Shivakumar Shettihalli
Publisher - Ujwala Academy
Regular price
Rs. 666.00
Regular price
Rs. 666.00
Sale price
Rs. 666.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages - 711
Type - Paperback
Couldn't load pickup availability
ಸಂಪಾದಕರ ಪರಿಚಯ
ಶ್ರೀಯುತ. ಎಸ್ . ಶಿವಕುಮಾರ್ ಶೆಟ್ಟಿಹಳ್ಳಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದವರು. ಇವರು ಹಾಸನದ ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ನಂತರ ಸ್ನಾತಕೋತ್ತರ ಪದವಿಗಳನ್ನು ಇತಿಹಾಸ ಮತ್ತು ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದಿಂದ ಪಿಜಿ ಡಿಪ್ಲೋಮ ಪದವಿ ಪಡೆದಿದ್ದಾರೆ ಹಾಗೂ ಇತಿಹಾಸ ವಿಷಯದಲ್ಲಿ ಕೆ-ಸೆಟ್ ಅರ್ಹತೆ ಪಡೆದಿದ್ದಾರೆ.
ಪ್ರಸ್ತುತ ಇವರು ಹಾಸನದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎನ್.ಡಿ.ಆರ್.ಕೆ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದು, ನಾವಿನ್ಯ ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳಿಗೆ ಚಿರಪರಿಚಿತರಾಗಿರುತ್ತಾರೆ. ಇವರ ವೃತ್ತಿ ಜೀವನದಲ್ಲಿ ತಮ್ಮ ಆಸಕ್ತ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿದ್ದಾರೆ.
ಬೋಧನೆಯಲ್ಲಿ ಅಭಿರುಚಿ ಹೊಂದಿರುವ ಇವರು ಹಾಸನ ಜಿಲ್ಲೆಯ ಹಾಗೂ ರಾಜ್ಯದ ಹಲವು ಜಿಲ್ಲೆಯಲ್ಲಿನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಭಾರತದ ಸಂವಿಧಾನ, ಇತಿಹಾಸ ಪ್ರಚಲಿತ ಘಟನೆಗಳಿಗೆ ಸಂದಿಸಿದಂತೆ ಸಂಪನ್ಮೂಲ ವೃತ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ಮನಗೆದ್ದಿದ್ದಾರೆ. ಜೊತೆಗೆ ಹಾಸನ ನಗರದಲ್ಲಿ ತಮ್ಮದೇ ನೇತೃತದಲ್ಲಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 'ವಿಸ್ಮಯ ವಿಜೇತ' ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಆರಂಭಿಸಿ, ಜ್ಞಾನದಾಹಿಗಳಿಗೆ ಜ್ಜಾನಾಮೃತ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಹಲವು ಪುಸ್ತಕಗಳನ್ನು ರಚಿಸಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಜ್ಞಾನ ಬುತ್ತಿ, ಜ್ಞಾನ ಕಣಜ, ಶೈಕ್ಷಣಿಕ ತಂತ್ರಜ್ಞಾನ, ಭಾರತದಲ್ಲಿ ಸಮಕಾಲೀನ ಶಿಕ್ಷಣ, ಬೋಧನಾಶಾಸ್ತ್ರದ ತಂತ್ರಗಳು, ವಿಧಾನಗಳು ಮತ್ತು ಉಪಕ್ರಮಗಳು, ಸಮನ್ವಯ ಶಿಕ್ಷಣ, ಶಿಶು ವಿಕಸನ ಹಾಗೂ ಬೋಧನಾ ವಿಧಾನ, ಜ್ಞಾನ ಮತ್ತು ಪಠ್ಯಕ್ರಮ, ಲಿಂಗತ್ವ, ಶಾಲೆ ಮತ್ತು ಸಮಾಜ, ಬೋಧನಾ ಶಾಸ್ತ್ರ - ಇತಿಹಾಸ, ಸಮಾಜ ವಿಜ್ಞಾನ ಬೋಧನಾ ವಿಧಾನದ ಅರಿವು, Gender, School and Society ಇತ್ಯಾದಿಗಳು
ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಪ್ರಚಲಿತ ಘಟನೆಗಳ ಆಧಾರಿತ "ವಿಸ್ಮಯ ವಿಜೇತ" ಮಾಸಪತ್ರಿಕೆಯನ್ನು ವಿಸ್ಮಯಯ ಪ್ರಕಾಶನದ ಅಡಿಯಲ್ಲಿ ಹೊರತಂದಿದ್ದು, ಈ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕೆಲವೇ ದಿನಗಳಲ್ಲಿ ಓದುಗರ ಮನ ಗೆದ್ದಿದ್ದು, ಪತ್ರಿಕೆಯು ಕರ್ನಾಟಕ ರಾಜ್ಯಾದ್ಯಂತ ತನ್ನ ಸರಬರಾಜನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗೆ ಸ್ಪರ್ಧಾತ್ಮಕ ಜಗತ್ತಿಗೆ ಮುಕ್ತವಾಗಿ ಒಳಹೊತ್ತಿರುವ ಇವರು ಇಂದು ನಮ್ಮ ಪ್ರಕಾಶನದ ಅಡಿಯಲ್ಲಿ ಭಾರತದ ಸಂವಿಧಾನ (Constitution of India)” ಎಂಬ ನೂತನ ಹೊತ್ತಿಗೆಯನ್ನು ಬಹಳ ಅಚ್ಚುಕಟ್ಟಾಗಿ, ವಿಷಯದ ಆಳದೊಂದಿಗೆ, ಹಲವು ಸುಸಂಗತ ಚಿತ್ರಗಳು, ಪ್ರಕರಣಗಳನ್ನು ಬಳಸಿಕೊಂಡು ರಚಿಸಿದ್ದಾರೆ. ಇಂತಹ ಹೊತ್ತಿಗೆಯು ನಮ್ಮ ಪ್ರಕಾಶನದಿಂದ ಹೊರತರುತ್ತಿರುವುದು ನಮಗೆ ಸಂತೋಷದ ಸಂಗತಿಯಾಗಿದ್ದು, ನಮ್ಮ ಲೇಖಕರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ತಿಳಿಸುತ್ತಾ, ಈ ಹೊತ್ತಿಗೆಯು ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆಂದು ಬಯಸುತ್ತಾ, ಈ ಹೊತ್ತಿಗೆಯನ್ನು ಜ್ಞಾನವಾಹಿಗಳಿಗೆ ಅರ್ಪಿಸುತ್ತಿದ್ದೇವೆ.
- ಹಾಲತಿ ಲೋಕೇಶ್