Skip to product information
1 of 1

ಪ್ರೊ ಎನ್ ಎಸ್ ರಘುನಾಥ್

ಭಾಷಾ ಮೆದುಳಿಗೆ ಬಾಗಿಲು ತೆರೆದವನು ನೋಮ್ ಛಾಮ್ಸ್‌ಕಿ

ಭಾಷಾ ಮೆದುಳಿಗೆ ಬಾಗಿಲು ತೆರೆದವನು ನೋಮ್ ಛಾಮ್ಸ್‌ಕಿ

Publisher:

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping

- Cash on Delivery (COD) Available

ಭಾಷಾವಿಜ್ಞಾನದಲ್ಲಿ ನೋಮ್ ಛಾಮ್ಸ್‌ಕಿಯ ಸ್ಥಾನ ಅನನ್ಯವಾದುದು. ಭಾಷಾವಿಜ್ಞಾನವನ್ನು ಅಕಡೆಮಿಕ್ ವಿಷಯವನ್ನಾಗಿ ಸ್ಥಾಪಿಸಿದ ಮೇಲೆ, ಅದನ್ನು ಅಧ್ಯಯನ ಮಾಡುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದವನು ಛಾಮ್ಸ್‌ಕಿ. "Humans are genetically programmed for language" ಎನ್ನುವುದು ಈತನ ಪ್ರಮುಖ ವಾದ.

ಪಾರಂಪರಿಕ ವ್ಯಾಕರಣದಲ್ಲಿ ಯಾವ ಅಭಿವ್ಯಕ್ತಿ ಸರಿ ಮತ್ತು ಯಾವುದು ತಪ್ಪು ಎನ್ನುವ ಅಧ್ಯಯನದಲ್ಲಿ ಮುಳುಗಿರುವಾಗ, ಅದನ್ನು ಬದಲಾಯಿಸಿ ಪರಿವರ್ತನ ಉತ್ಪಾದನ ವ್ಯಾಕರಣವನ್ನು(TG) ಸ್ಥಾಪಿಸಿದ. ಈಗ ವ್ಯಾಕರಣ ಅಧ್ಯಯನದಲ್ಲಿ ಭಾರತದಾದ್ಯಂತ TG ಅನ್ನು ಅನುಸರಿಸಲಾಗುತ್ತಿದೆ.

ಮಕ್ಕಳು ಭಾಷೆ ಕಲಿಯುವ ಬಗ್ಗೆ ಹಲವಾರು ಸಿದ್ಧಾಂತಗಳನ್ನು ಛಾಮ್ಸ್‌ಕಿ ಮಂಡಿಸಿದ್ದಾನೆ. ಈ ಸಿದ್ಧಾಂತಗಳು ಮಕ್ಕಳು ಭಾಷೆ ಕಲಿಯುವುದರ ಬಗ್ಗೆ ಚಿಂತನೆ ಮಾಡಲು ನಮಗೆ ಆಧಾರವಾಗಿವೆ. ಆರಂಭದಿಂದಲೂ ಇದ್ದ ಹಲವಾರು ತತ್ವಗಳನ್ನು ಈತ ಮೂಲಭೂತವಾಗಿ ಬದಲಾಯಿಸಿಬಿಟ್ಟಿದ್ದಾನೆ.

View full details