{"product_id":"baduke-ondu-savaalu-kannada-book","title":"ಬದುಕೇ ಒಂದು ಸವಾಲು","description":"\u003cp\u003eನೀವು ಕೈಯಲ್ಲಿ ಹಿಡಿದಿರುವ ಈ ಪುಸ್ತಕ ಬದುಕೇ ಒಂದು ಸವಾಲು ಹದಿನೈದರ ಪ್ರಾಯದ ಕು.ವಿಹಾರಿಕಾ ಅಂಜನಾ ಹೊಸಕೇರಿ ಎಂಬುವಳದ್ದು. ಈಕೆಯ ಬರೆಹವನ್ನು ಓದುತ್ತಿದ್ದರೆ, ನಮಗೆ ಅಚ್ಚರಿ ಉಂಟಾಗುತ್ತದೆ. \"ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ' ಎಂಬ ಹಿರಿಯರ ಮಾತೊಂದುಂಟು. ಈಕೆಯ ಪ್ರಾಯ ಚಿಕ್ಕದಾದರೂ ಅಭಿಪ್ರಾಯ ಸಣ್ಣದಲ್ಲ ಎಂಬುದನ್ನು ಇಲ್ಲಿಯ ಬರೆಹಗಳು ಸಾಕ್ಷೀಕರಿಸುತ್ತವೆ. ಇದು ವಿಹಾರಿಕಾಳ ಚೊಚ್ಚಲ ಪುಸ್ತಕ. ಆದರೆ, ಓದಿದ, ಚಿಂತಿಸಿದ ಮಾತುಗಳನ್ನು ತನ್ನ ಅನುಭವದ ಮೂಸೆಯಲ್ಲಿ ಒರೆಹಚ್ಚುವ ಸಾಹಸವನ್ನು ಇಲ್ಲಿ ಮಾಡಿದ್ದಾಳೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮ ಇವುಗಳನ್ನು ನಾವು ದಿಟಕ್ಕೂ ಮೆಚ್ಚಲೇ ಬೇಕು.\u003c\/p\u003e\n\u003cp\u003eಕು.ವಿಹಾರಿಕಾ ಅಂಜನಾ ಹೊಸಕೇರಿಯ ಈ ಪುಸ್ತಕವು ಆ ವಯಸ್ಸಿನ ಮಕ್ಕಳು ಓದುವುದಲ್ಲದೆ; ಸಮಾಜದ ಬಗೆಗೆ ಕಾಳಜಿಯಳ್ಳವರೆಲ್ಲಾ ಓದಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಓದಬಹುದಾದ ಬರೆಹಗಳನ್ನು ಈಕೆ ಬರೆದಿದ್ದಾಳೆ. ಈಕೆಯ ಬರೆಹದ ಶಕ್ತಿ ಎಂದೂ ಉಡುಗದಿರಲಿ; ಅದು ಉದಿತೋದಿತವಾಗಿ ಬೆಳೆಯುತ್ತಿರಲೆಂದು ಹಾರೈಸುತ್ತೇನೆ.\u003c\/p\u003e\n\u003cp\u003eಪ್ರೊ. ಮಲ್ಲೇಪುರಂ ಜಿ. ವೆಂಕಟೇಶ\u003c\/p\u003e\n\u003cp\u003eವಿಶ್ರಾಂತ ಕುಲಪತಿ\u003c\/p\u003e","brand":"kum Viharika Anjana Hosakeri","offers":[{"title":"Default Title","offer_id":47572677525763,"sku":"HB00006173","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-13at5.58.30PM.jpg?v=1770986017","url":"https:\/\/harivubooks.com\/products\/baduke-ondu-savaalu-kannada-book","provider":"Harivu Books","version":"1.0","type":"link"}