{"product_id":"bendre-jeevana-parichaya-biography-dr-vamana-bendre-kannada-book","title":"ಬೇಂದ್ರೆ ಜೀವನ ಪರಿಚಯ","description":"ವರಕವಿ ದ.ರಾ.ಬೇಂದ್ರೆಯವರ ಶ್ರೀಮಂತ ವಾಒಮ್ಯವನ್ನು ಅರಿತು ಕೊಳ್ಳಲು ಅವರ ಈ ಸಾಧನೆಯ ಪರಿಚಯ ಅತ್ಯಗತ್ಯ. ಡಾ|| ವಾಮನ ಬೇಂದ್ರೆಯವರ ಪುಸ್ತಕ ಈ ದಿಕ್ಕಿನಲ್ಲಿ ನಡೆಯುವವರಿಗೆ ದಾರಿದೀಪವಾಗಬಲ್ಲದು. ಸುದೈವದಿಂದ ಡಾ| ವಾಮನ ಬೇಂದ್ರೆಯವರು ಕವಿ ಮತ್ತು ವಿಮರ್ಶಕರಾದುದರಿಂದ ಅಂಬಿಕಾತನಯದತ್ತರ ವ್ಯಕ್ತಿತ್ವ ಮತ್ತು ಕೃತಿಗಳ ಪದರುಗಳನ್ನು ಬಿಚ್ಚಿನೋಡಿ, ವಾಸ್ತವ ಸತ್ತ್ವವನ್ನು ಕಂಡುಕೊಳ್ಳುವುದರಲ್ಲಿ ಯಶಸ್ಸು ಪಡೆದಿದ್ದಾರೆ. “ಬೇಂದ್ರೆ ಜೀವನ ಪರಿಚಯ” ಕೇವಲ ಅಭಿಮಾನದ ಅಭಿವ್ಯಕ್ತಿಯಲ್ಲ: ನಂಬಲರ್ಹವಾದ ಚರಿತ್ರೆ. ಇದರ ಮೂಲಕ ವಾಮನ ಬೇಂದ್ರೆ ಕೇವಲ ಪಿತೃ ಋಣವನ್ನಷ್ಟೇ ಅಲ್ಲದೆ ಸಮಾಜ ಋಣವನ್ನೂ ತೀರಿಸಿದ್ದಾರೆ. ಅವರೇ ಹೇಳುವಹಾಗೆ “ನಾನು ಬರೆದ ಈ ಜೀವನ ಪರಿಚಯ ಗ್ರಂಥವು ತಂದೆ- ದ.ರಾ.ಬೇಂದ್ರೆಯವರ ಚರಿತ್ರೆಯೊಂದಿಗೆ ಕರ್ನಾಟಕದ ವರಕವಿ, ಮಹಾಮೇಧಾವಿ, ದೃಷ್ಟಾರ ದ.ರಾ.ಬೇಂದ್ರೆಯವರ ಪರಿಚಯವಾಗಿದೆ\"\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ. ಜಿ. ಎನ್. ಆಮೂರ","brand":"Dr. Vaamana Bendre","offers":[{"title":"Default Title","offer_id":43517361127683,"sku":"HB00003671","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BendreJeevanaCharitre.jpg?v=1777548217","url":"https:\/\/harivubooks.com\/products\/bendre-jeevana-parichaya-biography-dr-vamana-bendre-kannada-book","provider":"Harivu Books","version":"1.0","type":"link"}