{"product_id":"belakina-bele-collections-of-essay-m-g-hegde-kannada-book","title":"ಬೆಳಕಿನ ಬೆಳೆ","description":"\u003cp\u003eಆಮೂರರ ಕೃತಿ ಪರೀಕ್ಷೆಯ ಶ್ರಮದ ಹಿಂದೆ ಹಲವು ಸಾಹಿತ್ಯಗಳ ಜ್ಞಾನ ಕೆಲಸ ಮಾಡುತ್ತಿರುತ್ತದೆ. ವಿದ್ವತ್ತಿನ ವ್ಯಾಪಕತೆ ಇರದ ಬರಿಯ ಉತ್ಕಟ ರಸಪ್ರಜ್ಞೆಯ ವಿಮರ್ಶೆಗಿಂತ ಈ ರೀತಿಯ ವಿಮರ್ಶೆ ನಮ್ಮ ಕೃತಿಗಳ ಅನನ್ಯತೆಯನ್ನು ಹೆಚ್ಚು ಖಚಿತವಾಗಿ ಬೆಳಕಿಗೆ ತರುತ್ತದೆ.\u003c\/p\u003e\n\u003cp\u003eಡಿ ಆರ್ ನಾಗರಾಜ\u003c\/p\u003e\n\u003cp\u003eಇಂಗ್ಲಿಷ್ ಸಾಹಿತ್ಯದ ಅಭ್ಯಾಸದಂತೆಯೇ ಕನ್ನಡ ಸಾಹಿತ್ಯದ ಅಭ್ಯಾಸವೂ ಇಡೀ ಮನಸ್ಸನ್ನು ಸುಶಿಕ್ಷಿತಗೊಳಿಸಬಲ್ಲ ಶಿಸ್ತಾಗಬಹುದೆಂದು ನಮಗೆ ಅನ್ನಿಸುವ ಕನ್ನಡ ಸಾಹಿತ್ಯ ವಿಮರ್ಶಕರು ಅಪರೂಪ. ಇಂಥ ಅಪರೂಪದ ಹಿರಿಯ ವಿಮರ್ಶಕರು ಡಾ. ಆಮೂರರು.\u003c\/p\u003e\n\u003cp\u003eಯು ಆರ್ ಅನಂತಮೂರ್ತಿ\u003c\/p\u003e\n\u003cp\u003eಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಸಾಹಿತ್ಯಗಳಲ್ಲಿ ಅಗಾಧ ವ್ಯುತ್ಪತ್ತಿ, 'ಸಾಹಿತ್ಯ'ವೆಂಬ ಜ್ಞಾನಶಾಖೆಯನ್ನು ಕುರಿತ ಗಾಢ ಪ್ರೀತಿ ಮತ್ತು ತೀಕ್ಷ್ಯ ವ್ಯಾಖ್ಯಾನ ಪ್ರತಿಭೆ -ಈ ಮೂರೂ ಗುಣಗಳು ಪರಸ್ಪರ ಪೂರಕವಾಗಿ ಡಾ.ಜಿ.ಎಸ್. ಆಮೂರರ ವಿಮರ್ಶೆಯಲ್ಲಿ ಮೇಲೈಸುತ್ತವೆ.\u003c\/p\u003e\n\u003cp\u003eಸಿ ಎನ್ ರಾಮಚಂದ್ರನ್\u003c\/p\u003e\n\u003cp\u003eಕೆಡಹುವ ಆವೇಶಕ್ಕಿಂತ ಕಟ್ಟುವ ಸಂಯಮವನ್ನು ಅಮೂರರ ರಚನೆಗಳುದ್ದಕ್ಕೂ ಕಾಣಬಹುದಾಗಿದೆ.\u003c\/p\u003e\n\u003cp\u003eಎಂ ಎಂ ಕಲಬುರ್ಗಿ\u003c\/p\u003e\n\u003cp\u003eಡಾ. ಆಮೂರರ ಬರಹಗಳು ಏಕಕಾಲಕ್ಕೆ ಸಾಹಿತ್ಯ ಚರಿತ್ರೆ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳ ಸಮ್ಮೇಳನದಿಂದ ನಿಷ್ಪನ್ನವಾಗುವ ಹೊಸ ಸಂಗತಿಗಳನ್ನು. ಹೊಳಹುಗಳನ್ನು ಒಳನೋಟಗಳನ್ನು ಪ್ರಕಟಿಸುತ್ತವೆ.\u003c\/p\u003e\n\u003cp\u003eಜಿ ಎಸ್ ಶಿವರುದ್ರಪ್ಪ\u003c\/p\u003e\n\u003cp\u003eಆಮೂರರು ಭಾರತದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು.\u003c\/p\u003e\n\u003cp\u003eಚಂದ್ರಶೇಖರ ಕಂಬಾರ\u003c\/p\u003e","brand":"M. G. Hegde","offers":[{"title":"Default Title","offer_id":47684111696131,"sku":"HB00006078","price":675.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-07at1.36.01PM.jpg?v=1770451666","url":"https:\/\/harivubooks.com\/products\/belakina-bele-collections-of-essay-m-g-hegde-kannada-book","provider":"Harivu Books","version":"1.0","type":"link"}