{"product_id":"belaku-beladingala-deepagalu-personality-development-yandamoori-veerendranath-translated-to-kannada-by-yatiraj-veerambudhi-kannada-book","title":"ಬೆಳಕು ಬೆಳದಿಂಗಳ ದೀಪಗಳು","description":"\u003cp\u003e\"ವಿಜಯಕ್ಕೆ ಐದು ಮೆಟ್ಟಿಲಿನಿಂದ', 'ಹರೆಯದ ಮಕ್ಕಳನ್ನು ಬೆಳೆಸುವುದು ಒಂದು ಕಲೆಯ'ವರೆಗೆ ನನ್ನ ವ್ಯಕ್ತಿತ್ರ ವಿಕಾಸ ಕೃತಿಗಳಲ್ಲಿ ವಿಷಯ ಚರ್ಚೆಯೊಂದಿಗೆ ನನ್ನ ಅನುಭವಗಳನ್ನೂ ಕಥೆಗಳನ್ನೂ ಬರೆಯುತ್ತ ಬಂದಿದ್ದೇನೆ. ಉಳಿದ ಲೇಖಕರ ಬರಹಗಳಿಗೂ, ನನ್ನ ಬರಹಗಳಿಗೂ ವ್ಯತ್ಯಾಸವೇ ಇದು ಎಂದುಕೊಂಡಿದ್ದೇನೆ.\u003c\/p\u003e\n\u003cp\u003eದುರದೃಷ್ಟವಶಾತ್, ಇಂತಹ ಪರ್ಸನಾಲಿಟಿ ಡೆವಲಪ್ ಮೆಂಟ್ ಪುಸ್ತಕಗಳನ್ನು ಮಕ್ಕಳು ಓದುವುದಿಲ್ಲ. ಆದರೆ, ಈ ಪುಸ್ತಕಗಳಲ್ಲಿನ ಕೆಲವು ಕತೆಗಳು ಮಕ್ಕಳಿಗೆ ಉತ್ಸಾಹವನ್ನು, ಉತ್ತೇಜನವನ್ನು ನೀಡುತ್ತವೆ. ಅಂತಹ ಎಲ್ಲ ಕತೆಗಳನ್ನೂ ಕ್ರೋಢೀಕರಿಸಿ ಒಂದು ಕಡೆ ಸೇರಿಸಿದರೆ, ಅವನ್ನು ಮಕ್ಕಳು ಓದಿಕೊಳ್ಳುವ ಅವಕಾಶ ಇರುವುದೆಂಬ ಆಲೋಚನೆಯೇ ಈ ಪುಸ್ತಕ.\u003c\/p\u003e\n\u003cp\u003eವ್ಯಕ್ತಿತ್ವ ವಿಕಾಸ ಕುರಿತಾದ ನನ್ನ ಪುಸ್ತಕಗಳಿಂದ ಆಯ್ದು ಪೋಣಿಸಿದ ಕತೆಗಳ ಮಾಲೆ ಇದು. ಇದರಲ್ಲಿ ಕೆಲವು ವಿದೇಶಗಳ ಪುರಾತನ ಗಾಥೆಗಳು. ಮತ್ತೆ ಕೆಲವು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳಿಂದ, ಇನ್ನೂ ಕೆಲವು ಅಂತರ್ಜಾಲದಿಂದ ಸ್ವೀಕರಿಸಿದಂಥವು. ಹೆಚ್ಚಿನ ಕತೆಗಳು ನನ್ನವೇ.\u003c\/p\u003e\n\u003cp\u003eಮಲಗುವಾಗ ಮಕ್ಕಳಿಗೆ ಕತೆ ಹೇಳುವ ವಾಡಿಕೆ ಹಿರಿಯರಲ್ಲಿ ಕಡಿಮೆಯಾಗಿದೆ.\u003c\/p\u003e\n\u003cp\u003e'ನಮಗೆ ಗೊತ್ತಿದ್ದರೆ ತಾನೇ ಮಕ್ಕಳಿಗೆ ಹೇಳುವುದು' ಎನ್ನುತ್ತಾರೆ ಕೆಲವರು. ಈ ಕೃತಿಯು ಆ ಕೊರತೆಯನ್ನು ತುಂಬುವುದೆಂಬ ಸಣ್ಣ ಆಸೆಯೇ ಈ 'ಬೆಳಕು ಬೆಳದಿಂಗಳ ದೀಪಗಳು'.\u003c\/p\u003e\n\u003cp\u003e-ಯಂಡಮೂರಿ ವೀರೇಂದ್ರನಾಥ್\u003c\/p\u003e","brand":"Yandamoori Veerendranath | Kannada: Yatiraj Veerambudhi","offers":[{"title":"Default Title","offer_id":47662430093571,"sku":"HB00005503137","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BelakuBeladingaladeepagalufp.jpg?v=1769018162","url":"https:\/\/harivubooks.com\/products\/belaku-beladingala-deepagalu-personality-development-yandamoori-veerendranath-translated-to-kannada-by-yatiraj-veerambudhi-kannada-book","provider":"Harivu Books","version":"1.0","type":"link"}