{"product_id":"bhrama-rushi-stories-gireesh-v-s-kannada-book","title":"ಬ್ರಹ್ಮ ಋಷಿ","description":"\u003cp\u003eಭಾರತದಲ್ಲಿ ಸಹಸ್ರಾರು ವರ್ಷಗಳಿಂದಲೂ ಹಲವಾರು ಮಹರ್ಷಿಗಳು, ಸಾಧುಸಂತರು, ಯೋಗಿಗಳು ಜನಿಸಿ ಭಾರತ ಭೂಮಿಯನ್ನು ಪಾವನಗೊಳಿಸಿದ್ದಾರೆ.\u003c\/p\u003e\n\u003cp\u003eಶ್ರೀಯುತ ಕೆ.ಎಸ್ ನಿತ್ಯಾನಂದರು ಪೂರ್ವೋತ್ತರ ಮೀಮಾಂಸ ತಜ್ಞರು. ವೇದ-ವೇದಾಂಗಗಳಲ್ಲಿ ವಿದ್ವಾಂಸರು. ಯಜ್ಞ-ಯಾಗಗಳು ಅವರ ದೈನಂದಿನ ಕರ್ಮಗಳು. ಹೇಗೆ ಅಗಾಧವಾದ ಸಾಗರವನ್ನು ಇನ್ನೊಂದಕ್ಕೆ ಹೋಲಿಸಲು ಸಾಧ್ಯವಿಲ್ಲವೋ ಹಾಗೆ ಇನ್ನೊಂದಕ್ಕೆ ಅವರನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.\u003c\/p\u003e\n\u003cp\u003eಮಹಾನ್ ತಪೋನಿಧಿ, ಮಹಾನ್ ತಾಂತ್ರಿಕರು, ಅಗಾಧ ಜ್ಞಾನ ನಿಧಿ, ಮೇರು ಸದೃಶ ವ್ಯಕ್ತಿತ್ವ, ವ್ಯಾಖ್ಯಾನ ಚಕ್ರವರ್ತಿ, ಶಿರೋಮಣಿ, ಆಧ್ಯಾತ್ಮ ಕ್ಷೇತ್ರದಲ್ಲಿ ಯಾರು ಊಹಿಸಲಾಗದ, ನಮ್ಮ ಕಲ್ಪನೆಗೂ ಮೀರಿದ ಅತ್ಯುನ್ನತ, ಮಹೋನ್ನತ ಬ್ರಹ್ಮ ಋಷಿ ಪದವಿ ಪಡೆದವರು.\u003c\/p\u003e\n\u003cp\u003eವೇದಗಳಲ್ಲಿರುವ ಭೌತಶಾಸ್ತ್ರ ಮನಃಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ತಂತ್ರ ಶಾಸ್ತ್ರ ಆಯುರ್ವೇದ, ನ್ಯಾಯಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಭಾಷಾ ಶಾಸ್ತ್ರ, ಅಲ್ಲದೆ ಮಹಾಭಾರತದಲ್ಲಿರುವ ವೇದೋಕ್ತ ರಹಸ್ಯ ವಿಚಾರಗಳು, ಭಗವದ್ಗೀತೆಯಲ್ಲಿರುವ ಯೋಗಶಾಸ್ತ್ರದ ವಿಚಾರಗಳು ಇತ್ಯಾದಿಗಳನ್ನು ಆಸಕ್ತರಿಗೆ ನಿಸ್ಪೃಹರಾಗಿ ಬೋಧಿಸುತ್ತಿದ್ದಾರೆ.\u003c\/p\u003e\n\u003cp\u003eಪರಕಾಯ ಪ್ರವೇಶ ವಿದ್ಯಾಬಲದಿಂದ, ಹಲವಾರು ದೇಹವನ್ನು ಧರಿಸಿ, ದೇಶ ಹಿತ ಮತ್ತು ಧರ್ಮರಕ್ಷಣೆಯನ್ನೇ ಪ್ರಮುಖ ಗುರಿಯನ್ನಾಗಿಸಿ ಅದರಂತೆ ನಡೆಯುತ್ತಾ ಇರುವ ಮಹಾನ್ ಚೇತನ. ಪ್ರತ್ಯಕ್ಷ ಶಿವ ಸ್ವರೂಪಿಗಳು.\u003c\/p\u003e\n\u003cp\u003eಯಾವುದೇ ವಿಚಾರವನ್ನಾಗಲಿ ಅದರ ಬಗ್ಗೆ ಎಲ್ಲವನ್ನು ತಿಳಿದು ಅದನ್ನು ಒರೆ ಹಚ್ಚಿಯೇ ನೋಡಿ ನಂತರ ಸಮಾಜಕ್ಕೆ ತಿಳಿಸುವ ಸಂಶೋಧಕರಿವರು.\u003c\/p\u003e\n\u003cp\u003eಒಬ್ಬ ನಿಜವಾದ ಸಾಧಕ ಹೇಗಿರುತ್ತಾರೆ? ಅವರ ಕಾರ್ಯವೈಖರಿ ಬಗ್ಗೆ ಮತ್ತು ಅವರೊಂದಿಗೆ ಅನುಭವಿಸಿರುವ ರೋಚಕ ಅನುಭವಗಳನ್ನು ಸೇರಿಸಿ ಒಬ್ಬ ಸಾಧಕರನ್ನು ಪರಿಚಯಿಸುವ ಗ್ರಂಥ ಈ ಬ್ರಹ್ಮ ಋಷಿ ಯೋಗಿ ಒಬ್ಬನ ಕಥೆ\u003c\/p\u003e","brand":"Gireesh. V. S.","offers":[{"title":"Default Title","offer_id":47464482439427,"sku":"HB00005474","price":550.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BhramaRushi.jpg?v=1763627195","url":"https:\/\/harivubooks.com\/products\/bhrama-rushi-stories-gireesh-v-s-kannada-book","provider":"Harivu Books","version":"1.0","type":"link"}