{"product_id":"buddhana-raati-novel-uttam-kamble-to-kannada-chandrakant-pokale-kannnada-book","title":"ಬುದ್ಧನ ರಾಟಿ","description":"\u003cp data-path-to-node=\"3,0,0\"\u003eಉತ್ತಮ ಕಾಂಬಳೆಯವರ 'ಬುದ್ಧನ ರಾಟಿ' ಎಂಬ ಕೃತಿಯೂ ಮಹಾರಾಷ್ಟ್ರದ ವೈಚಾರಿಕ ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಈ ಕೃತಿಯಿಂದಾಗಿ ಹಿಂದಿನ ಪರಂಪರಾಗತ ವೈಚಾರಿಕ ಅಲೇಖವು ಬದಲಾಗುವ ಸಾಧ್ಯತೆಯಿದೆ. ಭಾರತೀಯ ಸಮಾಜದಲ್ಲಿಯ ತಳವರ್ಗಕ್ಕೆ ತಳ್ಳಲಾದ ಬೌದ್ಧ ನಾಯಕನು ಸ್ವಗ್ರಹಿಕೆಯ ಬಲದಿಂದ ಉಚ್ಚ ದರ್ಜೆಯ ತಾತ್ವಿಕ ಪಾತಳಿಯನ್ನು ಹೇಗೆ ತಲುಪಬಲ್ಲ. ಎಂಬುದನ್ನು ಕಾಂಬಳೆ ಅವರು ಈ ಕಾದಂಬರಿಯ ನಾಯಕನ ಸ್ವಾನುಭವದ ಸಹಾಯದಿಂದ ಪ್ರಭಾವಶಾಲಿಯಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತಾಂತರದ ಬೌದ್ಧ ನಾಯಕನು ಕೇವಲ ತಿನ್ನಲೆಂದು ಬದುಕದೆ, ಬದಲಿಗೆ ಮೌಲ್ಯಾಧಾರಿತ ಜೀವನವನ್ನು ಸಾಗಿಸಲೆಂದು ತಿನ್ನುತ್ತಿರುತ್ತಾನೆ ಎಂಬ ಮಹತ್ವದ ಸೂತ್ರವನ್ನು ಕಾಂಬಳೆಯವರು ಮಂಡಿಸುತ್ತಾರೆ. ಬೌದ್ಧ ನಾಯಕನಲ್ಲಿ ಮಾನವೀಯ ಮೌಲ್ಯವನ್ನು ಪರಿಗಣಿಸುವ ನೈತಿಕ ಸಾಮರ್ಥ್ಯವು ಮತಾಂತರದಿಂದ ಹೇಗೆ ಬಂತು ಎಂಬುದನ್ನು ಹೇಳುತ್ತಾರೆ. ಕಾಂಬಳೆ ಅವರ ರಾಟಿಯ ಕಲ್ಪನೆಯು ಬುದ್ಧನ ಧರ್ಮ ಪರಿವರ್ತನೆಯ ಚಕ್ರವನ್ನು ಅರ್ಥದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ.\u003c\/p\u003e\n\u003cp data-path-to-node=\"3,0,0\"\u003e-ಡಾ. ಗೋಪಾಲ ಗುರು ಖ್ಯಾತ ವಿಚಾರವಾದಿಗಳು, ದಿಲ್ಲಿ \u003c\/p\u003e\n\u003cp data-path-to-node=\"2\" id=\"p-rc_52ae45e84240090d-40\"\u003e\u003c!----\u003e\u003c\/p\u003e","brand":"Uttam Kamble, To Kannada : Chandrakant Pokale","offers":[{"title":"Default Title","offer_id":49910832464131,"sku":"HB00007777","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BuddhanaRaati.jpg?v=1792494710","url":"https:\/\/harivubooks.com\/products\/buddhana-raati-novel-uttam-kamble-to-kannada-chandrakant-pokale-kannnada-book","provider":"Harivu Books","version":"1.0","type":"link"}