{"product_id":"banada-karadi-stories-vinaya-gunte-kannada-book","title":"ಬನದ ಕರಡಿ","description":"\u003cp\u003eಸಂಕಲನದ ಮತ್ತೊಂದು ಮುಖ್ಯ ಕಥೆ 'ಬನದ ಕರಡಿ.' ಇದು, ಸಂಕಲನದ ಶೀರ್ಷಿಕೆ ಕಥೆ ಮಾತ್ರವಲ್ಲದೆ, ವಿನಯ್ ಅವರ ಮುಖ್ಯ ಕಥೆಯೂ ಹೌದು. ವಸ್ತು ಹಾಗೂ ನಿರ್ವಹಣೆ, ಎರಡು ಕಾರಣದಿಂದಲೂ 'ಬನದ ಕರಡಿ' ಗಮನಸೆಳೆಯುವ ಕಥೆ. ಲಂಕೇಶರ 'ಅವ್ವ' ಕವಿತೆಯಲ್ಲಿ ಬರುವ 'ಬನದ ಕರಡಿ' ಎನ್ನುವ ಮಾತು, ಅಮ್ಮನ ಜೀವನಪ್ರೀತಿ ಹಾಗೂ ಸಾಮರ್ಥ್ಯ ಎರಡನ್ನೂ ಸೂಚಿಸುವಂತಹದ್ದು. ಧನಾತ್ಮಕ ನೆಲೆಯ ಈ ಮಾತನ್ನು ವಿನಯ್, ವಿರುದ್ಧ ಅರ್ಥದಲ್ಲಿ ಬಳಸಿದ್ದಾರೆ. ಶೀರ್ಷಿಕೆ ಮಾತ್ರವಲ್ಲ, ಕಥೆಯ ವಸ್ತು ಕೂಡ ಅಮ್ಮನ ಕುರಿತ ಸಿದ್ದಮಾದರಿಯ ಭಾವಕೋಶವನ್ನು ಒಡೆಯುವಂತಹದ್ದು. ಕಥಾನಾಯಕಿ ಪಾಪಮ್ಮ ತನ್ನ ಮಗ ಹಾಗೂ ಮಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿರುವವಳು. ತನ್ನ ಅವ್ವನನ್ನು ಈ ಕೆರೆ ನುಂಗಬಾರದಿತ್ತೇ ಎಂದು ಮಗ ಹಂಬಲಿಸುವಷ್ಟು? ಆವೇಶದಿಂದ ಅಮ್ಮನ ಮೇಲೆ ಮಗನೇ ಕೈ ಮಾಡುವ ಮಟ್ಟಿಗೆ? ಪಾಪಮ್ಮ ಮಕ್ಕಳನ್ನು ಕಾಡಿದ್ದಾಳೆ. ಮಗನಿಗೆ ತಾಯಿಯ ಮಾನಸಿಕ ಸ್ಥಿತಿಗೆ ಕಾರಣ ಅರಿವಾಗಿ, ಅವಳನ್ನು ಇರುವಂತೆಯೇ ಒಪ್ಪಿಕೊಳ್ಳುವ ಕ್ಷಣದಲ್ಲಿ, ಅವನು ಕ್ಷಮೆ ಕೇಳಿ ಅಮ್ಮನ ಮಡಿಲಲ್ಲಿ ಮುಖ ಹುದುಗಿಸುವ ಕ್ಷಣದಲ್ಲಿ, ಮಗನ ಅನುಕಂಪವನ್ನೂ ಧಿಕ್ಕ-ರಿಸುವಂತೆ ಆಕೆಯ ಬದುಕು ಕೊನೆಗೊಳ್ಳುತ್ತದೆ. ಬಾಲ್ಯದ ಗಾಯವನ್ನು ಮಗನಿಗೆ ಕಾಣಿಸುವ ಮೂಲಕ ನಿರಾಳಗೊಳ್ಳುವ 'ಅಪ್ಪನ ಚಪ್ಪಲಿಗಳು' ಕಥೆಯಲ್ಲಿನ ತಂದೆಯ ಅದೃಷ್ಟ, ಅಮ್ಮನ ಹಿನ್ನೆಲೆ ತಿಳಿದ ನಂತರ ಅವಳ ಬಗ್ಗೆ ಆರ್ದನಾಗುವ ಮಗನಿಗೂ ಅವನ ತಾಯಿಗೂ ಇಲ್ಲ. ತಾಯಿಯ ಸಂಕಟದಷ್ಟೇ ಮಗನಲ್ಲಿ ಉಳಿಯಬಹುದಾದ ಪಾಪಪ್ರಜ್ಞೆಯ ಸುಳಿವು ನೀಡುವುದರೊಂದಿಗೆ ಕಥೆ ಮುಗಿಯುತ್ತದೆ.\u003c\/p\u003e\n\u003cp\u003e-ರಘುನಾಥ ಚ.ಹ. ( ಮುನ್ನುಡಿಯಿಂದ )\u003c\/p\u003e","brand":"Vinaya Gunte","offers":[{"title":"Default Title","offer_id":47413250523395,"sku":"HB00005462","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BanadaKaradiMattuItaraKathegalu.jpg?v=1762768713","url":"https:\/\/harivubooks.com\/products\/banada-karadi-stories-vinaya-gunte-kannada-book","provider":"Harivu Books","version":"1.0","type":"link"}