{"product_id":"best-of-o-henry-kathegalu-short-story-book-kannada-book","title":"ಬೆಸ್ಟ್ ಆಫ್ ಓ ಹೆನ್ರಿ ಕಥೆಗಳು","description":"\u003cp\u003eಓ ಹೆನ್ರಿ ಎಂಬ ಅಂಕಿತನಾಮದಿಂದ ಪ್ರಖ್ಯಾತರಾದ ಅಮೇರಿಕನ್ ಬರಹಗಾರ ವಿಲಿಯಮ್ ಸಿಡ್ನಿ ಪೋರ್ಟರ್ ಸಣ್ಣ ಕಥೆಗಳ ಮೂಲಕ ವಿಶ್ವದ ಗಮನ ಸೆಳೆದವರು. ಅವರ ಸಣ್ಣ ಕಥೆಗಳಲ್ಲಿರುವ ಚಿತ್ರಕ ಶಕ್ತಿ ಮತ್ತು ಅನೂಹ್ಯವೆನಿಸುವ ಅಂತ್ಯ ವಿಶೇಷವಾದದ್ದು. ತಮ್ಮ ಕಥೆಗಳ ಮೂಲಕವೇ ವಿಖ್ಯಾತರಾದ ಓ ಹೆನ್ರಿ ಗತಿಸಿ ಶತಮಾನ ಕಳೆದಿದೆ. ಆದರೆ ಅವರ ಕಥೆಗಳು ಇನ್ನೂ ಜೀವಂತವಾಗಿವೆ. ಬಿಸುಪು ಕಳೆದುಕೊಂಡಿಲ್ಲ. ಇಂದಿಗೂ ಪ್ರಸ್ತುತವೆನಿಸುವಷ್ಟು ಆಪ್ಯಾಯಮಾನವಾಗಿವೆ.\u003c\/p\u003e\n\u003cp\u003eಓ ಹೆನ್ರಿಯವರ ಸಣ್ಣ ಕಥೆಗಳ ಸಾರ ಸಂಗ್ರಹವನ್ನು ಹೀರಿಕೊಂಡು ಕನ್ನಡದಲ್ಲಿ ಶ್ರೀ ಬಿ.ಎನ್. ವಿಶಲ ರಾವ್ ಅವರು ವಿಶೇಷವಾದ ಕಥಾ ಸಂಕಲನವನ್ನು ಕಟ್ಟಿಕೊಟ್ಟಿದ್ದಾರೆ. ಓ ಹೆನ್ರಿ ಕಥೆಗಳ ರೂಪಾಂತರಣ ಇದಾಗಿದ್ದು, ಈ ಕಥೆಗಳಲ್ಲಿ ನಾವಿನ್ಯತೆ ಇದೆ. ನಮ್ಮ ಸುತ್ತಲೇ ನಡೆಯು ತ್ತಿರುವ ಘಟನೆಗಳೇನೋ ಎಂಬಷ್ಟು ರೋಚಕವಾಗಿವೆ. ಸ್ಥಳೀಯತೆಗೆ ತಕ್ಕಂತೆ ಪಾತ್ರಗಳನ್ನೂ ಸೃಷ್ಟಿಸಿರಾವ್ ಅವರು ತಮ್ಮ ಕಥನ ಶೈಲಿಯನ್ನು ಮೆರೆದಿದ್ದಾರೆ. 23 ಸಣ್ಣ ಕಥೆಗಳ ಸಂಗ್ರಹ ಮನಸಿಗೆ ಮುದ ಕೊಡುತ್ತದೆ. ಓದಿಸಿಕೊಂಡು ಹೋಗುವ ಗುಣವೂ ಕಥೆಗಳಲ್ಲಿದೆ. ವಿಠಲ ರಾವ್ ಅವರ ಕಾರ್ಯ ಶ್ಲಾಘನೀಯವಾದದ್ದು, ಅವರಿಗೆ ಶುಭವಾಗಲಿ, ಇನ್ನಷ್ಟು ಕೃತಿಗಳು ಅವರಿಂದ ಹೊರಬರಲಿ ಎಂದು ಆಶಿಸುವೆ.\u003c\/p\u003e","brand":"B. N. Vittala Rao","offers":[{"title":"Default Title","offer_id":47717572280579,"sku":"HB00006071","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-06at5.57.30PM_84c5c6af-36e8-43a1-a399-ebe87651c496.jpg?v=1770381529","url":"https:\/\/harivubooks.com\/products\/best-of-o-henry-kathegalu-short-story-book-kannada-book","provider":"Harivu Books","version":"1.0","type":"link"}