{"product_id":"bangarakaddi-derehoovu-stories-naveen-tejaswi-kannada-book","title":"ಬಂಗಾರಕಡ್ಡಿ ಡೇರೆಹೂವು","description":"\u003cp\u003eಬಂಗಾರಕಡ್ಡಿ ಡೇರೆಹೂವು | ನವೀನ್ ತೇಜಸ್ವಿ\u003c\/p\u003e\n\u003cp\u003e\u003cbr\u003eಮಲೆನಾಡಿನ ಹಳ್ಳಿಯೊಂದರಲ್ಲಿ ಇಂದಿನ ದಿನ ನಡೆಯುವ ಮನಮುಟ್ಟುವ ಹತ್ತು ಕತೆಗಳು. ಎಲ್ಲ ಕತೆಗಳು ನೈಜ ಘಟನೆ ಆಧಾರಿತ ಕತೆಗಳು. ಇವತ್ತಿನ ದಿನ, ಒಂದೇ ಊರಿನಲ್ಲಿ ನಡೆಯುವ ಈ ಕತೆಗಳು ಒಂದೊಂದಾಗಿ ಓದಿದಾಗ ಸಣ್ಣ ಕತೆಗಳಾಗಿ ಓದಿಸಿಕೊಂಡರೆ, ಹತ್ತು ಕತೆಗಳನ್ನು ಒಟ್ಟಾಗಿ ಓದಿದಾಗ ಬೇರೆ ಬೇರೆ ಕತೆಗಳಲ್ಲಿ ಮತ್ತೆ ಮತ್ತೆ ಕಾಣುವ ಅದೇ ಪಾತ್ರಗಳ, ಜಾಗಗಳ ಕಾರಣದಿಂದ ಕಾಂಪೋಸಿಟ್ ನಾವೆಲ್ (ಸಂಕೀರ್ಣ ಕಾದಂಬರಿ) ಓದಿದ ಅನುಭವವನ್ನು ನೀಡುತ್ತದೆ. ಎಲ್ಲ ಕತೆಗಳಲ್ಲಿ ಸಹಜವಾಗೇ ದುಡಿಯುವ ವರ್ಗದ ನೋವು, ನಲಿವು, ಆಸೆ, ಆಕಾಂಕ್ಷೆ, ಹೋರಾಟ, ಭರವಸೆಗಳು ಮೂಡಿವೆ. ಇಲ್ಲಿನ ಕತೆಗಳಿಗೆ 2024ರ ಪ್ರತಿಷ್ಟಿತ ಟೋಟೋ ಪ್ರಶಸ್ತಿ ದೊರೆತಿದೆ.\u003c\/p\u003e\n\u003cp\u003e \u003c\/p\u003e\n\u003cp\u003eಲೇಖಕರ ಪರಿಚಯ:\u003cbr\u003eನವೀನ್ ತೇಜಸ್ವಿ, ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದ ಮೊದಲ ತಲೆಮಾರಿನ ವಿಧ್ಯಾರ್ಥಿ. ಇವರು ಒಬ್ಬ ಬರಹಗಾರ, ಸಿನಿಮಾ ನಿರ್ದೇಶನ ಮತ್ತು ಸಂಗೀತಗಾರ. ಬಿಡುಗಡೆ, ಹಬ್ಬಹರಿದಿನ ಸುಗ್ಗಿ ಶಿವರಾತ್ರಿ, ಇಮಾನ ಇವರ ಕಿರುಚಿತ್ರಗಳು. ಈ ಎಲ್ಲ ಚಿತ್ರಗಳು ಊರಿನ ಜನರೊಟ್ಟಿಗೆ ಕೂಡಿ ಮಾಡಿದ ಕಿರುಚಿತ್ರಗಳು. ಇಲ್ಲಿಯವರೆಗೆ ಸುಮಾರು ನೂರು ಮಂದಿ ಊರಿನ ಜನರ ಅವರ ಸಿನಿಮಾಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. ಈ ಕಿರುಚಿತ್ರಗಳು ಜಗತ್ತಿನಾದ್ಯಂತ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿವೆ. ಇಂಗ್ಲೀಷಿನಲ್ಲಿ ಬರೆದ ಇವರ ಪ್ರಬಂಧ 'ಟ್ರ್ಯಾಕ್ ಒನ್' ೨೦೨೩ರ ಬಾರ್ಬ್ರ ನಾಯ್ಡು ಪ್ರಶಸ್ತಿಯನ್ನು ಪಡೆದಿದೆ. ಸದರಿ ಪ್ರಬಂಧ ಸಂತ ಜೋಸೆಫರ ವಿಶ್ವವಿದ್ಯಾಲಯದ ಬಿಎ ಇಂಗ್ಲೀಷ್ ಪಠ್ಯಕ್ರಮದ ಭಾಗವಾಗಿದೆ. ಕನ್ನಡ ಕ್ರಿಯಾಶೀಲ ಬರಬಣಿಗೆಗೆ ನೀಡಲಾಗುವ ಪ್ರತಿಷ್ಟಿತ ಟೋಟೋ ಪ್ರಶಸ್ತಿ 2024, ಮತ್ತು ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ 2026 ಪ್ರಶಸ್ತಿ ಇವರಿಗೆ ಲಭಿಸಿದೆ. ಇವರು ತಮ್ಮ ಬರಹ ಮತ್ತು ಸಿನಿಮಾದ ಮೂಲಕ ಅವರ ಊರಿನ ಕತೆಗಳನ್ನು ಹೇಳುತ್ತಾರೆ. ತಮ್ಮ ಹಳ್ಳಿಯಲ್ಲಿನ ಸುಮಾರು 200ಕ್ಕೂ ಅಧಿಕ ಮಕ್ಕಳಿಗಾಗಿ ಸಮುದಾಯ ಕಲಿಕಾ ಕೇಂದ್ರವೊಂದನ್ನು (ಭೀಮಶಾಲೆ) ತೆರೆದಿದ್ದಾರೆ. ಪ್ರಸ್ತುತ ಇವರು ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಫುಲ್ಬ್ರೈಟ್ ಫೆಲೋ ಆಗಿದ್ದಾರೆ.\u003c\/p\u003e","brand":"Naveen Tejaswi","offers":[{"title":"Default Title","offer_id":49389918191875,"sku":"HB00007415","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BangarakaddiDerehoovu_5afa8db9-b5f9-4da0-8e43-0c5f9efa75a1.jpg?v=1786190465","url":"https:\/\/harivubooks.com\/products\/bangarakaddi-derehoovu-stories-naveen-tejaswi-kannada-book","provider":"Harivu Books","version":"1.0","type":"link"}