{"product_id":"bhashantara-saiddhantika-hagu-anvayika-nelegalu-articles-c-n-ramachandran-kannada-book","title":"ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು","description":"\u003cp\u003e\u003cspan\u003eಭಾಷಾಂತರ : ಸೈದ್ಧಾಂತಿಕ ಹಾಗು ಆನ್ವಯಿಕ ನೆಲೆಗಳು ನಾನು ಆರೇಳು ವರ್ಷಗಳ ಕೆಳಗೇ ಬರೆಯಬೇಕೆಂದುಕೊಂಡಿದ್ದ ಕೃತಿ; ಆ ಕನಸು ಈಗ ನನಸಾಗುತ್ತಿರುವುದು ನನಗೆ ತುಂಬಾ ಹರ್ಷದ ಸಂಗತಿ. ಮುಂದುವರೆಯುವ ಮೊದಲು ಈ ಪುಸ್ತಕದ ಮಿತಿಯನ್ನೂ ನಾನು ಒಪ್ಪಿಕೊಳ್ಳಬೇಕು: ಕಳೆದ ಎರಡು-ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ-ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವೆಂದು ತೋರಿದ, ಕೆಲವು ಸೈದ್ಧಾಂತಿಕ ಧಾರೆಗಳನ್ನು ಮಾತ್ರ ಇಲ್ಲಿ ಪರಿಚಯಿಸಿದ್ದೇನೆ. ಭಾಷಾಂತರಕ್ರಿಯೆಯನ್ನು ಕುರಿತು ನನ್ನ ನಿಲುವು ಈ ಕೃತಿಯ ಎರಡನೆಯ ಭಾಗದ ಲೇಖನಗಳಲ್ಲಿ ಸ್ಪಷ್ಟವಾಗುವುದರಿಂದ, ಭಿನ್ನ ಭಿನ್ನ ಸೈದ್ಧಾಂತಿಕ ನೆಲೆಗಳನ್ನು ವಿವರಿಸುವಾಗ ಸಾಧ್ಯವಿದ್ದಷ್ಟೂ ವಸ್ತುನಿಷ್ಠವಾಗಿರಲು ಪ್ರಯತ್ನಿಸಿದ್ದೇನೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ : ಮೊದಲ ಭಾಗದಲ್ಲಿ ಭಿನ್ನ ಸಿದ್ಧಾಂತಗಳ ಪರಿಚಯಾತ್ಮಕ ವ್ಯಾಖ್ಯಾನವಿದ್ದರೆ ಎರಡನೆಯ ಭಾಗದಲ್ಲಿ ಆಗಾಗ ಈ ವಿಷಯವನ್ನು ಕುರಿತು ಪ್ರಕಟವಾಗಿರುವ ನನ್ನ ಆನ್ವಯಿಕ ಲೇಖನಗಳಿವೆ.\u003c\/span\u003e\u003cbr\u003e\u003cspan\u003eಸಿ. ಎನ್. ರಾಮಚಂದ್ರನ್\u003c\/span\u003e\u003c\/p\u003e","brand":"C. N. Ramachandran","offers":[{"title":"Default Title","offer_id":49751823319299,"sku":"HB00007655","price":310.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Bhashantara_Saiddhantika_Anvayika_Nelegalu.jpg?v=1791034388","url":"https:\/\/harivubooks.com\/products\/bhashantara-saiddhantika-hagu-anvayika-nelegalu-articles-c-n-ramachandran-kannada-book","provider":"Harivu Books","version":"1.0","type":"link"}