{"product_id":"badukalu-kaliyiri-kannada-book","title":"ಬದುಕಲು ಕಲಿಯಿರಿ","description":"\u003cp\u003eಪ್ರತಿಯೊಬ್ಬ ತರುಣನನ್ನೂ ಒಳ್ಳಿತಿಗೆ, ಉದ್ಧಾರಕ್ಕೆ ಆಸಕ್ತಿ ಹುಟ್ಟುವಂತೆ ಮಾಡುವ ಛಲ ತೊಟ್ಟಿದೆ ಈ ಗ್ರಂಥ. ನಮ್ಮ ಶೈಕ್ಷಣಿಕ ಸಂಸ್ಥೆಗಳು ದಿವ್ಯನಿರ್ಲಕ್ಷ್ಯದಿಂದ ಕಡೆಗಣಿಸಿದ ವಿಷಯಗಳ ಮೇಲೆ ಇಲ್ಲಿ ಮಿತ್ರಸಮ್ಮಿತಿಯ ವ್ಯಾಖ್ಯಾನಗಳಿವೆ; ನಿತ್ಯಜೀವನದಲ್ಲಿ ಬರುವ ಸಾಚಾ ಸನ್ನಿವೇಶಗಳ ಉದಾಹರಣೆಗಳಿವೆ; ಮಹನೀಯರ ಮನನೀಯ ವಾಕ್ಯಗಳ ಉಲ್ಲೇಖಗಳಿವೆ: ವಿಜ್ಞಾನವನ್ನು ಆತ್ಮಜ್ಞಾನದೊಡನ ಮೇಳಯಿಸುವ ಸಮನ್ವಯ ಮಾರ್ಗದಲ್ಲಿ ಸರ್ವಗ್ರಾಹಿಯಾಗಿ, ಜೀವನದ ಸಾಕಲ್ಯವನ್ನು ತಿಳಿಸಿಕೂಡುವ ಹಂಬಲವಿದೆ  ಹಾಗೂ ಹಂಬಲದ ಬೆನ್ನಹಿಂದೆ ತರುಣ ಜನಾಂಗದ ನೋವು ನಲಿವುಗಳನ್ನು ಅರ್ಥಯಿಸಿಕೊಂಡು ಚಿಕಿತ್ಸೆಗೆ ಹೊರಟಿರುವ ಲೇಖಕರ ಅಪೂರ್ವವಾದ ಕಾಳಜಿ ಇದೆ. ಒಟ್ಟಿನಲ್ಲಿ ಕನ್ನಡದಲ್ಲೇ ಇರುವ ಹೊಸಯುಗದ ಉಪನಿಷತ್ತು ಇದು. \u003c\/p\u003e\n\u003cp\u003e-ಪ್ರೊಫೆಸರ್ ಕು. ಶಿ. ಹರಿದಾಸ ಭಟ್ಟ\u003c\/p\u003e","brand":"Swami Jagadathmanada","offers":[{"title":"Default Title","offer_id":42400602456323,"sku":"HB00002187","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b0bca6a3-3535-464b-916b-6dde8177263f.jpg?v=1643440184","url":"https:\/\/harivubooks.com\/products\/badukalu-kaliyiri-kannada-book","provider":"Harivu Books","version":"1.0","type":"link"}