{"product_id":"brhamanda-manava-ithihasa-summary-madivalappa-tattimani-kannada-book","title":"ಬ್ರಹ್ಮಾಂಡ ಮಾನವ ಇತಿಹಾಸ","description":"\u003cp\u003eಮಡಿವಾಳಪ್ಪ ತಟ್ಟಿಮನಿ ಮೂಲತಃ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯವರು. ಮೈಸೂರು ವಿಶ್ವವಿದ್ಯಾಲಯದಿಂದ 1984 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ನಂತರ ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಮಾಸ್ಟರ್ ಆಫ್ ಟೆಕ್ನಾಲಜಿ ಪದವಿ ಪಡೆದು, ಬೆಂಗಳೂರಿನ ಎಚ್.ಎಮ್.ಟಿ. ಕಾರ್ಖಾನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದರು. 2000 ಇಸ್ವಿಯಲ್ಲಿ ಕೆನಡಾ ದೇಶಕ್ಕೆ ತೆರಳಿ, ತಮ್ಮ ಕುಟುಂಬದೊಂದಿಗೆ ಕೆನಡಾದಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದಾರೆ.\u003c\/p\u003e\n\u003cp\u003eಸುಮಾರು 50000 ವರ್ಷಗಳ ಹಿಂದೆ ಉಪಕರಣಗಳು ಹೆಚ್ಚು ಆಧುನಿಕ ಗೊಂಡವು ಹಾಗೂ ಸಂಸ್ಕೃತಿ ಇನ್ನೂ ಹೆಚ್ಚು ವೃದ್ಧಿಸಿತು. ಬಿಲ್ಲು ಬಾಣಗಳು, ಭಾಷೆಯ ಬಳಕೆ, ಪರಸ್ಪರ ಸಹಕಾರ, ಜ್ಞಾನ ವೃದ್ಧಿ ಹಾಗೂ ಜ್ಞಾನದ ಸಂರಕ್ಷಣೆಗಳಿಂದ ಮಾನವನು ಹೆಚ್ಚು ಶಕ್ತಿಶಾಲಿಯಾದನು. ಅದೇ ಸಮಯಕ್ಕೆ ಮಾನವರು ಆಫ್ರಿಕಾ ಖಂಡದಿಂದ ಹೊರನಡೆದು ವಿಶ್ವದ ಎಲ್ಲಾ ಮೂಲೆಗಳಿಗೆ ಹರಡಿಕೊಂಡರು. ಮಾನವರು ಆಫ್ರಿಕಾದಿಂದಲೇ ವಿಕಾಸಗೊಂಡು ಹೊರಗೆ ಬಂದರು. ಎಲ್ಲ ಕಡೆ ಹರಡಿಕೊಂಡರು ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳು ಇವೆ, ಅನುವಂಶಿಕ (DNA \u0026amp; genetics) ಸಂಶೋಧನೆಗಳಿಂದ ಇದು ದೃಢಪಟ್ಟಿದೆ. L3 ಹೆಂಗಸು ಎಂಬುವವಳು (L3 woman) ಆಫ್ರಿಕಾದ ಹೊರಗೆ ಇರುವ ಎಲ್ಲಾ ಮಾನವ ರಿಗೆ ಹಾಗೂ ಆಫ್ರಿಕಾದ ಒಳಗೆ ಇರುವ ಕೆಲವು ಮಾನವರಿಗೆ ಪೂರ್ವಜಳು ಎಂಬುದನ್ನು ವೈಜ್ಞಾನಿಕ ಅನುವಂಶಿಕ (mitochondria) ಸಂಶೋಧನೆಗಳಿಂದ ಸಾಬೀತಾಗಿದೆ.\u003c\/p\u003e\n\u003cp\u003eಹೀಗೆ ಮುಂದುವರಿದ ಮಾನವರು ಸುಮಾರು 12000 ವರ್ಷಗಳ ಹಿಂದೆ ಬೇಸಾಯದ ಅವಿಷ್ಕಾರವನ್ನು ಮಾಡುತ್ತಾರೆ. ಈ ಬೆಳವಣಿಗೆ ವಿವಿಧ ವಿಶೇಷ ಕಸುಬುಗಳಿಗೆ ದಾರಿಮಾಡಿಕೊಡುತ್ತದೆ, ಹೀಗೆ ನಾಗರಿಕತೆ ಹುಟ್ಟುತ್ತದೆ. ಇದರಿಂದ ಮನುಷ್ಯರು ಹೆಚ್ಚು ವ್ಯವಸ್ಥಿತ ಹಾಗೂ ದಕ್ಷರಾಗುತ್ತಾರೆ. ನಗರಗಳು, ರಾಜ್ಯಗಳು, ಸಾಮ್ರಾಜ್ಯಗಳು ನಿರ್ಮಾಣವಾಗುತ್ತವೆ. ಸಂವಹನ (communication) ಹೆಚ್ಚು ದಕ್ಷವಾಗುತ್ತದೆ. ಪ್ರಗತಿಯ ವೇಗ ಹೆಚ್ಚುತ್ತದೆ. 500 ವರ್ಷಗಳ ಹಿಂದೆ ವೈಜ್ಞಾನಿಕ ಕ್ರಾಂತಿಯಾಗುತ್ತದೆ, ಖಗೋಳಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಅಭಿವೃದ್ಧಿಗೊಳ್ಳುತ್ತವೆ. ಇವೆಲ್ಲವೂ ಕೈಗಾರಿಕಾ ಕ್ರಾಂತಿಗೆ ಎಡೆಮಾಡಿಕೊಡುತ್ತವೆ. ಕಂಪ್ಯೂಟರ್ಗಳ ಆಗಮನದಿಂದ ಹೆಚ್ಚು ಅವಿಷ್ಕಾರಗಳು, ಹೆಚ್ಚು ದಕ್ಷತೆ, ಇಂಟರ್ನೆಟ್ ಆಗಮನ – ಇವು ಮಾನವನ ಅಭಿವೃದ್ಧಿಗೊಳ್ಳುತ್ತಿರುವ ವಾಸ್ತವ ಸ್ಥಿತಿ,\u003c\/p\u003e\n\u003cp\u003e-ಪುಸ್ತಕದ ಒಳಪುಟಗಳಿಂದ \u003c\/p\u003e","brand":"Madivalappa Tattimani","offers":[{"title":"Default Title","offer_id":47670124282115,"sku":"HB00005503181","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BrhamandaManavaItihasa.jpg?v=1769157936","url":"https:\/\/harivubooks.com\/products\/brhamanda-manava-ithihasa-summary-madivalappa-tattimani-kannada-book","provider":"Harivu Books","version":"1.0","type":"link"}