{"product_id":"biliya-chadara-novel-dr-guruprasad-kaginele-kannada-book","title":"ಬಿಳಿಯ ಚಾದರ","description":"\u003cp\u003eಕಾದಂಬರಿಯುದ್ದಕ್ಕೂ ಇಂಗ್ಲಿಷಿನಲ್ಲಿ ಜರಗುವ ಘಟನೆಗಳ ಪ್ರಪಂಚ ಕನ್ನಡದಲ್ಲಿ ಮೂಡುವಾಗ ಹುಟ್ಟಿಸಿಕೊಳ್ಳುವ ಹೊಸ ಅರ್ಥಗಳು ಇಡೀ ಕಾದಂಬರಿಯ ಅರ್ಥದ ಪದರುಗಳನ್ನು (ನೇಯ್ಗೆಯನ್ನೂ) ಸಮೃದ್ಧಗೊಳಿಸುವಂತಿದೆ.\u003c\/p\u003e\n\u003cp\u003e ಇಂಗ್ಲಿಷ್ ಭಾಷೆಯಲ್ಲಿ, ಅದೂ ಅಮೇರಿಕಾದಲ್ಲಿ, ಜರಗುವ ವಿದ್ಯಮಾನಗಳು ಕನ್ನಡಗೊಳ್ಳುವಾಗ, ಆಗುತ್ತಿರುವುದು ಹೊಸರೂಪ ಪಡೆದು ಪ್ರತ್ಯಕ್ಷವಾಗುತ್ತವೆ. ಇದು ಈ ಎರಡು ಭಾಷೆಗಳ ನಡುವಿನ-ಸಂಸ್ಕೃತಿಗಳ ಅಂತರದಿಂದಾಗಿ ಹುಟ್ಟಿಕೊಂಡ 'ಅನುವಾದ'ದ. ಅಂದರೆ ಒಂದಕ್ಕೊಂದು ಅನುವಾಗುವ, ಹತ್ತಿರವಾಗುವ ಸಮಸ್ಯೆಯೂ ಹೌದು. ಡಾ. ಕಾಗಿನೆಲೆಯವರು ಈ ಇಬ್ಬಗೆಯ ಭಾವಪ್ರಪಂಚಗಳನ್ನು ಒಮ್ಮೆಯಲ್ಲಿ ಪಡೆಯಲು ನಡೆಸುವ ಪ್ರಯತ್ನ ವೈಚಾರಿಕವಾಗಿ ಮಾತ್ರವಲ್ಲದೆ, ಭಾಷಾತ್ಮಕವಾಗಿಯೂ ಗಮನಾರ್ಹವೆಂದುಕೊಂಡು ಈ ಕಾದಂಬರಿಯನ್ನು ನಾನು ಓದುತ್ತಾ ಹೋಗುತ್ತಿದ್ದೇನೆ.....\u003c\/p\u003e\n\u003cp\u003e ಇದೊಂದು ಪ್ರಾಯೋಗಿಕ ಕಾದಂಬರಿ. ಕನ್ನಡ ಸಾರಸ್ವತ ಲೋಕವನ್ನು ಅಪ್ಪಟವಾದ, ಚುರುಕಾದ ವೈಚಾರಿಕ ಶೋಧದ ಕನಸನ್ನು ಪಡೆದ ಪ್ರಜ್ಞೆಯೊಂದು ಪ್ರವೇಶಿಸಿ ವಿಸ್ತರಿಸುತ್ತಿದೆ ಎಂಬುದು ಕನ್ನಡದ ಲೇಖಕರಲ್ಲಿ ಒಬ್ಬನಾದ ನನಗೆ ಹೆಮ್ಮೆಯನ್ನೂ, ಸಂತೋಷವನ್ನೂ ತಂದಿದೆ.\u003c\/p\u003e\n\u003cp\u003e-ಯು. ಆರ್. ಅನಂತಮೂರ್ತಿ \u003cbr\u003e(ಮುನ್ನುಡಿಯಿಂದ)\u003c\/p\u003e","brand":"Guruprasad Kaginele","offers":[{"title":"Default Title","offer_id":47595378606339,"sku":"HB0000550129","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BiliyaChadara.jpg?v=1767430922","url":"https:\/\/harivubooks.com\/products\/biliya-chadara-novel-dr-guruprasad-kaginele-kannada-book","provider":"Harivu Books","version":"1.0","type":"link"}