{"product_id":"banagiri-novel-kannada-book","title":"ಬನಗಿರಿ","description":"\u003cp\u003e...ನೀರಿನ ಮೇಲೆ ಚಲಿಸಿದಂತೆಲ್ಲಾ ಅದು ಪ್ರತಿಫಲಿಸುತ್ತಿದ್ದ ಬೆಂಕಿಯ ಬೆಳಕೂ ಅಲುಗಾಡಿ, ಅದನ್ನೇ ದಿಟ್ಟಿಸುತ್ತಿದ್ದವರ ಮನಸ್ಸಿನಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಸುತ್ತಮುತ್ತೆಲ್ಲಾ ಕತ್ತಲು ಕವಿದಿದ್ದು, ಆ ಕತ್ತಲೆಯ ಮಧ್ಯ ಕೇಸರಿಯ ಬಟ್ಟಲಿನಂತೆ ಕಾಣುತ್ತಿದ್ದ ಕೆರೆಯು; ಕೆಂಪನಿಗೆ ಊರಿನ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವುದಕ್ಕೆ ಹಾಕಿರುತ್ತಿದ್ದ ನಿಗಿನಿಗಿ ಕೆಂಡಗಳನ್ನು ನೆನಪಿಗೆ ತಂದಿತು. ಇದ್ದಕ್ಕಿದ್ದಂತೆ ದಢಾರನೆ ಮೇಲೆದ್ದು \"ಅವ್ವಾ ನಾನ್ ಹೇಡಿನೇ ಆಗಿದ್ರೆ, ನನ್ ಜೀವ ತಗೊಂಬುಡು...\" ಎನ್ನುತ್ತಾ ಕೆರೆಯೆಡೆಗೆ ಓಡತೊಡಗಿದನು...'\u003c\/p\u003e\n\u003cp\u003e-'ಬನಗಿರಿ ಗೇಟೆಡ್ ಕಮ್ಯುನಿಟಿ'\u003c\/p\u003e\n\u003cp\u003eಗೇಟೆಡ್ ಕಮ್ಯುನಿಟಿ\u003c\/p\u003e\n\u003cp\u003e'ಗೇಟೆಡ್' ಎಂದರೆ ಬಾಗಿಲು ಎನ್ನುವುದಕ್ಕಿಂತ ಹೆಚ್ಚು. ಬೇಲಿ ಎನ್ನುವ ಅರ್ಥವನ್ನು ಈ ಕಾದಂಬರಿ ಕೊಡುತ್ತದೆ... ಒಳಗಿರುವವರ 'ಪ್ರಿವಿಲೈಜ್' ಸ್ಥಾನ ಮತ್ತು ಹೊರಗಿರುವವರ ಒಳಗೆ ನುಗ್ಗುವ ಹಂಬಲ ಒಂದು ಸತತ ಹಣಾಹಣಿ. ಇರುವವರ, ಇಲ್ಲದವರ ಮುಖಾಬಿಲೆ. ಇಲ್ಲಿ ಈ ಗೇಟ್ ಬಹು ಅರ್ಥದಲ್ಲಿ ರೂಪಕವಾಗಿದೆ...'\u003c\/p\u003e\n\u003cp\u003e-ಡಾ. ಗುರುಪ್ರಸಾದ್ ಕಾಗಿನೆಲೆ\u003c\/p\u003e\n\u003cp\u003e...ಭೂಮಿ-ನೆಲೆ-ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು...\u003c\/p\u003e","brand":"Dr. Shreedhar K B","offers":[{"title":"Default Title","offer_id":47717083119875,"sku":"HB00006062","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-06at12.34.01PM.jpg?v=1770361662","url":"https:\/\/harivubooks.com\/products\/banagiri-novel-kannada-book","provider":"Harivu Books","version":"1.0","type":"link"}