Ganesh Kasargod
ಬೆಳ್ಳಿತೆರೆಯ ಬಂಗಾರದ ಗೆರೆ
ಬೆಳ್ಳಿತೆರೆಯ ಬಂಗಾರದ ಗೆರೆ
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ದೂರದಿಂದ ಇವರು ಸಂಜೆ ಆಕಾಶ. ಹಲವು ರೀತಿಯ ಆಕಾರ, ಚಿತ್ತಾರ. ಕೆಲವರಿಗೆ ಉರಿವ ಜಮದಗ್ನಿ, ಹಿಡಿದರೆ ಬಿಡದ ವಿಶ್ವಾಮಿತ್ರ, ಬಲ್ಲವರಿಗೆ ಹಿರಿಯಣ್ಣ, ಮಾರ್ಗದರ್ಶಿ, ಉರಿವ ದೀಪದಲ್ಲಿನ ಬೆಳಗು, ಬೆಳಕು. ಆಯ್ಕೆ ನಿಮ್ಮದು. ಸಿನಿಮಾ ಪತ್ರಕರ್ತರಿಗೆ ಗಾಸಿಪ್, ಗ್ಲಾಮರ್ ಹೊರತಾಗಿ ಬೇರೆ ಏನಾದರೂ ಬರೆಯುವ ತಾಕತ್ತು ಇದೆಯಾ ಅಂದವರಿಗೆ ಉಡಿತುಂಬ ಪುಸ್ತಕ ಕೊಟ್ಟರು. ಸ್ಟಾರ್ ಕಲಾವಿದರ ಹಿಂದೆ ಬೀಳದೆ ನೊಂದ ನಟ ನಟಿಯರ ಮನೆಬಾಗಿಲು ತಟ್ಟಿದರು. ಯಾವುದೇ ಮುಲಾಜಿಗೆ ಒಳಗಾಗದೇ ಕಂಡದ್ದನ್ನು ಕಂಡಂತೆ ಬರೆದರು, ನುಡಿದರು. ಸರಿ ಅನಿಸದಿದ್ದಾಗ ತನ್ನ ವೃತ್ತಿ ಬಾಂಧವರ ಮೇಲೆಯೇ ಸಿಟ್ಟು ಮಾಡಿಕೊಂಡರು. ನೇರ-ದಿಟ್ಟನಿರಂತರತೆಯ ಕಾರಣಕ್ಕಾಗಿ ವಿವಾದ ಮೈಮೇಲೆ ಎಳೆದುಕೊಂಡರು. ಇದು ಅವರ ವ್ಯಕ್ತಿತ್ವ ಮತ್ತು ವರ್ಣರಂಜಿತ ಬದುಕು. ಕೆಲ ಹಿರಿಯ ಪತ್ರಕರ್ತರನ್ನು ಕಂಡಾಗ ಹಲವು ರೀತಿಯ ಪ್ರಶ್ನೆಗಳು ನನ್ನಲ್ಲೇ ಹರಿದಾಡಿದ್ದುಂಟು.
ಅವರೊಂದಿಗೆ ಮಾತನಾಡಿದಾಗ ಅನುಮಾನಗಳೇ ಹೆಚ್ಚಾಗಿದ್ದುಂಟು. ಅವರಿಗೆ ಸಿಕ್ಕ ಅವಕಾಶ, ಅನನ್ಯತೆ, ಅನುಕೂಲ ನಮಗೇಕೆ ಸಿಗಲಿಲ್ಲ ಎಂದು ಕೊರಗಿದ್ದುಂಟು. ಈ ಸಂಘರ್ಷವನ್ನು ಮತ್ತಷ್ಟು ಹೆಚ್ಚು ಮಾಡಿದ್ದು ಗಣೇಶ್ ಕಾಸರಗೋಡು. ಅವರ ಪ್ರತಿ ಪುಸ್ತಕ ಓದಿದಾಗಲೂ ಇತಿಹಾಸ ಇಣುಕುತ್ತದೆ. ಇಂಥದ್ದೊಂದು ಘಟನೆ ನಡೆದಿರಲಿಕ್ಕೆ ಸಾಧ್ಯವಾ ಅನಿಸುತ್ತದೆ. ಛೇ.. ಅವರು ಹಾಗೆ ಬರೆಯಬಾರದಿತ್ತು ಎಂಬ ಸಣ್ಣ ಮರುಕ ಮೂಡುತ್ತದೆ. ಅದಕ್ಕೆ ಕೊಟ್ಟ ಪೂರಕ ಮಾಹಿತಿ ನಂಬಿಕೆ ಹುಟ್ಟಿಸುತ್ತದೆ. ಇದು ಲೇಖಕನಿಗೆ ಇರಬೇಕಾದ ಗುಣಲಕ್ಷಣ. ಈ ಲಕ್ಷಣದೊಂದಿಗೆ ಅವರು ಜೀವಿಸಿದ್ದಾರೆ. ನಾವು ಹೊದ್ದು ಮಲಗಿದ್ದೇವೆ.
ನಲವತ್ತು ಚಿತ್ರ ವೃತ್ತಿ ಜೀವನದಲ್ಲಿ ಇವರು ಸಿನಿಮಾ ರಂಗವನ್ನು ಕಂಡ ಪರಿಗೆ ಬೆರಗಾಗಿದ್ದೇನೆ. ಅದನ್ನು ದಾಖಲಿಸಿದ ರೀತಿಗೆ ಶರಣಾಗಿದ್ದೇನೆ. ವಿಷಯವನ್ನು ಗ್ರಹಿಸುವ ಪರಿ, ಅದಕ್ಕೆ ಬೇಕಿರುವ ಆಕರ ಸಂಗ್ರಹ, ಸಾಂದರ್ಭಿಕ ಚಿತ್ರಗಳ ಬಳಕೆ, ವಸ್ತುಸ್ಥಿತಿಯನ್ನು ಅದೇ ಕಾಲಘಟ್ಟಕ್ಕೆ ಹೋಗಿ ಕಟ್ಟಿಕೊಡುವ ಚಮತ್ಕಾರ ಅನನ್ಯ.
ಡಾ| ಶರಣು ಹುಲ್ಲೂರು

Share
Subscribe to our emails
Subscribe to our mailing list for insider news, product launches, and more.