{"product_id":"baalanti-purana-story-shreekala-d-s-kannada-book","title":"ಬಾಳಂತಿ ಪುರಾಣ","description":"\u003cp\u003eಮಗುವನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುವುದಿಲ್ಲ.\u003c\/p\u003e\n\u003cp\u003eಪತ್ರಕರ್ತೆಯಾಗಿ, ನೃತ್ಯಗಾತಿಯಾಗಿ ಹೆಸರು ಮಾಡಿದ ಶ್ರೀಕಲಾ ಡಿ ಎಸ್ ಈ 'ಬಾಳಂತಿ ಪುರಾಣ'ದ ಮೂಲಕ ಅಪರಿಚಿತ ಲೋಕದ `ಪರದೆಯನ್ನು ಸರಿಸಿದ್ದಾರೆ. ಒಂದು ಜೀವ ಕಣ್ಣು, ಮೂಗು ಲೇಪಿಸಿಕೊಂಡು ಹೊರ ಜಿಗಿಯುವ, ಬೆಳೆಯುವ ಕೌತುಕವನ್ನು ಗುಟ್ಟಾಗಿ ಉಳಿಸಿಬಿಟ್ಟಿರುವಾಗ, ಜೀವ ವಿಜ್ಞಾನದ ಒಂದು ಮಹತ್ತರ ಬೆಳವಣಿಗೆಯನ್ನು ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಿಬಿಟ್ಟಿರುವಾಗ ಈ ಕೃತಿ ಹೊರಬಂದಿದೆ.\u003c\/p\u003e\n\u003cp\u003eಐ ಟಿ ಬಿ ಟಿ ಯ ಕಾಲದಲ್ಲಿದ್ದರೂ, ಕ್ಷಣಮಾತ್ರಕ್ಕೆ ಜಗತ್ತಿನ ಅನೇಕ ಸಂಗತಿಗಳನ್ನು ಎಳೆದುಕೊಂಡು ಅಂಗೈಯೊಳಗೆ ಕೂರಿಸಿಕೊಳ್ಳುವ ಅವಕಾಶವಿದ್ದರೂ ಹೆಣ್ಣಿನ ಲೋಕ ಮಾತ್ರ ಅರಿವಿನ ಪರಿಧಿಯಿಂದ ಆಚೆಯೇ ಕೂರಿಸಲಾಗಿದೆ. ಆ ಕಾರಣಕ್ಕಾಗಿಯೇ ಶ್ರೀಕಲಾ ಅವರ ಈ ಹೆಜ್ಜೆಗೆ ಮಹತ್ವದ ತೂಕವಿದೆ.\u003c\/p\u003e\n\u003cp\u003eಶ್ರೀಕಲಾ ಅವರ ಬರಹದಲ್ಲಿ ತುಂಟತನವಿದೆ. ಹೇಳುವುದರಲ್ಲಿ ಸ್ಪಷ್ಟತೆ ಇದೆ. ಆ ಕಾರಣಕ್ಕಾಗಿಯೇ ಈ ಕೃತಿ ಬಾಣಂತನದ ಅರಿವು ಮೂಡಿಸುವ ಒಂದೇ ಕೆಲಸವನ್ನು ನಿರ್ವಹಿಸುತ್ತಿಲ್ಲ. ಲವಲವಿಕೆಯ ಹುಡುಗಿಯೊಬ್ಬಳು ತನ್ನ ಬಾಣಂತನದ ಬರಹಕ್ಕೂ ಅಷ್ಟೇ ಲವಲವಿಕೆಯ ಆಯಾಮ ನೀಡಿದ್ದಾಳೆ. ಈ ಕಾಲದ 'ನೆಟಿಜನ್'ಗಳು ಮಗುವನ್ನೂ ಸಹಾ ಯಾವುದೇ ಆಪ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದೇ ನಂಬಿಬಿಡುವ ಅಪಾಯವನ್ನು ಶ್ರೀಕಲಾ 'ಬಾಳಂತಿ ಪುರಾಣ'ದ ಮೂಲಕ ತಪ್ಪಿಸಿದ್ದಾರೆ.\u003c\/p\u003e\n\u003cp\u003eಜಿ ಎನ್ ಮೋಹನ್\u003c\/p\u003e","brand":"Shreekala. D. S","offers":[{"title":"Default Title","offer_id":47602660016387,"sku":"HB0000550246","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BaalantiPurana.jpg?v=1767686903","url":"https:\/\/harivubooks.com\/products\/baalanti-purana-story-shreekala-d-s-kannada-book","provider":"Harivu Books","version":"1.0","type":"link"}