{"product_id":"boo-nanna-thangi-illavadaga-book-for-children-to-kannada-shrunga-b-v-kannada-book","title":"ಬೂ! ನನ್ನ ತಂಗಿ ಇಲ್ಲವಾದಾಗ","description":"\u003cp\u003eನನ್ನ ತಂಗಿ ಝೋಯ ಆಸ್ಪತ್ರೆಯಲ್ಲಿ ಇದ್ದ ಆ ರಾತ್ರಿ, ಅವಳ ಬಗ್ಗೆ ಒಂದು ಕನಸು ಕಂಡೆ.\u003c\/p\u003e\n\u003cp\u003eಮಾರನೆಯ ದಿನ ಬೆಳಿಗ್ಗೆ, ಅವಳು ತೀರಿಕೊಂಡಿದ್ದಾಳೆ ಅಂತ ಅಮ್ಮ ಹೇಳಿದಳು.\u003c\/p\u003e\n\u003cp\u003eನಾನು ತುಂಬಾ ಅತ್ತ.\u003c\/p\u003e\n\u003cp\u003e\"ಝೋಯ ಸದಾ ನಮ್ಮ ಜೊತೆ ಇರ್ತಾಳೆ ಕಂದ,\" ಅಮ್ಮ ಅಂದಳು.\u003c\/p\u003e\n\u003cp\u003eಅವಳು ಸುಳ್ಳು ಹೇಳುತ್ತಿದ್ದಳು. ನನಗೆ ಗೊತ್ತಿತ್ತು.\u003c\/p\u003e\n\u003cp\u003eನೂರಿಯ ತಂಗಿ ಝೋಯ ತೀರಿಕೊಂಡಾಗ, ನೂರಿಯ ಜಗತ್ತಿನಲ್ಲಿ ನೀರವ ಮೌನ ಆವರಿಸಿತು. ಅವಳಿಗೆ, ತನ್ನ ತಂಗಿ ಎಂದೆಂದಿಗೂ ದೂರವಾದದ್ದು ಗೊತ್ತಿತ್ತು. ಬೂ! \u003c\/p\u003e\n\u003cp\u003eಆದರೆ, ಝೋಯ ಸದಾ ನಮ್ಮ ಜೊತೆಯೇ ಇರುತ್ತಾಳೆ ಅನ್ನುವ ಅಮ್ಮನ ಹುಸಿ ಸುಳ್ಳುಗಳ ಕತೆಯೇನು? ಮತ್ತೆ, ನೂರಿಯನ್ನು ಅವಳ ಪಾಡಿಗೆ ಇರಲು ಬಿಡದ ಝೋಯಳ ಬೆಸ್ಟ್ ಫ್ರೆಂಡ್ ಧಾರಾಳನ್ನು ಏನು ಮಾಡೋದು!\u003c\/p\u003e\n\u003cp\u003eಪ್ರೀತಿ ಹಾಗೂ ಅಗಲಿಕೆಯಲ್ಲಿಯೂ ತುಂಬು ವಿಶ್ವಾಸವನ್ನು ಕಂಡುಕೊಳ್ಳುವ ಒಂದು ನವಿರಾದ ಕತೆ-\"ಬೂ!\"\u003c\/p\u003e","brand":"To Kannada : Shrunga. B. V","offers":[{"title":"Default Title","offer_id":47612240888067,"sku":"HB00005502971","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Boo_NannaThangiIllavadaga.jpg?v=1767964998","url":"https:\/\/harivubooks.com\/products\/boo-nanna-thangi-illavadaga-book-for-children-to-kannada-shrunga-b-v-kannada-book","provider":"Harivu Books","version":"1.0","type":"link"}