ಬಾಪೂ ನಂತರದ ಭಾರತ ಸಂಪುಟ 2

ಬಾಪೂ ನಂತರದ ಭಾರತ ಸಂಪುಟ 2

ಮಾರಾಟಗಾರ
ರಾಮಚಂದ್ರ ಗುಹ | ಕನ್ನಡಕ್ಕೆ: ಜಿ ಎನ್ ರಂಗನಾಥ ರಾವ್
ಬೆಲೆ
Rs. 395.00
ಕೊಡುಗೆಯ ಬೆಲೆ
Rs. 395.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಇದೊಂದು ಮೈ ಜುಂ ಎನ್ನಿಸುವ ಕಥಾನಕ. ಓದುಗರನ್ನು ಗತಕಾಲದಲ್ಲಿ ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಈ ಕಥಾನಕದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಅರವತ್ತೈದು ವರ್ಷಗಳ ಜ್ವಲಂತ ಚಿತ್ರವಿದೆ. ಸ್ವಾತಂತ್ರ್ಯದ ಸಂಭ್ರಮ, ವಿಭಜನೆಯ ನೋವು, ರಾಜಮಹಾರಾಜರ ತಂಟೆ-ತಕರಾರು, ಈಶಾನ್ಯದಲ್ಲಿ ಸಿಡಿದ ಕಿಡಿಗಳು, ಕಾಶ್ಮೀರದ ತವಕ ತಲ್ಲಣಗಳು, ತುರ್ತು ಪರಿಸ್ಥಿತಿಯ ಅತಿರೇಕಗಳು, ಪಕ್ಷ ರಾಜಕೀಯ, ಅಭಿವೃದ್ಧಿಯ ಆಯಾಮಗಳು, ಆರ್ಥಿಕ ಪ್ರಗತಿ, ಜನ ಸಾಮಾನ್ಯರ ದನಿಮಾರ್ದನಿಗಳು, ದುಃಖದುಮ್ಮಾನಗಳು ಇವೆಲ್ಲವೂ ಇಲ್ಲಿವೆ. ಜೊತೆಗೆ ಗಾಂಧೀಜಿ, ನೆಹರೂ, ಪಟೇಲ್, ಅಂಬೇಡ್ಕರ್, ಜಿನ್ನಾ, ಶಾಸ್ತ್ರಿ, ಜೆಪಿ, ಇಂದಿರಾ ಗಾಂಧಿ, ಚರಣ್ ಸಿಂಗ್, ಹೀಗೆ ತಮ್ಮ ವರ್ಚಸ್ಸಿನಿಂದ, ಸಾಧನೆಗಳಿಂದ ಇತಿಹಾಸ ನಿರ್ಮಿಸಿದವರೆಲ್ಲರೂ ಇದ್ದಾರೆ. ವಿದ್ವತ್ಪೂರ್ಣ ಅಧ್ಯಯನಕ್ಕೆ, ಶಾಸ್ತ್ರಬದ್ಧ ಸಂಶೋಧನೆಗೆ, ಎಚ್ಚರ ತಪ್ಪದ ವಿಶ್ಲೇಷಣೆಗೆ ಹೆಸರಾಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ರಾಮಚಂದ್ರ ಗುಹ ಅವರ ಈ ಬೃಹದ್ಗ್ರಂಥ ಕೇವಲ ಚರಿತ್ರೆಯಲ್ಲ; ಇದೊಂದು ಭಾರತವೆಂಬ ಬಹುಭಾಷೆಯ, ಬಹು ಸಂಸ್ಕೃತಿಯ, ಬಹುಮುಖೀ ಸಮಾಜದ ವಿರಾಟ್ ಸ್ವರೂಪ.