{"product_id":"bharatada-samvidhana-education-dr-k-m-suresh-kannada-book","title":"ಭಾರತದ ಸಂವಿಧಾನ","description":"\u003cp\u003eಆತ್ಮೀಯ ಸ್ಪರ್ಧಾರ್ಥಿಗಳೇ,\u003c\/p\u003e\n\u003cp\u003eಭಾರತದ ಸಂವಿಧಾನವು ದೇಶದ ಆಡಳಿತದ ಭಗವದ್ಗೀತೆ ಇದ್ದಂತೆ\", ಪ್ರತಿಯೊಬ್ಬ ನಾಗರೀಕನು ಓದಲೇಬೇಕು. ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಮುಖ್ಯವಾದ ವಿಷಯವಾಗಿದೆ ಇತ್ತೀಚೆಗೆ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಕೆ.ಇ.ಎ, ಶಿಕ್ಷಕರ ಸಿ.ಇ.ಟಿ. ಕರ್ನಾಟಕ ಪೊಲೀಸ್ ಇಲಾಖೆ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಭಾರತದ ಸಂವಿಧಾನದ ವಿಷಯದಿಂದ ಕೇಳುತ್ತಿದ್ದಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು 'ಭಾರತ ಸಂವಿಧಾನ' ಎಂಬ ಕೃತಿಯ 16ನೇ ಆವೃತ್ತಿಯನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ.\u003c\/p\u003e\n\u003cp\u003eಈ ಕೃತಿಯಲ್ಲಿ ಭಾರತದ ಸಂವಿಧಾನದ ಪ್ರಸ್ತುತ 25 ಭಾಗಗಳು, 470 ವಿಧಿಗಳು, 12 ಅನುಸೂಚಿಗಳನ್ನು ಹಾಗೂ 106 ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಗಳ ಬಗ್ಗೆ ಸರಳ ಭಾಷೆಯಲ್ಲಿ ಸಮಗ್ರವಾಗಿ ವಿವರಿಸಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ.\u003c\/p\u003e\n\u003cp\u003eಈ ಕೃತಿಯ ವಿಶೇಷತೆಯೆಂದರೆ, ಸಂವಿಧಾನದ ಎಲ್ಲಾ ವಿಧಿಗಳಿಗೂ ವಿವರಣೆಯೊಂದಿಗೆ, ಇತ್ತೀಚಿನ ವಿದ್ಯಮಾನ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಅಂಕಿ-ಅಂಶಗಳನ್ನು ನೀಡಲಾಗಿದೆ. ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರತಿಯೊಬ್ಬ ಸ್ಪರ್ಧಾರ್ಥಿಯು ಓದುವಂತೆ ಕ್ರಮಬದ್ಧವಾಗಿ, ರಚಿಸಲಾಗಿದೆ.\u003c\/p\u003e\n\u003cp\u003eಈ ಕೃತಿಯು ಸಂವಿಧಾನಿಕ ಸಂಸ್ಥೆಗಳು, ಸಂವಿಧಾನೇತರ ಸಂಸ್ಥೆಗಳು ಮಾತ್ರವಲ್ಲದೆ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತದ ವಿಷಯಗಳನ್ನು, ಇಂದಿನ ರಾಜಕೀಯ ಸ್ಥಿತಿಗತಿಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಂದಿರುವ ಇಂದಿನ ಸವಾಲುಗಳ ಬಗ್ಗೆ ಸವಿಸ್ತಾರವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಈ ಕೃತಿಯು ತಮ್ಮ ಕನಸನ್ನು ನನಸಾಗಿಸಲಿ, ಮುಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅತಿ ಹೆಚ್ಚು ಅಂಕ ಪಡೆದು ಯಶಸ್ವಿಯಾಗಲಿ, ನಾಡಿನ ಉತ್ತಮ ಪ್ರಜೆಯಾಗಲಿ ಎಂದು ಹಾರೈಸುವ...\u003c\/p\u003e\n\u003cp\u003e-ಡಾ. ಕೆ.ಎಂ. ಸುರೇಶ್\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. K. M. Suresh","offers":[{"title":"Default Title","offer_id":47869561602307,"sku":"HEDU00000505","price":560.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BharatadaSamvidhana.jpg?v=1774358495","url":"https:\/\/harivubooks.com\/products\/bharatada-samvidhana-education-dr-k-m-suresh-kannada-book","provider":"Harivu Books","version":"1.0","type":"link"}