{"product_id":"bengaluru-nagara-nirmartru-naadaprabhu-kempegowda-non-fiction-kannada-book","title":"ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ","description":"\u003cp\u003eಸಮರ್ಥನೂ, ಅಭಿವೃದ್ಧಿಶೀಲನೂ, ದೂರದೃಷ್ಟಿತ್ವವುಳ್ಳವನೂ ಆದ ಕೆಂಪೇಗೌಡರ ಕುರಿತಾಗಿ ಈಗಾಗಲೇ ಹಲವಾರು ಕೃತಿಗಳು ಹೊರಬಂದಿವೆ. ಇದೇ ಸಾಲಿನಲ್ಲಿ ಆತ್ಮೀಯರಾದ ನಿರಂಜನ ಪರಾಂಜಪೆ ಅವರು ಸಾಕಷ್ಟು ಅಧ್ಯಯನ ಮಾಡಿ, ಕೆಂಪೇಗೌಡರ ಕುರಿತಾಗಿ 'ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ' ಎನ್ನುವ ಕೃತಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆಪಡುವ ವಿಚಾರ. ವಿಜಯನಗರದ ಆಳ್ವಿಕೆಯ ಕಾಲದಿಂದ ಆರಂಭಿಸಿ ಪ್ರಸ್ತುತ ಬೆಂಗಳೂರಿನ ವಿಸ್ತಾರತೆಯ ಬಗ್ಗೆ ವಿಷಯಾಧಾರಿತವಾದ, ಮಾಹಿತಿ ಪೂರಕವಾದ ಕೃತಿಯನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಾಕಷ್ಟು ದಿನಗಳಿಂದ ಒಂದು ಅತ್ಯತ್ತಮವಾದ ಅಧ್ಯಯನ ಯೋಗ್ಯ ಕೃತಿಯ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ, ಅಧ್ಯಯನ ಶೀಲರಿಗೆ, ಸಾಹಿತ್ಯಪ್ರಿಯರಿಗೆ, ಇತಿಹಾಸಪ್ರಿಯರಿಗೆ, ಬೆಂಗಳೂರು ಹಾಗೂ ಕೆಂಪೇಗೌಡರ ಕುಟುಂಬದ ಬಗ್ಗೆ ಮಾಹಿತಿಯನ್ನು ಅರಸುತ್ತಿರುವರಿಗೆ ಈ ಕೃತಿ ಅತ್ಯತ್ತಮ ಆಯ್ಕೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇಂತಹ ಸಂಗ್ರಹಯೋಗ್ಯ ಕೃತಿಯನ್ನು ಕನ್ನಡನಾಡಿಗೆ ತಮ್ಮ ಬರವಣಿಗೆಯ ಮೂಲಕ ಕಟ್ಟಿಕೊಟ್ಟಿರುವ ನಿರಂಜನ ಪರಾಂಜಪೆಯವರು ನಿಜಕ್ಕೂ ಅಭಿನಂದನಾರ್ಹರು.\u003c\/p\u003e","brand":"Niranjana paranjape","offers":[{"title":"Default Title","offer_id":47802022101251,"sku":"HB00006680","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-26at5.29.06PM.jpg?v=1772107518","url":"https:\/\/harivubooks.com\/products\/bengaluru-nagara-nirmartru-naadaprabhu-kempegowda-non-fiction-kannada-book","provider":"Harivu Books","version":"1.0","type":"link"}