Ranjaan Darga
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ನಾವೀಗ ಸಂಘರ್ಷದ ಬದುಕಿನಲ್ಲಿ ಬಾಳುತ್ತಿದ್ದೇವೆ. ಪ್ರಭುತ್ವ ಪ್ರಾಯೋಜಿತ ಕೋಮುವಾದ, ಜಾಗತೀಕರಣ, ಪ್ರಾದೇಶಿಕತೆ, ಭಯೋತ್ಪಾದನೆಗಳು ನಮ್ಮ ನೆಲದಲ್ಲಿ ಸಮಸ್ಯೆಗಳಾಗಿ ಬೆಳೆದು ನಮ್ಮ ಬುಡವನ್ನೇ ಅಲ್ಲಾಡಿಸುವಷ್ಟು ಶಕ್ತವಾಗಿವೆ.
ಈ ಸಂದರ್ಭದಲ್ಲಿ, ಸಮಾನತೆಯ ಸಮಾಜವನ್ನು ಕಟ್ಟುವ ಉದ್ದೇಶದಿಂದ, ಜೀವಪರ ಸಂಗಾತಿಗಳು ನಡೆಸುವ ಎಲ್ಲ ಪ್ರಯತ್ನಗಳಿಗೆ ಪೂರಕವಾಗಿ, ಜನರ ಆಲೋಚನೆಗಳನ್ನು ರೂಪಿಸಲು ಸಾಧ್ಯವಾಗುವ ಸಾಹಿತ್ಯವನ್ನು ಪ್ರಕಟಿಸುವ ವಿಚಾರ ನಮ್ಮದಾಗಿದೆ. ಇಂಥ ಪ್ರಗತಿಪರ ಸಾಹಿತ್ಯವನ್ನು ಸಾಮಾನ್ಯ ಜನರು ಕೊಳ್ಳಲು ಸಾಧ್ಯವಾಗುವ ಬೆಲೆಯಲ್ಲಿ ಕೊಡಬೇಕು.
ಅಕ್ಷರಗಳಿಂದ ಏನೂ ಆಗುವುದಿಲ್ಲ ಎಂದು ಹೇಳುವ ಒಂದು ಅಭಿಪ್ರಾಯವಿದೆ, ಆದರೆ ಅಕ್ಷರಗಳಿಂದ ಏನೆಲ್ಲವನ್ನು ಸಾಧಿಸಬಹುದು ಅನ್ನುವುದು ಅಷ್ಟೇ ಸತ್ಯ. ಅಕ್ಷರ ಸಂಸ್ಕೃತಿಯೇ ಮಾಯವಾಗುತ್ತಿರುವ ಸಂದರ್ಭ ಒಂದು ಕಡೆಯಾದರೆ, ಯಾವುದನ್ನು ಮತ್ತು ಎಂಥದನ್ನು ನಾವು ಓದಬೇಕು? ನಮ್ಮರಿವಿಗೆ ಯಾವುದು ಪೂರಕ, ವರ್ತಮಾನದ ಸಂಘರ್ಷಗಳಿಗೆ ಅಕ್ಷರಗಳು ಯಾವ ರೀತಿಯ ಉತ್ತರ ಕೊಡಬಲ್ಲವು ಎನ್ನುವುದನ್ನು ಜನತೆಯ ಹತ್ತಿರ ನಾವೇ ಕೊಂಡೊಯ್ಯಬೇಕಾಗಿದೆ. ಇದು ನಮ್ಮೆದುರಿನ ಅನಿವಾರ್ಯತೆಗಳಲ್ಲಿ ಒಂದು.
