Dr. K. N. Ganeshaiah
Publisher - ಅಂಕಿತ ಪುಸ್ತಕ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬಾರದ ಧೀರ ಮಹಿಳೆ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಚೆನ್ನಭೈರಾದೇವಿಯ ಆಡಳಿತ ಮತ್ತು ಅಂದಿನ ವೈಭವಯುತ ಚರಿತ್ರೆಗೆ ಸಾಕ್ಷಿಯಾಗಿದೆ. ಚೆನ್ನಭೈರಾದೇವಿಯ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವುದೇ ಅಲ್ಲದೇ ಅಂದಿನ ಭಾರತದ ಮೆಣಸು ಸಾಂಬಾರ ಪದಾರ್ಥಗಳು ಪಾಶ್ಚಾತ್ಯರನ್ನು ಆಕರ್ಷಿಸಿದ ಬಗ್ಗೆ ಹಾಗೂ ಇಟಲಿಯ ಯಾತ್ರಿಕ ಪೆಟ್ರೊ ಡೆಲ್ಲವೆಲ್ಲನ ಭಾರತದ ಸಂಚಾರದಲ್ಲಿನ ಅವರ ಅನುಭವಗಳು ಇತಿಹಾಸದ ಆಕರಗಳಾಗಿವೆ.
ಜೊತೆಗೆ ತುಳುನಾಡಿನ ಭೂತಾರಾಧನೆಯ ಬಗ್ಗೆ ವಿಶೇಷವಾದ ಮಾಹಿತಿಗಳೊಂದಿಗೆ ತುಳುನಾಡಿನ ಪಾಡ್ದನಗಳು ಓದುಗರ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಪಾಡ್ದನಗಳನ್ನು ಒಗಟಿನ ರೀತಿ ಬಿಚ್ಚುತ್ತಾ ಹೋಗುವ ರೀತಿ ಉಸಿರು ಬಿಗಿಹಿಡಿದು ಓದುವಂತಿದೆ. ಇದಿಷ್ಟೇ ಅಲ್ಲದೇ ಲೇಖಕರು ನೀಡುವ ಪ್ರತಿ ಮಾಹಿತಿಗಳಿಗೂ ಆಕರಗಳನ್ನು ಒದಗಿಸಿರುವುದು ವಿಶಿಷ್ಟವಾಗಿದೆ. ಒಟ್ಟಿನಲ್ಲಿ ಕುತೂಹಲ ಕಾದಂಬರಿ ಎಂಬುದರಲ್ಲಿ ಸಂದೇಹವೇ ಇಲ್ಲ.
