರೀಶ ರಾವು ಬರಹಗಳಿಗೆ ಪ್ರತ್ಯೇಕ ಒಳನೋಟಗಳಿವೆ ಎಂಬುದನ್ನು ಓದಿದವರೆಲ್ಲಾ ಒಪ್ಪಿಕೊಳ್ಳುತ್ತಾರೆ. ಎಂದೂ ಕೆಡದ ಹಾಗೇ ತನ್ನ ಬರಹಗಳನ್ನು ಸಿದ್ಧಗೊಳಿಸುವ ಆತನ ಪ್ರಾವೀಣ್ಯಕ್ಕೆ ಆತ ಬರೆದುದೇ ಜಾಮೀನು ನಿಲ್ಲುತ್ತವೆ.\u003c\/p\u003e\n\u003cp\u003eಅದು ಚಿಟ್ಟೆ ಹೆಜ್ಜೆ ಹಾಕಿದಂತೆ.. ಇಂದರಳಿದ ಹೂವಿಗೆ, ನಾಳೆ ಅರಳೋ ಮೊಗ್ಗಿಗೆ...\u003c\/p\u003e\n\u003cp\u003e- ಗೋಪಾಲಕೃಷ್ಣ ಕುಂಟಿನಿ\u003c\/p\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e\n\u003c\/div\u003e","brand":"Jogi","offers":[{"title":"Default Title","offer_id":47678608539907,"sku":"HB00005503206","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChitteHejjeyaJaadufp.jpg?v=1769361023","url":"https:\/\/harivubooks.com\/products\/chitte-hejje-jaadu-novel-jogi-kannada-book","provider":"Harivu Books","version":"1.0","type":"link"}